“ನೀರು ಅಮೂಲ್ಯ” ಅದನ್ನು ಕಾಪಾಡಿ…! | ಜಲ ಸಂರಕ್ಷಣೆ ಮತ್ತು ನಿರ್ವಹಣೆ ನಮ್ಮೆಲ್ಲರ ಬಹುಮುಖ್ಯ ಆದ್ಯತೆಯಾಗಲೇಬೇಕು

August 24, 2024
2:15 PM

ನಮಗೆ ಅತೀ ಅವಶ್ಯವಿರುವ ಪಂಚಭೂತಗಳಲ್ಲಿ ಜೀವಜಲ(Water) ಎನಿಸಿಕೊಂಡಿರುವ ನೀರೂ ಒಂದು. ಜಗತ್ತು ಇಂದು ನೀರಿನ ಕೊರತೆಯ(Water Scarcity) ಕಾರಣದಿಂದ ಅಶಾಂತಿ, ಅಪಾಯದ ಭೀತಿಯನ್ನು ಎದುರಿಸುವಂತಾಗಿದೆ. ಭೂಮಿಯ(Earth) ಮೇಲ್ಫದರವು ಶೇ. 71ರಷ್ಟು ಭಾಗ ನೀರಿನಿಂದಲೇ ಆವೃತವಾಗಿ, ನಿರಂತರ ಚಾಲನಾ ಸ್ಥಿತಿಯಲ್ಲಿದ್ದರೂ ಬಳಕೆಗೆ ಸಿಗುವ ನೀರಿನ ಪ್ರಮಾಣ ಶೇ.! ಕ್ಕಿಂತಲೂ ಕಡಿಮೆ. ಏಕೆಂದರೆ, ಶೇ. 96.63 ಭಾಗ ಸಮುದ್ರದ ಉಪ್ಪು ನೀರು(Sea salt water). ಇನ್ನುಳಿದ ಶೇ.2.37ನೀರು ಧ್ರುವ ಪ್ರದೇಶ ಹಾಗೂ ಶಿಲಾಸ್ತರಗಳ ಆಳದಲ್ಲಿದೆ. ಇದಕ್ಕಾಗಿ ಜಗತ್ತಿನಾದ್ಯಂತ ಅನೇಕ ಕಡೆ ನದಿ(River), ಸರೋವರಗಳ(Lake) ನೀರನ್ನು ಕಾಪಾಡುವ ಪ್ರಯತ್ನ ನಡೆಯುತ್ತಲಿದೆ.

ನೀರಿನ ರಕ್ಷಣೆಯ ಕೆಲ ಅಂಶಗಳು:

  1. ತ್ಯಾಜ್ಯ ನೀರು:ಮಾನ್ಯವಾಗಿ ಬಳಸುವ ನೀರಿನ ಶೇ. 80 ರಷ್ಟು ನೀರು ತ್ಯಾಜ್ಯ ರೂಪದಲ್ಲಿ ವ್ಯರ್ಥವಾಗಿ ಹೋಗುತ್ತದೆ. ಹೀಗೆ ವ್ಯರ್ಥವಾಗುವ ನೀರನ್ನು ಕೊಳವೆ ಮಾರ್ಗದ ಮೂಲಕ ಹರಿಸಿ ಶುದ್ದೀಕರಿಸುವುದು.
  2.  ಪ್ರತಿಯೊಂದು ಗ್ರಾಮದ ಜನರು ನೀರಿನ ಆಕರಗಳಿಗೆ (ಕೊಳವೆ ಬಾವಿ ಮತ್ತು ತೆರೆದ ಬಾವಿ) ಕೊಳಚೆ ನೀರು ಹರಿಯದಂತೆ ನೋಡಿಕೊಳ್ಳಬೇಕು.
  3. ಜಲಮೂಲ ಮತ್ತು ಅಂತರ್ಜಲ ಮಲಿನವಾಗದಂತೆ ತಡೆಯುವುದು.
  4. ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು.
  5. ಮನೆಯ ಸುತ್ತಮುತ್ತ ನೀರು ಹರಿಯಲು ಸೂಕ್ತ ಚರಂಡಿಯನ್ನು ನಿರ್ಮಿಸಿ ಅನುಪಯುಕ್ತ ನೀರನ್ನು ಬೇರೆಡೆಗೆ ಸಾಗಿಸಿ ಶುದ್ಧನೀರನ್ನು ಉಳಿಸುವುದು.
  6. ಸೋರುವ ನಲ್ಲಿ ಹಾಗೂ ಪೈಪುಗಳನ್ನು ಬದಲಾಯಿಸುವುದು.
  7. ದಿನನಿತ್ಯದ ತ್ಯಾಜ್ಯಗಳನ್ನು ನೀರಿನ ಮೂಲಗಳಿಗೆ ಎಸೆಯದಿರುವುದು.
  8. ಕೈಗಾರಿಕೆಗಳಿಂದ ಬರುವ ನೀರನ್ನು ತಂಪುಗೊಳಿಸಿ ನಂತರ ಸಂಸ್ಕರಿಸಿ ಮರುಬಳಕೆ ಮಾಡಬೇಕು.
  9. ದನ-ಕರುಗಳನ್ನು ನೀರಿನ ಮೂಲಗಳಾದ ಬಾವಿ, ನದಿಯ ದಡದಲ್ಲಿ ತೊಳೆಯಬಾರದು ಹಾಗೂ ಸತ್ತ ಪ್ರಾಣಿಯ ದೇಹಗಳನ್ನು ನೀರಿಗೆ ಎಸೆಯಬಾರದು.

ಸಮುದ್ರಗಳಿಗೆ ಹೋಲಿಸಿದರೆ, ನದಿ, ಸರೋವರ ಹಾಗೂ ಇತರೆ ನೀರಿನ ಆಕರಗಳ ಪ್ರಮಾಣ ಕಡಿಮೆ. ಸಮುದ್ರಗಳು ಭೂಮಿಯ 36,10,00,000 5.6. , 12,000 ಘನ ಕಿ.ಮೀ ಹಾಗೂ ಸರೋವರಗಳು 2,30,000 ಘನ ಕಿ.ಮೀ! ಅಂದರೆ ಒಂದು ಟ್ಯಾಂಕರನ್ನು ತೆಗೆದುಕೊಂಡರೆ ಅದರಲ್ಲಿರುವ ಒಂದು ಹನಿ ನೀರು ಮಾತ್ರ ನಮಗೆ ಬಳಸಲು ಯೋಗ್ಯವಾಗಿದೆ ಎಂದರ್ಥ! 7,500 ಕಿ.ಮೀ ಉದ್ದದ ಕಡಲು ಭೂಮಿಯನ್ನು ಹೊಂದಿರುವ ನಮ್ಮ ದೇಶ, ಕೆರೆ, ಕುಂಟೆ, ಸರೋವರ, ನದಿ ಸೇರಿ 4.5 ಮಿಲಿಯನ್ ಹೆಕ್ಟೇರ್‌ಗಳಷ್ಟು ಪ್ರದೇಶ ಹೊಂದಿದೆ.

2001ರಲ್ಲಿ ಪ್ರತಿ ವ್ಯಕ್ತಿಗೆ 1,832 ಘನ ಮೀಟರಿನಷ್ಟು ನೀರು ದೊರೆಯುತ್ತಿತ್ತು; ಅದು ಇಂದು 1,454 ಘ.ಮೀಗೆ ಇಳಿದಿದೆ. ಇದನ್ನು ಲೀಟರಿನಲ್ಲಿ ಅಂದಾಜಿಸಿದರೆ, ಪ್ರತಿ ದಿನಕ್ಕೆ 130 ಲೀಟರಿಗೆ ಕೇವಲ 65 ಲೀಟರ್ ಪಡೆದುಕೊಳ್ಳುತ್ತಿದ್ದೇವೆ ಎಂದರ್ಥ! ಈ ಲೆಕ್ಕಾಚಾರದಲ್ಲಿಯೇ ಗೊತ್ತಾಗಿಬಿಡುತ್ತದೆ. ನಾವು ಹೇಗೆ ನೀರನ್ನು ಉಳಿಸಿ, ಬಳಸಬೇಕೆಂದು! ಅದಕ್ಕಾಗಿ ಬರಿ ನೀರನ್ನು ಬಳಸುವುದಷ್ಟೇ ಅಲ್ಲದೇ ವಿವೇಚನೆಯಿಂದ ಸುಸ್ಥಿರ ಭವಿಷ್ಯತ್ತಿನ ಮೇಲೆ ಗಮನ ಕೇಂದ್ರಿಕರಿಸಿಕೊಂಡು ಹೆಜ್ಜೆಯನ್ನಿಡಬೇಕು, ಈ ರೀತಿಯಾಗಿ ಅತ್ಯಮೂಲ್ಯ ಸಂಪನ್ಮೂಲವಾಗಿರುವ ನೀರನ್ನು ಸಂರಕ್ಷಿಸುವ ನಿರ್ವಹಿಸುವ ಬಹು ಆವಶ್ಯಕ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ. ಇದೇ ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಬೇಕು. ಜಲ ಸಂರಕ್ಷಣೆ ಮತ್ತು ನಿರ್ವಹಣೆ ನಮ್ಮೆಲ್ಲರ ಬಹುಮುಖ್ಯ ಆದ್ಯತೆಯಾಗಲೇಬೇಕು.

ಬರಹ :
ಚಿದಾನಂದ ಪಡದಾಳೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ
July 19, 2026
9:41 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಆಘಾತಕಾರಿ ವರದಿ- ಮೇ-ಜೂನ್‌ನಲ್ಲಿ ಭಾರತದ 10 ಮಕ್ಕಳಲ್ಲಿ 7 ಮಂದಿ ಶಾಲೆ ತಪ್ಪಿಸಿದರು..!
July 9, 2026
2:37 PM
by: ದ ರೂರಲ್ ಮಿರರ್.ಕಾಂ
ಮಳೆಗಾಲದ ಪರಿಸರದ ಸೊಬಗು ಜಲವರ್ಣದಲ್ಲಿ ಸೆರೆ – ಗುತ್ತಿಗಾರಿನಲ್ಲಿ ಮೂರು ದಿನಗಳ ‘ಮಾನ್ಸೂನ್ ಕಲರ್ಸ್’ ಚಿತ್ರಕಲಾ ಶಿಬಿರ
July 8, 2026
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror