ಬೇಸಗೆಯ ಕಾವು ಹೆಚ್ಚಾಗುತ್ತಿದೆ. ಮಳೆ ಸನಿಹಕ್ಕೆ ಬಂದರೂ ದೂರವಾಗುತ್ತಿದೆ. ಕ್ಷಣ ಕ್ಷಣಕ್ಕೂ ಹವಾಮಾನ ಬದಲಾಗುತ್ತಿದೆ ಎಂದು ಹವಾಮಾನ ಅಧ್ಯಯನಕಾರರು ಹೇಳುತ್ತಾರೆ. ಈ ನಡುವೆಯೇ ನೀರು ಬರಿದಾಗುತ್ತಿದೆ. ತೋಟಕ್ಕೆ ಬಿಡಿ, ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸಾಗಾಟವಾಗುತ್ತಿದೆ. ತೋಟಕ್ಕೆ ನೀರಿಲ್ಲದೆ ಕೃಷಿ ಒಣಗಲು ಆರಂಭವಾಗಿದೆ. ಸುಳ್ಯದ ಪಯಸ್ವಿನಿ ನದಿಯ ನೀರು ಬರಿದಾಗಿದೆ, ಕೃಷಿ ಪಂಪ್ ಚಾಲೂ ಮಾಡದಂತೆ ಹೇಳಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಿಪರೀತ ಬಿಸಿಲಿನ ವಾತಾವರಣ ಕಂಡುಬಂದಿದೆ.ಪ್ರತಿದಿನವೂ ವಾತಾವರಣದ ಉಷ್ಣತೆ 35 ಡಿಗ್ರಿಗಿಂತ ಅಧಿಕವಾಗಿದೆ. ಯಾವತ್ತೂ ಈ ಉಷ್ಣತೆ ತಲಪಿದಾಗ ಪ್ರತೀ ವರ್ಷ ಮಳೆಯಾಗುತ್ತಿತ್ತು. ಸುಳ್ಯ ಹಾಗೂ ಮಲೆನಾಡು ತಪ್ಪಲು ಭಾಗಗಳಲ್ಲಿ ಈ ಹೊತ್ತಿಗೆ ಕನಿಷ್ಟ ನಾಲ್ಕು-ಐದು ಮಳೆ ಆಗುತ್ತಿತ್ತು. ಈ ಬಾರಿ ಮಳೆಯಾಗದೆ ಹೊಳೆ, ಕೆರೆಗಳು ಮಾತ್ರವಲ್ಲ ಕೊಳವೆಬಾವಿಗಳು ಬತ್ತುತ್ತಿವೆ. ಅಂತರ್ಜಲ ಮಟ್ಟ ತಗ್ಗಿದೆ. ಇದೀಗ ಕುಡಿಯುವ ನೀರಿಗೂ ಹಲವು ಕಡೆ ತತ್ತ್ವಾರ ಆರಂಭವಾಗಿದೆ.ಇದೀಗ ಸುಳ್ಯದಲ್ಲಿ ಪಯಸ್ವಿನಿ ನದಿ ಬತ್ತಲು ಆರಂಭವಾಗಿದೆ. ಇದೀಗ ನಗರವಾಸಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ . ಸುಳ್ಯ ನಗರಕ್ಕೆ ಕುಡಿಯವ ನೀರಿನ ಅಭಾವ ಕಾಡದಂತೆ ಸುಳ್ಯ ಕಲ್ಲು ಮುಟ್ಲು ಪಂಪ್ ಹೌಸ್ ನಿಂದ ಮೇಲೆ ನದಿ ಅಕ್ಕ ಪಕ್ಕದ ತೋಟಗಳ ಕೃಷಿ ಪಂಪ್ ಗಳ ವಿದ್ಯುತ್ ನಿಲುಗಡೆಗೆ ಸೂಚನೆ ನೀಡಲಾಗಿದೆ.
ಇತ್ತ ಕಡೆ ಕೃಷಿ ಭೂಮುಗಳೂ ಒಣಗಲು ಆರಂಭವಾಗಿದೆ. ನೀರಿಲ್ಲದೆ 15 ದಿನಗಳಾದ ತೋಟಗಳು ಒಣಗಲು ಆರಂಭವಾಗಿದೆ. ಅಡಿಕೆ ಬೆಳೆಗಾರರು ನಳ್ಳಿ ಬೀಳುವುದನ್ನು ನೋಡಬೇಕಾದ ಸ್ಥಿತಿ ಬಂದಿದೆ. ಕೆಲವು ಕಡೆ ಕೊಳವೆಬಾವಿಯಲ್ಲೂ ನೀರು ಕಡಿಮೆಯಾಗಿದೆ. ಎರಡು ಗಂಟೆ ಕೂಡಾ ತೋಟಕ್ಕೆ ನೀರುಣಿಸಲು ಸಂಕಷ್ಟಪಡುತ್ತಿದ್ದಾರೆ.ಕೊಳವೆಬಾವಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಕಾರಣ ಗುಡ್ಡ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲವಾದರೆ, ಕೆಲವು ಕಡೆ ಪಂಪ್ ಮತ್ತಷ್ಟು ಕೆಳಭಾಗಕ್ಕೆ ಇಳಿಕೆ ಮಾಡಲಾಗಿದೆ. ಈಗ ಮಳೆ ಯಾವಾಗ ಆದೀತು ಎಂದು ನೋಡುತ್ತಿದ್ದಾರೆ. ಈ ಬಾರಿ ನೀರಿಲ್ಲದೆ ತೋಟವೂ ಒಣಗುತ್ತಿದೆ, ಕುಡಿಯಲೂ ನೀರಿಲ್ಲದೆ ಹಾಹಾಕಾರ ಪಡಬೇಕಾದ ಸ್ಥಿತಿ ಬಾರದಿದ್ದರೆ ಸಾಕು ಎಂಬ ಆತಂಕ ಎದುರಾಗುತ್ತಿದೆ.
07.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
2047ರ ವೇಳೆಗೆ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ…
ತುಂಗ-ಭದ್ರಾ ಎರಡೂ ಜಲಾಶಯಗಳಿಂದ ನದಿಗೆ ಯಾವುದೇ ಕ್ಷಣದಲ್ಲಾದರೂ ೮೦ ಸಾವಿರಕ್ಕೂ ಅಧಿಕ ಕ್ಯೂಸೆಕ್…
ಇತ್ತೀಚಿನ ವಿಜ್ಞಾನ ಮತ್ತು ಹೊಸ ವಿಧಾನಗಳನ್ನು ಬಳಸಿಕೊಂಡು ಜಾಗತಿಕವಾಗಿ ವೇಗವಾಗಿ ಬೆಳೆಯುವ ಮರಗವನ್ನು…
ತನ್ನಲ್ಲಿರುವುದನ್ನು ಸಮ್ಮನಸ್ಸಿನಿಂದ ನೀಡುವುದು ದಾನ. ಪಡಕೊಂಡವನ ತೃಪ್ತಿಯು ದಾನಿಗೆ ಹಾರೈಕೆ. ಇಲ್ಲಿ ಪ್ರಚಾರದ…
ಚಂದನ್ ಕೆ ಪಿ, 8 ನೇ ತರಗತಿ, ರೋಟರಿ ಪ್ರೌಢಶಾಲೆ, ಪಡ್ಡಂಬೈಲು |…