ವಯನಾಡು ಕುಸಿತ | ದುರಂತ ಪ್ರದೇಶದ ಬೆಟ್ಟದಲ್ಲಿ ಸಿಲುಕಿಕೊಂಡಿದ್ದ 4 ಮಂದಿಯ ರಕ್ಷಣೆ |

August 2, 2024
12:53 PM
ವಯನಾಡಿನಲ್ಲಿ ಕಳೆದ ಎರಡು ದಿನಗಳಲ್ಲಿ ಸುಮಾರು 1,600 ಜನರನ್ನು ಬೆಟ್ಟದ ತಪ್ಪಲು ಪ್ರದೇಶದಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಸುಮಾರು 350 ಕಟ್ಟಡಗಳು ಹಾನಿಗೊಳಗಾಗಿವೆ.

ವಯನಾಡು ಜಿಲ್ಲೆಯ ಚೂರಲ್ಮಲಾ ಪ್ರದೇಶದ ಭೂಕುಸಿತ  ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ದುರ್ಘಟನೆಯ ನಾಲ್ಕು ದಿನಗಳ ಬಳಿಕ ನಾಲ್ಕು ಮಂದಿ ಜೀವಂತವಾಗಿ ಪತ್ತೆಯಾಗಿದ್ದಾರೆ.  ನಾಲ್ವರನ್ನು ಕೂಡಾ ಸೇನೆಯ ಸಿಬಂದಿಗಳು ರಕ್ಷಣೆ ಮಾಡಿದ್ದಾರೆ.

Advertisement

ಕೇರಳದ ವಯನಾಡ್ ಜಿಲ್ಲೆಯಲ್ಲಿ ಗುಡ್ಡವು ಭಾರೀ ಮಳೆಯ ನಡುವೆ ಮಂಗಳವಾರ ಮುಂಜಾನೆ  ಕುಸಿತವಾಗಿತ್ತು. ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 308  ಕ್ಕೆ ಏರಿಕೆಯಾಗಿದೆ.  300ಕ್ಕೂ ಹೆಚ್ಚು ಜನ ಕಣ್ಮರೆಯಾಗಿದ್ದು ಕಾರ್ಯಾಚರಣೆ ಮುಂದುವರಿದಿದೆ. ಈವರೆಗೆ 195 ಮೃತದೇಹಗಳು ಹಾಗೂ 113 ದೇಹದ ಭಾಗಗಳು ಪತ್ತೆಯಾಗಿವೆ.  ಭೂ ಕುಸಿತದಿಂದಾಗಿ ಮಲಪ್ಪುರಂನವರೆಗೆ ಚಾಲಿಯಾರ್ ​ನದಿಯಲ್ಲಿ 143 ಮೃತ ದೇಹ ಮತ್ತು ಕೆಲ ಮೃತ ದೇಹಗಳ ಭಾಗಗಳು ಕೊಚ್ಚಿಕೊಂಡು ಬಂದಿರುವುದು ಪತ್ತೆಯಾಗಿದೆ. 40 ವಿವಿಧ ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ಮುಂದುವರೆದಿದೆ.2018 ರಲ್ಲಿ ಸಂಭವಿಸಿದ ಪ್ರವಾಹದ ನಂತರ ಕೇರಳದಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರಂತವು ಇದಾಗಿದೆ.

ಮುಂಡಕ್ಕೈ ಅತ್ಯಂತ ಹಾನಿಗೊಳಗಾದ ಪ್ರದೇಶವಾದ ನಂತರ, ಅವುಗಳನ್ನು ಸಂಪರ್ಕಿಸುವ ಮುಖ್ಯ ಸೇತುವೆಯು ಕೊಚ್ಚಿಹೋಗಿದ್ದರಿಂದ ಹತ್ತಿರದ ಪಟ್ಟಣವಾದ ಚೂರಲ್ಮಾಲಾದಿಂದ ಸಂಪರ್ಕ ಕಡಿತಗೊಂಡ ನಂತರ ರಕ್ಷಣಾ ಪ್ರಯತ್ನಗಳು ಆರಂಭದಲ್ಲಿ ಅಡಚಣೆಯಾಯಿತು. ಇದೀಗ ಸೇತುವೆ ಕಾರ್ಯ ನಡೆದ ಬಳಿಕ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಸೇನೆಯು ಶುಕ್ರವಾರ ಬೆಟ್ಟದ ಪ್ರದೇಶದಲ್ಲಿ ಪತ್ತೆ ಮಾಡಿದೆ ಎಂದು ಉನ್ನತ ಸೇನಾ ಕಮಾಂಡರ್ ವಿ ಟಿ ಮ್ಯಾಥ್ಯೂ ಹೇಳಿದ್ದಾರೆ. ಇವರು ಸಂಪರ್ಕ ಕಡಿತದಿಂದ ಬೆಟ್ಟದಲ್ಲಿ ಸಿಲುಕಿಕೊಂಡಿದ್ದರು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸೇನಾ ಇಂಜಿನಿಯರ್‌ಗಳು ನಿರ್ಮಿಸಿರುವ ಸೇತುವೆಯ ಮೇಲೆ ಭಾರೀ ವಾಹನಗಳು ಸಂಚರಿಸಲು ಆರಂಭಿಸಿದ್ದು, ಮಣ್ಣಿನಲ್ಲಿ ಹೂತಿರುವ ದೇಹಗಳನ್ನು ಪತ್ತೆ ಹಚ್ಚಲು ಭೂ-ಸಂವೇದಿ ತಂತ್ರಜ್ಞಾನ ಹೊಂದಿರುವ ಡ್ರೋನ್‌ಗಳನ್ನು ತರಲಾಗುತ್ತಿದೆ ಎಂದು ಸೇನೆಯ ಹೇಳಿಕೆಯಲ್ಲಿ ತಿಳಿಸಿದೆ. ಮೃತದೇಹಗಳು ಪತ್ತೆಯಾಗುವ ಸಾಧ್ಯತೆಯಿರುವ ಚಾಲಿಯಾರ್ ನದಿ ಮತ್ತು ಅದರ ನದಿ ತೀರಗಳ ಮೇಲೆ ಕೇಂದ್ರೀಕರಿಸಲು ರಕ್ಷಣಾ ತಂಡಗಳು ಈಜು ತಜ್ಞರು ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿವೆ.

ಕಳೆದ ಎರಡು ವಾರಗಳಲ್ಲಿ ಈ ಪ್ರದೇಶದಲ್ಲಿ ಭಾರೀ ಮಳೆಯಾಗಿರುವ ಕಾರಣ ಮಣ್ಣು ಸಡಿಲವಾಗಿದ್ದು ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಸುಮಾರು 1,600 ಜನರನ್ನು ಬೆಟ್ಟದ ತಪ್ಪಲು ಪ್ರದೇಶದಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಸುಮಾರು 350 ಕಟ್ಟಡಗಳು ಹಾನಿಗೊಳಗಾಗಿವೆ.

ಭೂ ಕುಸಿತಕ್ಕೆ ಒಳಗಾಗಿರುವ ಪ್ರದೇಶವನ್ನು ಆರು ವಲಯವಾಗಿ ವಿಭಾಗಿಸಲಾಗಿದೆ. ಶ್ವಾನಗಳ ಸಹಾಯದಿಂದ ಪ್ರತ್ಯೇಕ ತಂಡಗಳಿಂದ ಮೃತರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ವಿಶೇಷ ಏಜೆನ್ಸಿಗಳ ಸಹಾಯದಿಂದ ಕೇರಳ ಪೊಲೀಸರು ಕೋಯಿಕ್ಕೋಡ್ ನಗರದವರೆಗೆ ಚಾಲಿಯಾರ್ ನದಿಯಲ್ಲಿ ಕೂಂಬಿಂಗ್ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
April 28, 2025
7:02 AM
by: The Rural Mirror ಸುದ್ದಿಜಾಲ
“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್
April 28, 2025
6:53 AM
by: ದ ರೂರಲ್ ಮಿರರ್.ಕಾಂ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ
April 28, 2025
6:49 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ
April 28, 2025
6:44 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror