ಇಂದಿನ ಹವಾಮಾನ ಬದಲಾವಣೆ ಹಾಗೂ ಕೃಷಿಯ ಬಗ್ಗೆ ಬರೆಯುತ್ತಾರೆ ಕೃಷಿಕ ಎ ಪಿ ಸದಾಶಿವ

May 14, 2022
2:50 PM
Advertisement

ನಾನು ಕೃಷಿಗೆ ಬಂದು 40 ವರ್ಷಗಳಲ್ಲಿ ಈ ವರ್ಷದ ಹವಾಮಾನ ಬಲು ವಿಚಿತ್ರ. 2022ರಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳು ಮಾತ್ರ ಸರಿಯಾಗಿ ಬಿಸಿಲು ಕಾದದ್ದು. ತೋಟಕ್ಕೆ ಸ್ಪಿಂಕ್ಲರ್ ನೀರಾವರಿ ಮಾಡಿದ್ದು ಕೇವಲ ನಾಲ್ಕು ವಾರ.  (ಫೆಬ್ರವರಿ ತಿಂಗಳು ಮಾತ್ರ) ಮಾರ್ಚ್ ನಿಂದ ನಂತರ ಪ್ರತಿವಾರವೂ ಮಳೆ. 35 ಅಡಿ ಆಳಕ್ಕಿಳಿಯುವ ಜಲಮಟ್ಟ ಈ ವರ್ಷ ಕೇವಲ ನಾಲ್ಕು ಅಡಿ ಮಾತ್ರ ಇಳಿದದ್ದು. ಜಲಮಟ್ಟ ಇಷ್ಟು ಮೇಲ್ಮಟ್ಟದಲ್ಲಿ ಇದ್ದದ್ದು ಇದೇ ಪ್ರಥಮ. ಹೆಚ್ಚಿನ ಮಳೆ ಬಂದ ವರ್ಷಗಳಲ್ಲಿ ಸಂಜೆ ಹೊತ್ತಿಗೆ ಮಳೆ ಬಂದರೂ ಹಗಲೆಲ್ಲಾ ಸುಡು ಬಿಸಿಲು. ಈ ವರ್ಷ ಮಾತ್ರ ವಿಚಿತ್ರ ಹಗಲೆಲ್ಲ ಮೋಡ. ಮಧ್ಯ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಬಿಸಿಲು ಹಾಗಾಗಿ ಒಣಗಿಸುವ ಕಾರ್ಯಗಳಿಗೆ ಬಲು ಸಮಸ್ಯೆ.

Advertisement
Advertisement
Advertisement

ಸುಗ್ಗಿ ಭತ್ತ ಕೊಯ್ದು ಒಳಬರುವುದು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ. ಅಕ್ಕಿಯ ರುಚಿ ಹೆಚ್ಚಬೇಕಾದರೆ, ಬಾಳ್ವಿಕೆ ಜಾಸ್ತಿ ಇರಬೇಕಾದರೆ, ಒಂದೆರಡು ತಿಂಗಳಾದರೂ ಅದು ಗೋದಾಮುಗಳಲ್ಲಿ ಇರಬೇಕಾಗುತ್ತದೆ. ಎಪ್ರಿಲ್ 15ರ ಮೇಲೆ ಬೇಯಿಸುವುದು ಪದ್ಧತಿ. ಅಕ್ಕಿ ನೆಲದಲ್ಲಿ ಹರಡಿ ಕನಿಷ್ಠ ಮೂರು ಗಂಟೆಗಳ ಹೊತ್ತಾದರೂ ಸುಡುಬಿಸಿಲು ಸಿಕ್ಕಿದರೆ ಮಾತ್ರ ಅಕ್ಕಿಯ ಗುಣಮಟ್ಟ ಚೆನ್ನಾಗಿರುತ್ತದೆ. ಸರಿಯಾಗಿ ಒಣಗದೆ ಮರುದಿನಕ್ಕೆ ಉಳಿದರೆ ಹುಳಿ ಬಂದು ಹಾಳಾಗುತ್ತದೆ. ಆರಂಭದಲ್ಲಿಯೇ ಈ ವರ್ಷ ಬಿಸಿಲು ಕೈಕೊಟ್ಟಿತು. ಮುಂದಿನ ದಿನಗಳಲ್ಲಿ ಆದರೂ ಬರಬಹುದು ಬರಬಹುದು ಎಂಬ ನಿರೀಕ್ಷೆಯಲ್ಲಿಯೇ, ಅವಧಿಗೆ ಮುಂಚಿತವಾಗಿಯೇ ಮಳೆಗಾಲವು ಆರಂಭಿಸಿ ಬಿಟ್ಟಿತು.

Advertisement

ಯಾವುದೇ ಕೃಷಿಕನಲ್ಲಿ ಮಾತನಾಡಿಸಿದರೂ ಬರುವ ಉತ್ತರಗಳು ಇಂತಹವೇ ಹಲವಾರು. ನಾಲ್ಕನೇ ಕೊಯಿಲು ಅಡಿಕೆ ಅಂಗಳದಲ್ಲಿಯೇ ಬಾಕಿ ಇದೆ, ತೆಂಗಿನಕಾಯಿ ಇದೆ, ಮನೆ ಖರ್ಚಿಗೆ ಆಗುವ ಎಣ್ಣೆ ಮಾಡಿಸಲು ಒಣಗಿಸುವ ಧೈರ್ಯವಿಲ್ಲ. ಮಳೆಗಾಲದಲ್ಲಿ ಒಲೆ ಉರಿಸುವುದಕ್ಕೆ ಒಂದಷ್ಟು ತೆಂಗಿನ ಗರಿ ಸಂಗ್ರಹಿಸಬೇಕಿತ್ತು, ಎಲ್ಲಾ ಒದ್ದೆಯಾಗಿ ಹೋಗಿದೆ. ಕಾಡು ಮಾವಿನ ಹಣ್ಣು ಬೇಕಾದಷ್ಟಿದೆ, ಮಾಂಬಳವಾದರೂ ಹಾಕೋಣ ಎಂದರೆ ಬಿಸಿಲೇ ಇಲ್ಲ, ಎಲ್ಲವೂ ಹಾಳಾಗಿ ಹೋಯಿತು. ಹಲಸಿನ ಹಪ್ಪಳ ಮಾಡೋಣವೆಂದರೆ ಹಲಸಿನಕಾಯಿ ಬೆಳೆದಿಲ್ಲ ಬೆಳೆಯುವಾಗ ಬಿಸಿಲಿಲ್ಲ. ಗೇರುಬೀಜವಂತೂ ಕಪ್ಪಾಗಿ ಹೋಯಿತು ಇಂತಹ ಹಲವಾರು ಇಲ್ಲಗಳ ಪಟ್ಟಿ ಬರುತ್ತದೆ. ಅಯ್ಯಪ್ಪ ಎಂತಾ ಸೆಖೆ, ಬಿಸಿಲು ಎಂದು ಉದ್ಗರಿಸುವ ನಾವುಗಳು ಬಿಸಿಲನ್ನು ಅದೆಷ್ಟು ಅವಲಂಬಿಸಿದ್ದೇವೆ. ಯಾವುದೇ ವಿಷಯದ ಮಹತ್ವದ ಅರಿವಾಗುವುದು ಅದು ಇಲ್ಲದಿದ್ದಾಗ ಮಾತ್ರ. ಈಗ ಬಿಸಿಲಿಲ್ಲದರ ಪರಿಣಾಮ ಮುಂದಿನ ದಿನಗಳಲ್ಲಿ ಏನು ಆಗುವುದು ಮುಂದೆಯೇ ನೋಡಬೇಕಷ್ಟೇ.

ಮೋಡ ಅರೆಬಿಸಿಲಿನ ಆಟದಲ್ಲಿ ಅದು ಹೇಗೋ ಮಾಂಬಳವನ್ನು ಸ್ವಲ್ಪ ಸ್ವಲ್ಪ ಹಾಕಿ ಒಲೆಯ ಮೇಲಿಟ್ಟು ಒಣಗಿಸುತ್ತಿದ್ದ ಮಿತ್ರೆಯೊಬ್ಬರು ಮೊನ್ನೆ ತಾನೆ ಹಗಲಿರುಳು ಸುರಿದ ಮಳೆಯನ್ನು ನೋಡಿ ಇನ್ನೂ ಹಾಕುವುದಿಲ್ಲ ಎಂದು ಶಪಥ ಗೈದರಂತೆ. ಮರುದಿನದ ಅರುಣೋದಯವನ್ನು ನೋಡಿ ತಾನೇ ಹಾಕಿದ ಶಪಥವನ್ನು ಮುರಿದರಂತೆ. ಆಮೇಲೆ ಅವರ ಅರಿವಿಗೆ ಬಂತು ಸೂರ್ಯನಿಗೂ ವರುಣನಿಗೂ ಜಗಳವಂತೆ ತಾನು ಹೆಚ್ಚು ತಾನು ಹೆಚ್ಚು ಎಂದು. ತಂದೆತಾಯಿಗಳ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ವರುಣ ಸೂರ್ಯ ಜಗಳದಲ್ಲಿ ಕೃಷಿಕರೆಲ್ಲರೂ ಬಡವಾದದ್ದು ಅಂತೂ ಸತ್ಯ.

Advertisement

ಎ.ಪಿ. ಸದಾಶಿವ.ಮರಿಕೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror