ವೆದರ್‌ ಮಿರರ್‌ | 07 -05 -2022 | ಅಲ್ಲಲ್ಲಿ ಮಳೆ ಸಾಧ್ಯತೆ | ಮೇ.10 ರ ನಂತರ ಮುಂಗಾರು ರೀತಿಯ ಸಾಧಾರಣ ಮಳೆ ಸಾಧ್ಯತೆ |

Advertisement

08.05.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

Advertisement

ಕೊಡಗು ಹಾಗೂ ಆಗುಂಬೆ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಒಂದೆರಡು ಕಡೆ ಸಾಧಾರಣ ಮಳೆ ಇರಬಹುದು.ಉಳಿದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು. ಶಿವಮೊಗ್ಗ ಒಂದೆರಡು ಕಡೆ, ಚಿಕ್ಕಮಗಳೂರು, ಹಾಸನ, ಮೈಸೂರು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಸಂಜೆ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.

Advertisement
Advertisement
Advertisement
ಚಂಡಮಾರುತ ಪ್ರಭಾವ ಹೇಗಿದೆ.. ?

ಚಂಡಮಾರುತ : ಈಗಿನ ಪಥದಂತೆ ಬಂಗಾಳಕೊಲ್ಲಿಯ ಚಂಡಮಾರುತವು ಮೇ 11 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೂ ಶಿಥಿಲಗೊಳ್ಳದೆ ಒರಿಸ್ಸಾ ಕರಾವಳಿ ಮೂಲಕ ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಕರಾವಳಿಯ ತನಕ ಸಾಗುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಮುಂಗಾರು ರೀತಿಯ ಗಾಳಿಯ ಚಲನೆ ಇರುವುದರಿಂದ ಮೇ 10 ರ ನಂತರ ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ಕರಾವಳಿ ಭಾಗಗಳಲ್ಲಿ ಮುಂಗಾರು ರೀತಿಯ ಮೋಡಗಳು ಏಳಬಹುದು ಹಾಗೂ ಅಲ್ಲಲ್ಲಿ ಮುಂಗಾರು ರೀತಿಯ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ವೆದರ್‌ ಮಿರರ್‌ | 07 -05 -2022 | ಅಲ್ಲಲ್ಲಿ ಮಳೆ ಸಾಧ್ಯತೆ | ಮೇ.10 ರ ನಂತರ ಮುಂಗಾರು ರೀತಿಯ ಸಾಧಾರಣ ಮಳೆ ಸಾಧ್ಯತೆ |"

Leave a comment

Your email address will not be published.


*