ಭಾರತ ಸರ್ಕಾರವು ವಿಶ್ವಸಂಸ್ಥೆ ಆಹಾರ ನೆರವು ಯೋಜನೆಯ ಪ್ರಕಾರ ಪಂಜಾಬ್ ವಿಧಾನಸಭೆ ಚುನಾವಣೆ ಬಳಿಕ ಪಾಕಿಸ್ತಾನದ ರಸ್ತೆಯ ಮೂಲಕ ಗೋಧಿಯನ್ನು ಲಾರಿಗಳ ಮೂಲಕ ಬೆಂಗಾವಲು ಪಡೆಯೊಂದಿಗೆ ಕಳುಹಿಸಿಕೊಡಲಿದೆ. ಮಾತ್ರವಲ್ಲದೆ ಒಪ್ಪಂದದ ಪ್ರಕಾರ ಮಾನವೀಯ ನೆರವಿನ ಅನ್ವಯ ಅಫ್ಫಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಸರಬರಾಜು ಮಾಡಲಿದೆ.
ಆಹಾರದ ಕೊರತೆ ಎದುರಿಸುತ್ತಿರುವ ಅಫ್ಘಾನಿಸ್ತಾನಕ್ಕೆ ಗೋಧಿ ಪೂರೈಕೆ ಮಾಡುವುದು ಮಾನವೀಯ ನೆರವಿನ ಹೆಗ್ಗುರುತು ಆಗಲಿದೆ ಎಂದು ರೋಮ್‌ನಲ್ಲಿರುವ ಡಬ್ಲ್ಯೂಎಫ್ಟಿ ಮುಖ್ಯ ಕಚೇರಿ ಟ್ವೀಟ್ ಮಾಡಿದೆ. ವಿಶ್ವಸಂಸ್ಥೆ ಆಹಾರ ನೆರವು ಯೋಜನೆಗೆ ಭಾರತ ಸಹಿ ಹಾಕಿರುವ ಒಪ್ಪಂದದ ಪ್ರಕಾರ ಫೆಬ್ರವರಿ 20 ರ ಬಳಿಕ ಗೋಧಿ ರವಾನೆ ಮಾಡುವ ಕಾರ್ಯ ಆರಂಭವಾಗಲಿದೆ. ಪಾಕಿಸ್ತಾನದ ಮೂಲಕ ಅಫ್ಘಾನ್ ಗಡಿ ದಾಟಿ, ಕಂದಹಾರ್‌ನಲ್ಲಿ ಡಬ್ಲ್ಯೂಎಫ್‌ಪಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ.
ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ…
ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…
ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…
ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…