Advertisement
Opinion

ಸಿರಿಧಾನ್ಯಗಳೆಂದರೇನು..? ಅವುಗಳಿಗೆ ಇಷ್ಟೊಂದು ಮಹತ್ವ ಇದ್ದಕ್ಕಿದ್ದಂತೆ ಏಕೆ ಬಂದಿದೆ..?

Share

2023 ಈ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ (International Millet Year) ಎಂದು ಘೋಷಿಸಲಾಗಿದೆ. ಈ ಮೂಲಕ ಸಿರಿಧಾನ್ಯಗಳ ಕೃಷಿ(Agriculture) ಹಾಗೂ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶವಿದೆ. ಅಷ್ಟುಕ್ಕೂ, ಸಿರಿಧಾನ್ಯಗಳೆಂದರೇನು(Cereals) ಮತ್ತು ಅವುಗಳಿಗೆ ಇಷ್ಟೊಂದು ಮಹತ್ವ ಇದ್ದಕ್ಕಿದ್ದಂತೆ ಏಕೆ ಬಂದಿದೆ? ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Advertisement
Advertisement
Advertisement

ಧಾನ್ಯಗಳಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳು:

Advertisement

1. ಏಕದಳ ಧಾನ್ಯಗಳು: ಇದರಲ್ಲಿ ಬೇಳೆಯಾಗದ ಕಾಳುಗಳು ಸೇರ್ಪಡೆಯಾಗುತ್ತವೆ.

2. ದ್ವಿದಳ ಧಾನ್ಯಗಳು: ಇದರಲ್ಲಿ ಎಲ್ಲ ತರಹದ ಬೇಳೆಕಾಳುಗಳು ಸೇರ್ಪಡೆಯಾಗುತ್ತವೆ. ಅತ್ಯಂತ ಕಿರುಗಾತ್ರದ ಏಕದಳ ಧಾನ್ಯಗಳನ್ನು ಕಿರುಧಾನ್ಯಗಳು ಅಥವಾ ತೃಣಧಾನ್ಯಗಳು ಎಂದು ಕರೆಯುತ್ತಾರೆ. ಅಕ್ಕಿ ಮತ್ತು ಗೋಧಿಯನ್ನು ಹೊರತುಪಡಿಸಿ ಇತರ ಚಿಕ್ಕ ಆಕಾರದ ಧಾನ್ಯಗಳೆಲ್ಲ ಕಿರು ಧಾನ್ಯಗಳ ಪಟ್ಟಿಯಲ್ಲಿ ಬರುತ್ತವೆ. ಉದಾ: ರಾಗಿ, ಸಜ್ಜೆ, ಸಾಮೆ, ಊದಲು, ಹಾರಕ, ನವಣೆ, ಇತ್ಯಾದಿಗಳು.

Advertisement

ಹಾಗಾದರೆ, ಅಕ್ಕಿ ಮತ್ತು ಗೋಧಿ ಕಿರುಧಾನ್ಯಗಳಿಗೂ ಏನು ವ್ಯತ್ಯಾಸ? ಅಕ್ಕಿ ಮತ್ತು ಗೋಧಿ ಇವುಗಳಲ್ಲಿ ನಾರಿನ ಅಂಶ (ಫೈಬರ್) ತುಂಬಾ ಕಡಿಮೆ ಇದ್ದು ಪಿಷ್ಟ (ಕಾರ್ಬೋಹೈಡ್ರೇಟ್) ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ. ಆದ್ದರಿಂದ, ಇವುಗಳ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಾಗಿರುತ್ತದೆ. ಅಂದರೆ ಈ ಪದಾರ್ಥಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಬೇಗನೆ ಹೆಚ್ಚಿಸುತ್ತವೆ. ಅಲ್ಲದೆ, ಫೈಬರ್ ನ ಕೊರತೆಯಿಂದ ಮಲಬದ್ಧತೆ ಹಾಗೂ ದೊಡ್ಡ ಕರುಳಿನಲ್ಲಿ ಉಪಯುಕ್ತ ಜೀವಾಣುಗಳ ಏರುಪೇರು ಉಂಟಾಗಿ ರಕ್ತ ಹೀನತೆ, ಮಧುಮೇಹ, ಕ್ಯಾನ್ಸರ್, ಬಿಪಿ, ಥೈರಾಯಿಡ್, ಹೃದಯ ರೋಗ, ಕೊಲೆಸ್ಟ್ರಾಲ್, ಇತ್ಯಾದಿ ಅನೇಕ ರೀತಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮೇಲಿನ ಮೂರು ಧಾನ್ಯಗಳು ಆರೋಗ್ಯಕ್ಕೆ ಲಾಭಕಾರಿಯಲ್ಲ. ಅಷ್ಟೇ ಅಲ್ಲ, ಹಾನಿಕಾರಕ ಎನ್ನಬಹುದು.

ಗೋಧಿಯಲ್ಲಿ ಗ್ಲೂಟೆನ್ ಎಂಬ ಜಿಗುಟು ಪದಾರ್ಥ ಇರುತ್ತದೆ. ಇದು ಅನೇಕರಲ್ಲಿ ಅಲರ್ಜಿ ಉಂಟು ಮಾಡುತ್ತದೆ. ಅಲ್ಲದೆ, ಕರುಳಿನಲ್ಲಿ ಅಂಟಿಕೊಂಡು ಗ್ಯಾಸ್, ಹೊಟ್ಟೆ ನೋವು, ಮಲಬದ್ಧತೆ ಅಥವಾ ಭೇದಿ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. ಅದೇ ಕಿರುಧಾನ್ಯಗಳಲ್ಲಿ ಪಿಷ್ಟ, ಪ್ರೋಟೀನ್ ಗಳು ಖನಿಜಗಳು ಹಾಗೂ ಜೀವಸತ್ವಗಳು ಸಮತೋಲಿತ ಪ್ರಮಾಣದಲ್ಲಿ ಇರುತ್ತವೆ. ಅಲ್ಲದೆ ನಾರಿನ ಅಂಶ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ಇವುಗಳ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇರುತ್ತದೆ. ಕಿರುಧಾನ್ಯಗಳು ಗ್ಲೂಟೆನ್ ರಹಿತವಾಗಿರುತ್ತವೆ. ಇವುಗಳಲ್ಲಿನ ಪಿಷ್ಠಗಳು ನಿಧಾನವಾಗಿ ಜೀರ್ಣವಾಗಿ ರಕ್ತದಲ್ಲಿ ಸಕ್ಕರೆ ಬಿಡುಗಡೆ ಮಾಡಲು ಸುಮಾರು ಐದಾರು ಗಂಟೆಗಳ ಕಾಲ ತೆಗೆದುಕೊಳ್ಳುತ್ತವೆ.

Advertisement

ಮೈಸೂರಿನ ಡಾ. ಖಾದರ್ ವಲ್ಲಿ ಎಂಬ ಆಹಾರ ತಜ್ಞರು, ಅವರ ಸಿರಿಧಾನ್ಯಗಳ ಆಳವಾದ ಸಂಶೋಧನೆ, ಪ್ರಚಾರ ಹಾಗೂ ವ್ಯಾಪಕ ಬಳಕೆಗಾಗಿ ಬಹುಶಃ ಕರ್ನಾಟಕದಲ್ಲಿ ಅಷ್ಟೇ ಅಲ್ಲ ವಿಶ್ವದಾತ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಆದ್ದರಿಂದಲೇ ಅವರನ್ನು “ಮಿಲ್ಲೆಟ್ ಮ್ಯಾನ್ ಆಫ್ ಇಂಡಿಯಾ” ಎಂದು ಕರೆಯುತ್ತಾರೆ. ಈ ಕಿರುಧಾನ್ಯಗಳು ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಅದರಲ್ಲಿರುವ ಹೇರಳವಾದ ನಾರಿನಂಶ ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ಡಾ. ಖಾದರ್ ಅವರು ಧಾನ್ಯಗಳನ್ನು ಅವುಗಳಲ್ಲಿರುವ ನಾರಿನಂಶದ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಿದ್ದಾರೆ.

1. ಸಕಾರಾತ್ಮಕ ಅಥವಾ ಧನಾತ್ಮಕ ಧಾನ್ಯಗಳು (Positive grains): ನವಣೆ, ಸಾಮೆ, ಊದಲು, ಹಾರಕ/ಅರ್ಕ, ಕೊರಲೆ. ಈ 5 ಧಾನ್ಯಗಳಲ್ಲಿ 8% ದಿಂದ 12.5% ರಷ್ಟು ನಾರಿನಂಶ ಇರುತ್ತದೆ. ಆದ್ದರಿಂದ, ಇವು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಧಾನ್ಯಗಳಾಗಿವೆ. ಇವುಗಳಿಗೆ ರೋಗಗಳನ್ನು ತಡೆಗಟ್ಟುವ ಅಥವಾ ಗುಣಪಡಿಸುವ ಸಾಮರ್ಥ್ಯವಿದೆ. ಆದಕಾರಣ, ಈ ಐದು ಕಿರುಧಾನ್ಯಗಳನ್ನು ಮಾತ್ರ ಡಾ. ಖಾದರ್ ಅವರು ಸಿರಿಧಾನ್ಯಗಳು ಎಂದು ಹೆಸರಿಸಿದ್ದಾರೆ.

Advertisement

2. ತಟಸ್ಥ ಧಾನ್ಯಗಳು (Neutral grains): ಮೇಲಿನ ಐದು ಸಿರಿಧಾನ್ಯಗಳನ್ನು ಹೊರತುಪಡಿಸಿ ಇತರೆ ಎಲ್ಲ ಕಿರುಧಾನ್ಯಗಳು ಅಂದರೆ ರಾಗಿ, ಸಜ್ಜೆ, ಬರಗು, ಜೋಳ, ಇತ್ಯಾದಿ ಈ ಗುಂಪಿಗೆ ಸೇರುತ್ತವೆ. ಈ ಧಾನ್ಯಗಳಲ್ಲಿ ನಾರಿನಂಶ 1.5% ರಿಂದ 3.5% ರಷ್ಟಿರುತ್ತದೆ. ಇವುಗಳಿಗೆ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಇರುವುದಿಲ್ಲ. ಆದರೂ, ಇವು ಆರೋಗ್ಯಕ್ಕೆ ಅಷ್ಟೊಂದು ಹಾನಿಕಾರಕವಲ್ಲ.

3. ನಕಾರಾತ್ಮಕ ಅಥವಾ ಋಣಾತ್ಮಕ ಧಾನ್ಯಗಳು(Negative grains): ಗೋಧಿ ಹಾಗೂ ಅಕ್ಕಿ ಈ ಗುಂಪಿಗೆ ಸೇರುತ್ತವೆ. ಇವುಗಳಲ್ಲಿ 70%ಕ್ಕಿಂತ ಅಧಿಕ ಪಿಷ್ಟ ಹಾಗೂ 1.5ಕ್ಕಿಂತ ಕಡಿಮೆ ನಾರಿನ ಅಂಶ ಇರುವುದರಿಂದ ಇವು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತವೆ. ಕಿರುಧಾನ್ಯಗಳ ಬಳಕೆಯ ಬಗ್ಗೆ ಭಾರತೀಯ ಇತಿಹಾಸದಲ್ಲಿ ಹಾಗೂ ವಿಶ್ವದ ಇತಿಹಾಸದಲ್ಲಿ ಸುಮಾರು 7,000 ವರ್ಷಗಳಷ್ಟು ಹಳೆಯ ದಾಖಲೆಗಳು ಸಿಗುತ್ತವೆ. ಹಿಂದಿನ ಕಾಲದಲ್ಲಿ ಅಕ್ಕಿ ಹಾಗೂ ಗೋಧಿ ಆಹಾರದ ಪ್ರಮುಖ ಧಾನ್ಯಗಳಾಗಿರಲಿಲ್ಲ. ಪಾಶ್ಚತ್ಯರು ತಮ್ಮ ಅನುಕೂಲಕ್ಕಾಗಿ ಇವುಗಳ ಬೆಳೆಯನ್ನು ಅಭಿವೃದ್ಧಿಪಡಿಸಿ ಭಾರತದಲ್ಲಿ ಪ್ರಚಾರ ಮಾಡಿದರು. ಪಿಷ್ಟಗಳು ಅಧಿಕವಾಗಿರುವುದರಿಂದ ಅಕ್ಕಿ ಹಾಗೂ ಗೋಧಿಯ ಪದಾರ್ಥಗಳು ರುಚಿಯನಿಸುತ್ತವೆ.

Advertisement

ಆದ್ದರಿಂದ, ನಾವು ಭಾರತೀಯರು ನಮ್ಮ ಆಹಾರವನ್ನು ಮರೆತು ಈ ಅಪಾಯಕರ ಆಹಾರಗಳನ್ನು ಇಷ್ಟಪಡಲಾರಂಭಿಸಿದೆವು. ಡಾ. ಖಾದರ್ ಅವರು ಕೇವಲ ಸಿರಿಧಾನ್ಯಗಳು ಹಾಗೂ ಕೆಲ ಗಿಡಗಳ ಎಲೆಗಳ ಕಷಾಯಗಳನ್ನು ಬಳಸಿ ಮಧುಮೇಹ ದಿಂದ ಕ್ಯಾನ್ಸರ್ವರೆಗೆ ಸಾವಿರಾರು ರೋಗಿಗಳ ಅನೇಕ ಪ್ರಕಾರದ ರೋಗಗಳನ್ನು ವಾಸಿ ಮಾಡಿದ್ದಾರೆ. ಆದ್ದರಿಂದ ನಾವಿನ್ನು ಅಕ್ಕಿ, ಗೋಧಿಯಂತಹ ಅಪಾಯಕರ ಧಾನ್ಯಗಳನ್ನು ತ್ಯಜಿಸಿ ನಮ್ಮ ಪಾರಂಪರಿಕ ಸಿರಿಧಾನ್ಯಗಳ ಬಳಕೆಯನ್ನು ನಿಯಮಿತಗೊಳಿಸಬೇಕಾಗಿದೆ. ಇದರಿಂದ ದೇಶದಲ್ಲಿ ಆರೋಗ್ಯ ಸ್ಥಿತಿ ಖಂಡಿತ ಸುಧಾರಣೆಯಾಗುತ್ತದೆ.

ಈ ನಿಟ್ಟಿನಲ್ಲಿ ರೈತರು ಕೂಡ ತಮ್ಮ ಕೃಷಿಯಲ್ಲಿ ಸಿರಿಧಾನ್ಯಗಳತ್ತ ಹೆಚ್ಚು ಗಮನ ಹರಿಸಬೇಕಾಗಿದೆ. ಎಂದು ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳು ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಅವು ಸಾಮಾನ್ಯರಿಗೆ ಕೈಗೆಟುಕುಂತಿಲ್ಲ. ವಾಸ್ತವದಲ್ಲಿ ಸಿರಿಧಾನ್ಯಗಳ ಕೃಷಿ ತುಂಬಾ ಅನುಕೂಲಕರ ಸುಲಭ ಹಾಗೂ ಕಡಿಮೆ ಖರ್ಚಿನದಾಗಿದೆ. ಸಿರಿಧಾನ್ಯಗಳು ಹವಾಮಾನದಲ್ಲಿನ ಏರುಪೇರನ್ನು ಸಹಿಸಿಕೊಳ್ಳುತ್ತವೆ ಕಡಿಮೆ ಫಲವತ್ತಾದ ಮಣ್ಣಿನಲ್ಲಿಯೂ ಚೆನ್ನಾಗಿ ಬೆಳೆಯುತ್ತವೆ ಅಲ್ಲದೇ ತೀರ ಕಡಿಮೆ ನೀರು ಬಳಕೆಯಾಗುತ್ತದೆ. ಒಂದು ಕೆಜಿ ಅಕ್ಕಿ ಅಥವಾ ಗೋಧಿಯನ್ನು ಬೆಳೆಯಲು ಸಾವಿರ ಲೀಟರ್ ನೀರು ಬೇಕಾಗುತ್ತದೆ.

Advertisement

ಆದರೆ, ಅದೇ ಒಂದು ಕೆಜಿ ಸಿರಿಧಾನ್ಯ ಬೆಳೆಯಲು 200 ಲೀಟರ್ ನೀರು ಸಾಕಾಗುತ್ತದೆ. ಸಿರಿಧಾನ್ಯಗಳಿಂದ ಎಲ್ಲ ತರಹದ ಅಡುಗೆಗಳು ಹಾಗು ತಿನಿಸುಗಳನ್ನು ಮಾಡಬಹುದು. ಆದ್ದರಿಂದ, ಸಿರಿಧಾನ್ಯಗಳ ಬಳಕೆಯನ್ನು ವ್ಯಾಪಕಗೊಳಿಸುವುದು ಕಷ್ಟವೇನಿಲ್ಲ. *ಆದ್ದರಿಂದ, ಇಂದಿನಿಂದ ಅಕ್ಕಿ ಮತ್ತು ಗೋಧಿಯನ್ನು ತ್ಯಜಿಸಿ ಸಿರಿಧಾನ್ಯಗಳನ್ನು ಬಳಸಲು ಆರಂಭಿಸಿ. ಆದರೆ ಗಮನಿಸಿ ಮೇಲೆ ತಿಳಿಸಿದ ಲಾಭಗಳು ಸಾವಯುವ ಪದ್ಧತಿಯಿಂದ ಬೆಳೆದ ಪಾಲಿಶ್ ಮಾಡಿರದ ಸಿರಿಧಾನ್ಯಗಳಿಂದ ಮಾತ್ರ ದೊರೆಯುತ್ತವೆ. ಇತ್ತೀಚೆಗೆ ಅನೇಕ ಅಂಗಡಿಗಳಲ್ಲಿ ಮಾಲ್ ಗಳಲ್ಲಿ ಇವು ಲಭ್ಯವಿವೆ.

ಲೇಖನ: ಡಾ. ಪ್ರ. ಅ. ಕುಲಕರ್ಣಿ ಹೋಮಿಯೋಪತಿ ತಜ್ಞ, ಪ್ರಕೃತಿ ಚಿಕಿತ್ಸಕ, ಜೀವನಶೈಲಿ ಸಮಾಲೋಚಕ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

3 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

3 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

3 hours ago

ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ

ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…

4 hours ago

ಧರ್ಮಸ್ಥಳ ಯಕ್ಷಗಾನ ಮೇಳ |  ಸೇವೆ ಬಯಲಾಟ ಪ್ರದರ್ಶನ

ನಾಡಿನ ಪವಿತ್ರ ಕ್ಷೇತ್ರ  ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…

4 hours ago

ಜೇನು ತುಪ್ಪ ಮಾರಾಟ | ಅರ್ಜಿ ಆಹ್ವಾನ

ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…

4 hours ago