ಅಡಿಕೆ ಇಂದು ಉತ್ಪಾದಕನಿಂದ ಹಿಡಿದು ಗ್ರಾಹಕನಿಗೆ ತಲಪುವಲ್ಲಿ ಒಂದು ಉದ್ದದ ದಾರಿಯಲ್ಲಿ ಸಾಗುತ್ತದೆ.ಈ ದಾರಿಯಲ್ಲಿ ನಾನಾ ರೀತಿಯ ಮಧ್ಯವರ್ತಿಗಳು ಕಾರ್ಯನಿಭಾಯಿಸುತ್ತಾರೆ.ಇಲ್ಲಿ ಸಹಕಾರಿ ಸಂಸ್ಥೆಗಳು,ಖಾಸಗಿ ವ್ಯಾಪಾರಸ್ಥರು ಮತ್ತು ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಕರು ಸೇರಿದ್ದಾರೆ.ದೇಶದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಉತ್ಪಾದನೆಯ ಶೇಕಡಾ ಎಂಬತ್ತರಷ್ಟು ಅಡಿಕೆ ವ್ಯವಹಾರ ಖಾಸಗಿ ವಲಯದಲ್ಲಿ ನಡೆಯುತ್ತಿದೆ.ಆದ್ದರಿಂದಲೇ ಧಾರಣೆಯ ಏರಿಕೆಗೆ ಅವಕಾಶ ಜಾಸ್ತಿ.ಅಡಿಕೆಯ ಉತ್ಪಾದಕನಿಂದ ಹಿಡಿದು ಅಂತಿಮ ಗ್ರಾಹಕನಿಗೆ ತಲಪುವಾಗ ನಾನಾ ಹಂತಗಳನ್ನು ದಾಟುತ್ತದೆ. ಇವುಗಳನ್ನು ಹಲವು ವರ್ಗ ಗಳಾಗಿ ವಿಂಗಡಿಸಬಹುದು….
ಚಾಲಿ ಅಡಿಕೆ:
ಇಲ್ಲಿ ಎಲ್ಲಾ ಹಂತದಲ್ಲೂ ಚಿಲ್ಲರೆ ವ್ಯಾಪಾರಿಗಳು ಧಾರಣೆಯ ಏರುಪೇರಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಇದಕ್ಕೆ ಮುಖ್ಯ ಕಾರಣ ಅವರಿಗೆ ಬೆಳೆಗಾರನ ಸ್ಥಿತಿ, ಬೆಳೆಯ ಪ್ರಮಾಣ ಇತ್ಯಾದಿಗಳು ತಿಳಿದಿರುವುದು.ಇದರೊಂದಿಗೆ ಗ್ರಾಹಕ ಪ್ರದೇಶದ ವ್ಯಾಪಾರಸ್ಥರಿಗೆ ಬೆಳೆಯ ಉತ್ಪಾದನೆ,ಗುಣಮಟ್ಟ ಎಂಬಿತ್ಯಾದಿ ವಿಚಾರಗಳು ತಿಳಿದಿರುತ್ತದೆ. ಮೇಲೆ ತಿಳಿಸಿದ ಸಂಸ್ಥೆಗಳು ಮತ್ತು ಖಾಸಗಿ ಮೌಲ್ಯ ವರ್ಧಿತ ಉತ್ಪನ್ನಗಳ ಉತ್ಪಾದಕರು ವಿವಿಧ ರೂಪದ ಅಡಿಕೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಾರೆ.
ಕೆಂಪು ಅಡಿಕೆ:
ಇಲ್ಲಿ ಸಹಕಾರಿ ಸಂಸ್ಥೆಗಳು ಮತ್ತು ಖಾಸಗಿ ಉದ್ದಿಮೆದಾರರು ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸಿ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ಗ್ರಾಹಕರಿಗೆ ಬೇರೆ ಬೇರೆ ದಾರಿಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.
ಅಡಿಕೆ ಇಂದು ಉತ್ಪಾದಕರ ಹಂತದಿಂದ ಗ್ರಾಹಕನ ತನಕ ತಲಪುವಾಗ ನಾನಾ ಹಂತಗಳನ್ನು ದಾಟಿ ಹೋಗುವುದರಿಂದಾಗಿ ಉತ್ಪಾದಕರಿಗೆ ಬಳಕೆದಾರರು ಕೊಡುವ ಬೆಲೆಯ ಶೇಕಡಾ ಅರುವತ್ತರ ಆಸು ಪಾಸು ದೊರಕುತ್ತದೆ.ಇದಕ್ಕೆ ಕಾರಣಗಳೆಂದರೆ ಸಾಗಣೆ ವೆಚ್ಚ, ಮಧ್ಯವರ್ತಿ ಅಥವಾ ದಲ್ಲಾಳಿಗಳ ಕಮಿಷನ್,ತೆರಿಗೆ,ಸಂಸ್ಕರಣಾ ವೆಚ್ಚ,ವಿವಿಧ ಹಂತದ ಲಾಭಾಂಶಗಳು,ಇತ್ಯಾದಿಗಳು.
ಇನ್ನು ಉತ್ಪಾದಕ ಮಾರಾಟ ಮಾಡಿದ ಅಡಿಕೆ ವರ್ಗೀಕರಣ ಆಗಿ ಗ್ರಾಹಕ ಪ್ರದೇಶದ ಶುಚಿ, ರುಚಿಗೆ ಅನುಗುಣವಾಗಿ ವಿವಿಧ ಗಾತ್ರಗಳು,ರೂಪಗಳಲ್ಲಿ ಅಂತಿಮ ಮಾರುಕಟ್ಟೆಗೆ ಹೋಗುವುದರಿಂದ ವಿದಕ್ಕೆ ಅನುಗುಣ ಆಗಿ ಧಾರಣೆ ಏರು ಪೇರು ಆಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಡಿಕೆ ಮಾರುಕಟ್ಟೆಯ ಬಹು ಪಾಲು ಖಾಸಗಿ ವರ್ತಕರ ಹತೋಟಿಯಲ್ಲಿದ್ದರೂ ಇಲ್ಲಿ ಸಹಕಾರಿ ಸಂಸ್ಥೆಗಳು ಧಾರಣೆ ನಿರ್ಧರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ.
ಇದರೊಂದಿಗೆ ಗ್ರಾಹಕ ಪ್ರದೇಶದ ವ್ಯಾಪಾರಸ್ಥರು ಮತ್ತು ಸ್ಥಳೀಯ ವ್ಯಾಪಾರಸ್ಥರು ಸಹಕಾರಿ ಸಂಸ್ಥೆಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡುವುದರೊಂದಿಗೆ ,ಬೆಳೆಗಾರರ ಮಾಹಿತಿಯನ್ನೂ ಕಲೆ ಹಾಕಿ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತಾರೆ.ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಇಲ್ಲಿ ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ.ಹೀಗಾದಲ್ಲಿ ಏರು ಪೇರು ಕಡಿಮೆ ಆಗಿ ಸ್ಥಿರ ದಾರಣೆಗೆ ಅವಕಾಶ ದೊರಕಬಹುದು.
ಕೃಷಿ,ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಯಾವುದೇ ಉತ್ಪನ್ನ ಇರಲಿ, ಇವು ಗ್ರಾಹಕರಿಗೆ ತಲಪಬೇಕಾಗಿದ್ದಲ್ಲಿ ಮಧ್ಯವರ್ತಿಗಳು ಬೇಕೆ ಬೇಕು.ಆದರೆ ಈ ಸಂಖ್ಯೆ ಕಡಿಮೆ ಆದಷ್ಟು ಗ್ರಾಹಕ ಕೊಡುವ ಹಣದ ಬಹುಪಾಲು ಉತ್ಪಾದಕರಿಗೆ ತಲಪಲು ಸಾಧ್ಯ.ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಗಳಿಂದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಧ್ಯವರ್ತಿಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಈ ಪ್ರವೃತ್ತಿ ಅಡಿಕೆ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ.ಇದು ಬೆಳೆಗಾರರ ದೃಷ್ಟಿಯಿಂದ ಒಂದು ಒಳ್ಳೆಯ ಬೆಳವಣಿಗೆ ಆಗಿದೆ.
ಭಾರತವು ವಾರ್ಷಿಕವಾಗಿ ಅಂದಾಜು 1.4 ಮಿಲಿಯನ್ ಟನ್ ಹಲಸಿನ ಹಣ್ಣನ್ನು ಉತ್ಪಾದಿಸುತ್ತದೆ, ಆದರೆ…
Ayanshi K.H, 1st. Std, New Horizon School Bahrain ಅಯಂಶಿ ಕೆಚ್,…
ಒಂದು ಕಡೆ ಅಡಿಕೆ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟ, ಇನ್ನೊಂದು ಕಡೆ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜ ಚನ್ನ ಬೋಂಡಾಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ಎಂ ಜಿ ಸಿದ್ದೇಶ ರಾಮ, 5 ನೇ ತರಗತಿ ಎಂ ಜಿ ಸಿದ್ದೇಶ…