Advertisement
MIRROR FOCUS

ಅಡಿಕೆ ಕೊಳೆರೋಗ | ಇಲಾಖೆಗಳ ಮಾಹಿತಿ ತಲುಪಿದ ಕೃಷಿಕರ ಸಂಖ್ಯೆ ನೋಡಿದರೇ ಅಚ್ಚರಿ…!

Share

ಅಡಿಕೆ ಕೊಳೆರೋಗ ವ್ಯಾಪಕವಾಗಿರುವಂತೆಯೇ ಈಗ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಅಡಿಕೆ ಬೆಳೆಗಾರರ ಒತ್ತಾಯ. ಇಡೀ ವರ್ಷದ ಬೆಳೆ ನಷ್ಟವಾಗಿರುವುದರಿಂದ ಈ ಬೇಡಿಕೆ ವ್ಯಕ್ತವಾಗಿದೆ. ಆದರೆ, ಈ ಸಮೀಕ್ಷೆ ಇಲಾಖೆಗಳ ಮೂಲಕ ನಡೆಯಬೇಕು. ಅದರಲ್ಲೂ ತೋಟಗಾರಿಕಾ ಇಲಾಖೆ ಮೂಲಕ ಸಮೀಕ್ಷೆಗಳು ನಡೆಯಬೇಕು. ಆದರೆ ಇಲಾಖೆಗಳು ಕೃಷಿಕರನ್ನು ಎಷ್ಟು ತಲುಪಿವೆ..? ಈ ಬಗ್ಗೆ ಅಚ್ಚರಿಯ ವರದಿ ಬೆಳಕಿಗೆ ಬಂದಿದೆ.

ಅಡಿಕೆ ಕೊಳೆರೋಗಕ್ಕೆ ತೋಟಗಾರಿಕಾ ಇಲಾಖೆಯಿಂದ ದೊರೆಯುವ ನೆರವಿನ ಬಗ್ಗೆ ಮಾಹಿತಿ ಕೇಳಲಾಗಿತ್ತು. ತೋಟಗಾರಿಕಾ ಇಲಾಖೆಯಿಂದ ದೊರೆಯುವ ಸಬ್ಸೀಡಿ ಬಗ್ಗೆ ಮಾಹಿತಿ ದೊರಕಿದೆಯೇ..?, ಸುಣ್ಣ-ಮೈಲುತುತ್ತ ಲಭ್ಯವಾಗಿದೆಯೇ..?   ಎಂಬುದು ಪ್ರಶ್ನೆಯಾಗಿತ್ತು. ಅಂದರೆ, ಇಲಾಖೆ ಹಾಗೂ ಕೃಷಿಕರ ನಡುವಿನ ಸಂಪರ್ಕ, ಸಹಭಾಗಿತ್ವ ತಿಳಿಯುವುದು ಇದರ ಉದ್ದೇಶವಾಗಿತ್ತು. ಇಲಾಖೆಗಳು ಇನ್ನೂ ಹೆಚ್ಚು ಜನಪರವಾಗಿ ಕೆಲಸ ಮಾಡಬೇಕು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಪ್ರಶ್ನೆಗೆ ಉತ್ತರಿಸಿದ ಶೇ.59 ರಷ್ಟು ಕೃಷಿಕರು ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಶೇ.22.1 ರಷ್ಟು ಕೃಷಿಕರು ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಶೇ.15.7 ರಷ್ಟು ಕೃಷಿಕರು ಸುಣ್ಣ-ಮೈಲುತುತ್ತ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಶೇ.3.3 ಕೃಷಿಕರು ಸುಣ್ಣ ಹಾಗೂ ಮೈಲುತುತ್ತ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.. 

ಈ ಹಿಮ್ಮಾಹಿತಿ ಪ್ರಕಾರ, ಇಲಾಖೆಗಳು ಇನ್ನಷ್ಟು ಕೃಷಿಕರ ಪರವಾಗಿ ಕೆಲಸ ಮಾಡಬೇಕು ಎಂಬುದು ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಶೇ.3.3 ಕೃಷಿಕರಿಗಷ್ಟೇ ಸುಣ್ಣ -ಮೈಲುತುತ್ತ ಸಬ್ಸೀಡಿ ದರದಲ್ಲಿ ಲಭ್ಯವಾಗಿದೆ. ಉಳಿದವರಿಗೆ ಮುಂದಿನ ಹಂತದಲ್ಲಿ ಲಭ್ಯವಾಗಬಹುದು, ಅಥವಾ ಲಭ್ಯವಾಗದೇ ಇರಬಹುದು. ಆದರೆ, ಕೊಳೆರೋಗ ನಿರ್ವಹಣೆಯ ದೃಷ್ಟಿಯಿಂದ ತಕ್ಷಣವೇ ಈ ನೆರವುಗಳು ಲಭ್ಯವಾಗಬೇಕಾಗಿದೆ. ಇದಕ್ಕಾಗಿ ಕ್ರಮಗಳ ಅಗತ್ಯ ಇದೆ, ಯೋಜನೆಗಳ ಅಗತ್ಯವಿದೆ. ಶೇ.59 ರಷ್ಟು ಕೃಷಿಕರಿಗೆ ಈ ಮಾಹಿತಿಯೇ ಲಭ್ಯವಾಗಿಲ್ಲ ಎಂದಿರುವುದು ಇಲಾಖೆಗಳು, ಸರ್ಕಾರ ಗಮನಿಸಬೇಕಾದ ಅಂಶ. ಅಂದರೆ ಇಷ್ಟೆಲ್ಲಾ ಆಧುನಿಕ ವ್ಯವಸ್ಥೆಗಳು ಇರುವಾಗಲೂ ಕೃಷಿಕರಿಗೆ ಕೃಷಿ ಇಲಾಖೆಯ ಮಾಹಿತಿಗಳು ಲಭ್ಯವಾಗುತ್ತಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಇಲಾಖೆಗಳು ಸುಧಾರಣೆಗೆ ಇದೊಂದು ಸಂದೇಶವೂ ಆಗಿದೆ.

ತೋಟಗಾರಿಕೆ ಅಥವಾ ಕೃಷಿ ಇಲಾಖೆಗಳು ಇಂದು ರೈತ ಉತ್ಪಾದಕ ಸಂಸ್ಥೆಗಳ ಜೊತೆ, ಕೃಷಿ ಸಂಘಟನೆಗಳ ಜೊತೆ ಹೆಚ್ಚು ಸಂಪರ್ಕ ಇರಿಸಿಕೊಳ್ಳಬೇಕು. ಕೇವಲ ಒಂದೋ-ಎರಡೋ ರೈತ ಉತ್ಪಾದಕ ಸಂಸ್ಥೆಗಳ ಜೊತೆ ಸಂಪರ್ಕ ಇರಿಸಿಕೊಂಡರೆ ಸಾಕಾಗುವುದಿಲ್ಲ ಎನ್ನುವುದು ಕೂಡಾ ಇಲ್ಲಿ ಸಂದೇಶ. ರೈತ ಉತ್ಪಾದಕ ಸಂಸ್ಥೆ ತನ್ನ ಸದಸ್ಯರ ಗಮನಕ್ಕೆ ಮೊದಲ ಆದ್ಯತೆ ನೀಡಿ ಉಳಿದ ಕೃಷಿಕರಿಗೆ ನಂತರದ ಸ್ಥಾನ ನೀಡುವುದು ಸಾಮಾನ್ಯ. ಹೀಗಾಗಿ ರೈತ ಉತ್ಪಾದಕ ಸಂಸ್ಥೆಗಳು ಮಾತ್ರವಲ್ಲ ಸಹಕಾರಿ ಸಂಘಗಳು, ರೈತ ಸಂಘಟನೆಗಳು ಹಾಗೂ ಕೃಷಿ ಪರ ಮಾಧ್ಯಮಗಳ ಜೊತೆಯೂ ಸಂಪರ್ಕ ಇರಿಸಿಕೊಂಡು ಈ ಮೂಲಕವೂ ಕೃಷಿ ಸೇವೆಗಳ, ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದು ಅಗತ್ಯ ಇದೆ.

ಈಗಾಗಲೇ ಇಲಾಖೆಗಳು ಕೃಷಿಕರ ಪರವಾಗಿ ಹಲವಾರು ಯೋಜನೆಗಳನ್ನು ಹೇಳುತ್ತಿದ್ದರೂ, ಇಲಾಖೆಗಳು ಅವರ ಕೆಲಸ ಮಾಡುತ್ತಿದ್ದರೂ ನಿಜವಾಗೂ ಅರ್ಹ ಫಲಾನುಭವಿ ಅಥವಾ ಯಾರಿಗೆ ಅಗತ್ಯವಾಗಿ ಈ ಯೋಜನೆಗಳು ಬೇಕಾಗುತ್ತವೋ ಅಂತಹವರಿಗೆ ಸೌಲಭ್ಯ , ಸಹಾಯಧನ ಸಿಗದೇ ಇರುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ವ್ಯಾಪಕ ಪ್ರಚಾರದ ಅಗತ್ಯ ಇದೆ ಎನ್ನುವುದು ಈ ಸಮೀಕ್ಷೆಯ ಮೂಲಕ ತಿಳಿಯಬಹುದು. ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆ , ಕೆವಿಕೆಗಳು  ಹೆಚ್ಚಾಗಿ ಯೋಜನೆಗಳ ಅನುಷ್ಟಾನ ಸಂಸ್ಥೆಗಳು. ಇದಕ್ಕಾಗಿ ರೈತರೊಂದಿಗೆ ನಿಕಟವಾದ ಸಂಪರ್ಕವೂ ಅಗತ್ಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.. 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

2 days ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

3 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

3 days ago