ಮಾಲಿನ್ಯ ನಿಯಂತ್ರಣಕ್ಕೆ ನಾವೇನು ಮಾಡಬಹುದು…?

December 24, 2025
7:48 AM

“ನೀರು ಉಳಿಸಿ, ಪರಿಸರ ಕಾಪಾಡಿ, ಮುಂದಿನ ಪೀಳಿಗೆಗೆ ಮರಗಳನ್ನು ನೆಡಿ” ಅನ್ನೋ ಮಾತು, ಇಂದಿನ ದೇಶದ ಪರಿಸ್ಥಿತಿ ನೋಡಿದ್ರೆ ತುಂಬಾ ಹಳೆಯ ಮಾತಿನಂತೆ ಭಾಸವಾಗುತ್ತದೆ….

Advertisement
Advertisement

ಮಳೆ ಬರ್ತದೆ, ಅನಾಹುತ ಆಗತ್ತೆ, ಸ್ವಲ್ಪ ಗಾಬರಿ ಆಗುತ್ತೆ, ಎರಡು ದಿನಗಳಲ್ಲಿ ಎಲ್ಲ ಮರೆತು ಬಿಡ್ತೀವಿ.
ಚಳಿಗಾಲ ಬಂದರೆ ಮಹಾನಗರಗಳಲ್ಲಿ ಉಸಿರಾಡಲು ಆಗುವುದಿಲ್ಲ, ಸ್ವಲ್ಪ ದಿನ ಚರ್ಚೆ, ವಾರ್ತೆಯಲ್ಲಿ TRP ಗೆ ಬಾಯಿಬಡೆದುಕೊಳ್ಳುವುದು ಆಗುತ್ತದೆ , ಮತ್ತೆ ಮರೆತು ಬಿಡ್ತೀವಿ.
ಬೇಸಿಗೆಯಲ್ಲಿ ನೀರಿನ ಕೊರತೆ, ಮಾಲಿನ್ಯ, ಬಿಸಿಗಾಳಿ ಎಲ್ಲವೂ ತೊಂದರೆ ಕೊಡ್ತವೆ, ಆದರೆ ಋತು ಬದಲಾಯ್ತು ಅಂದರೆ ಮತ್ತೆ ಮರೆತು ಬಿಡ್ತೀವಿ. ಮರೆತು ಬಿಡುವುದು ಅನ್ನುವುದಕ್ಕಿಂತ ನೆಗ್ಲೆಕ್ಟ್ ಮಾಡುವುದು ಅಂದರೆ ಸರಿಯಾದಿತೇನೋ.

“ಸಮಸ್ಯೆ ಬಂದಾಗ ನೋಡೋಣ, ಆಗ ಹೇಗಾದರೂ ತಿದ್ದ್ಕೊಳ್ತೀವಿ” ಅನ್ನೋ ಮನಸ್ಥಿತಿ ನಮ್ಮಲ್ಲಿ ಆಳವಾಗಿ ಬೇರೂರಿದೆ. ಇದರಿಂದಲೇ ಭವಿಷ್ಯದ ಬಗ್ಗೆ ತಯಾರಿ ಅಥವಾ ಮುಂಚಿತ ಕ್ರಮ ಕೈಗೊಳ್ಳುವುದು ವೈಖರಿ ನಿಂತು ಹೋಗಿದೆ.

ಪರಿಸರ ದಿನಾಚರಣೆಯಂದು ಗಿಡ ನೆಡುವುದು, ಯೋಗ ದಿನಕ್ಕೆ ಯೋಗ ಮಾಡುವುದು ಇತ್ಯಾದಿ ಎಲ್ಲ ಮಾಡ್ತೇವೆ.
ಆದ್ರೆ ಮಾಲಿನ್ಯ ನಿಯಂತ್ರಣ ದಿನಕ್ಕೆ ನಾವು ಏನು ಮಾಡ್ತೇವೆ ಅನ್ನುವುದು ನನಗೆ ನಿಜವಾಗಿಯೂ ಕುತೂಹಲ.
ಇದು ಆಚರಿಸೋ ದಿನ ಅಲ್ಲ. ಯಾರದ್ದೋ ತಪ್ಪಿನಿಂದಾಗಿ ಜೀವತೆತ್ತ ಅಮಾಯಕರನ್ನು ನೆನೆದು ನಮ್ಮ ತಪ್ಪುಗಳನ್ನ ಯೋಚಿಸಿ, ನಮ್ಮ carbon footprint ಕಡಿಮೆ ಮಾಡಿಕೊಳ್ಳಬೇಕಾದ ದಿನವಾಗಬೇಕು.
ಆದ್ರೆ ಎಷ್ಟು ಜನರಿಗೆ carbon footprint ಅಂದ್ರೆ ಏನು ಅಂತಾನೆ ಗೊತ್ತಿರಲಿಕ್ಕಿಲ್ಲ? ನಮ್ಮ ದಿನನಿತ್ಯದ ಕೆಲಸಗಳಿಂದ ಎಷ್ಟು GHG emiision (ಹಸಿರುಮನೆ ಅನಿಲ ಹೊರಸೂಸುವಿಕೆ) ಉಂಟಾಗುತ್ತದೆ ಅಂತ ಗೊತ್ತಾ? ಮೋಸ್ಟ್ಲಿ ಅದರ ಬಗ್ಗೆ ನಮಗೆ ಕೇರ್ ಇಲ್ಲ. ಇವತ್ತು ಒಬ್ಬನೇ ಆರು ಸೀಟಿನ ಕಾರಿನಲ್ಲಿ ಕೆಲಸಕ್ಕೆ ಹೋಗಿ ಬಂದದ್ದರಿಂದ ಹಿಡಿದು, ಅರ್ಧಂಬದ್ಧ ತಿಂದು ಡಬ್ಬದಲ್ಲಿ ಬಿಸಾಕಿದ ಕೊಳೆತ ಅನ್ನ ಕೂಡ GHG ಅನಿಲಗಳನ್ನು ಹೊರಸೂಸುತ್ತದೆ. ನಮ್ಮೆಲ್ಲ ಕಾರ್ಯಗಳಲ್ಲಿ ಒಟ್ಟು ಎಷ್ಟು GHG ಅನಿಲಗಳನ್ನು ಹೊರಸೂಸುತ್ತೇವೆ ಅನ್ನುವುದನ್ನು ಲೆಕ್ಕ ಮಾಡುವ ಪ್ರಕಾರಕ್ಕೆ ಇಂಗಾಲದ ಹೆಜ್ಜೆಗುರುತು ಅಥವಾ carbon footprint ಅನ್ನುತ್ತೇವೆ.

ಈ ಚಳಿಗಾಲದಲ್ಲಿ ದೇಶದ ದೊಡ್ಡ ದೊಡ್ಡ ನಗರಗಳಲ್ಲೆಲ್ಲಾ AQI (Air Quality Index )ಮಟ್ಟ ತುಂಬಾ ಹೆಚ್ಚಾಗಿದೆ. ಹೌದು, ಈ ಮಾಲಿನ್ಯ ಹೆಚ್ಚಾಗಲು, ನಗರಗಳ ಭೌಗೋಳಿಕತೆಯೂ ಒಂದು ಕಾರಣವಿರಬಹುದು. ಆದರೆ, ಇವತ್ತಿನ ಮಾಲಿನ್ಯಕ್ಕೆ ಅದನ್ನೇ ಹೊಣೆ ಮಾಡ್ಬೇಕು ಅಂದ್ರೆ, ಮೊದಲಿನಿಂದಲೇ ಆ ಪ್ರದೇಶಗಳಲ್ಲಿ ನಗರಗಳನ್ನು ನಿರ್ಮಿಸೋದೇ ಬೇಡವಾಗಿತ್ತು.
ಪ್ರತಿಭಟನೆ ಮಾಡೋದರಿಂದ ಅಥವಾ ಸರ್ಕಾರ ಮಾತ್ರ ಹೊಣೆ ತೆಗೆದುಕೊಂಡ್ರೆ ಈ ಸಮಸ್ಯೆ ಬಗೆಹರಿಯೋದಿಲ್ಲ.
ಸರ್ಕಾರ, ನಾಗರಿಕರು, ಕೈಗಾರಿಕೆಗಳು, ಮಾಲಿನ್ಯದ ಎಲ್ಲಾ ನಿರ್ದಿಷ್ಟ ಮೂಲದ ಕಾರಣಕರ್ತರು ಕೈಜೋಡಿಸಿ ಸಾಮೂಹಿಕ ಜವಾಬ್ದಾರಿಯ ಹೊಣೆಗಾರಿಕೆ ತೆಗೆದುಕೊಳ್ಳಬೇಕು.

ನಮಗೆ ಬುದ್ಧಿ ಬರಲು ಮತ್ತೆ ಯಾವುದಾದರೂ ಗ್ಯಾಸ್ ಲೀಕ್ ಆಗ ಬೇಕಾಗಿಲ್ಲ, ಕೈಗಾರಿಕಾ ಅನಾಹುತ ಬೇಕಾಗಿಲ್ಲ ಅಥವಾ ಇನ್ನೊಂದು ಲಾಕ್ಡೌನ್ ಮಾಡಬೇಕಾಗಿಲ್ಲ. ಹವಾಮಾನ ಬದಲಾವಣೆಯ ಪರಿಣಾಮಗಳು ಜೋರಾಗುವ ಮೊದಲು ಈ ಗಾಳಿ, ನೀರು, ಮಣ್ಣು, ಆಹಾರ ಇವೆಲ್ಲದರ ಮಾಲಿನ್ಯ ನಮ್ಮ ನಿರ್ನಾಮ ಮಾಡಬಹುದು. ಇದನ್ನು ಈ ಹಂತದಲ್ಲೇ ಕಡಿಮೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಮುಂದಿನ ಪೀಳಿಗೆ ಇದನ್ನು “ಕೇಸ್ ಸ್ಟಡಿ” ಆಗಿ ಓದುವ ಮುಂಚೆ, ತಪ್ಪು ಮರುಕಳಿಸುವುದನ್ನು ನಿಲ್ಲಿಸುವ ಅತ್ಯಗತ್ಯವಿದೆ. ಒಬ್ಬರ ಸಾವು ಅಥವಾ ಒಮ್ಮೆ ಆದ ಅನಾಹುತ ಬದಲಾವಣೆಗೆ ಕಾರಣ ಆಗೋ ಹಾಗೆ ಇರಬಾರದು. ಮಾಡಿದ ತಪ್ಪುಗಳ ಪುನರಾವರ್ತನೆ ನಿಲ್ಲಲಿ. ಮುಂದಿನ ಮಾಲಿನ್ಯ ನಿಯಂತ್ರಣ ದಿನದ ಸಮಯ ಬರುವ ಮೊದಲು ಪರಿಹಾರ ಕಂಡುಹುಡುಕೋಣ ಎಂದು ಆಶಿಸುತ್ತೇನೆ.

ಬರಹ :
ಅಂಜಲಿ ವಾಗ್ಲೆ
ಅಂಜಲಿ ವಾಗ್ಲೆ

ಅಂಜಲಿ ವಾಗ್ಲೆ ಅವರು ಪರಿಸರ ಎಂಜಿನಿಯರಿಂಗ್‌ ಪದವೀಧರರು. ತ್ಯಾಜ್ಯ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯ ಕಲಿಕೆಯ ಆಳವಾದ ಕುತೂಹಲವೂ ಅವರ ಆಸಕ್ತಿಗಳಲ್ಲಿ ಸೇರಿವೆ. ಅವರು ಹವ್ಯಾಸಿ ಬರಹಗಾರರು.  

Mrs. Anjali Wagle Nayak A passionate environmental engineer with a strong commitment to sustainability. Her interests include waste management and climate change, along with a deep curiosity for learning. She writes part-time, explores new places and recipes, and enjoys creating content in her free time.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror