ನಿದ್ದೆ ಎಂದರೆ ಏನು? | ಮನುಷ್ಯನ ಆರೋಗ್ಯಕ್ಕೆ ನಿದ್ದೆ ಎಷ್ಟು ಮುಖ್ಯ..?

January 2, 2024
12:22 PM
ನಿದ್ರೆಯ ಬಗ್ಗೆ ತಿಳಿದುಕೊಳ್ಳಬೇಕಾದ ಸಾಕಷ್ಟು ಅಂಶಗಳು ಇವೆ.

ನಿದ್ರೆಯ(Sleep) ನಂತರ, ನಮಗೆ ಪುನಃ ತಾಜಾತನದ(Freshness) ಅನುಭವವಾಗುತ್ತದೆ. ಪ್ರತಿದಿನ ನಾವು ಪರಿಶ್ರಮದ ತರುವಾಯ ನಿದ್ರೆಗೆ ಹೋಗುತ್ತೇವೆ ಮತ್ತು ಬೆಳಿಗ್ಗೆ ಎದ್ದು ಮತ್ತೆ ಕೆಲಸಕ್ಕೆ(Work) ಹೋಗುತ್ತೇವೆ. ನಾವು ಸಾಕಷ್ಟು ನಿದ್ರೆ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ನೀವು ಅನುಭವಿಸಿರಬೇಕು. ನಾವು ಕೆರಳುತ್ತೇವೆ(irritable), ಕೆಲಸದಲ್ಲಿ ಏಕಾಗ್ರತೆ ಇರುವುದಿಲ್ಲ(lack concentration), ತೂಕಡಿಕೆ ಬರುತ್ತದೆ(feel drowsy), ಕೆಲವೊಮ್ಮೆ ತಲೆ ತಿರುಗುವುದು(dizzy), ಇದರಿಂದ ನಿದ್ರೆ ಅನಿವಾರ್ಯ ವಿಷಯ ಎಂದು ನಾವು ತಿಳಿದುಕೊಳ್ಳುತ್ತೇವೆ.

Advertisement

ಮಕ್ಕಳು 16 ರಿಂದ 18 ಗಂಟೆಗಳ ಕಾಲ ನಿದ್ರಿಸುತ್ತಾರೆ, ಈ ಸಮಯದಲ್ಲಿ ಚಯಾಪಚಯ ದರವು ಕಡಿಮೆಯಾಗಿದೆ ಮತ್ತು ಮಕ್ಕಳ ಬೆಳವಣಿಗೆಯಾಗುತ್ತದೆ. ನಿದ್ರೆ ಕ್ರಮೇಣ ಕಡಿಮೆಯಾಗುತ್ತದೆ. ಯುವ ವ್ಯಕ್ತಿಗಳಿಗೆ ಏಳರಿಂದ ಎಂಟು ಗಂಟೆಗಳು ನಿದ್ರೆ ಅಗತ್ಯ. ಆದರೆ ವೃದ್ಧಾಪ್ಯದಲ್ಲಿ ಐದರಿಂದ ಆರು ಗಂಟೆಗಳ ನಿದ್ದೆ ಸಾಕು. ಸಾಮಾನ್ಯವಾಗಿ ಮಧ್ಯಾಹ್ನ ಮಲಗುವುದಿಲ್ಲ. ಸುಮ್ಮನೆ ಮಲಗುವುದು ನಿದ್ರೆಯಲ್ಲ ಎಂದು ನಿಮಗೆ ತಿಳಿದಿದೆ.

ಎಲೆಕ್ಟ್ರೋಎನ್ಸೆಫಾಲೋಗ್ರಾಮ್ ಅಥವಾ ಮೆದುಳಿನ ಚಟುವಟಿಕೆಯ ನಕ್ಷೆಯ ಮೂಲಕ ನಿದ್ರೆಯನ್ನು ವಿಶ್ಲೇಷಿಸಿದರೆ, ಈ ಅವಧಿಯಲ್ಲಿ ಒಳಬರುವ ಮೆದುಳಿನ ಅಲೆಗಳು ಕಡಿಮೆಯಾಗುವುದನ್ನು ಕಾಣಬಹುದು; ಆದರೆ ಅವರ ಎತ್ತರ ಹೆಚ್ಚಾಗುತ್ತದೆ. ನಂತರದ ಹಂತದಲ್ಲಿ, ತ್ವರಿತ ಕಣ್ಣಿನ ಚಲನೆಗಳು ಮತ್ತು ಮೆದುಳಿನಿಂದ ಬರುವ ಅಲೆಗಳ ಸಂಖ್ಯೆಯು ಹೆಚ್ಚಾಗುತ್ತದೆ. ಈ ಅಲೆಗಳ ಎತ್ತರ ಕಡಿಮೆ.

ಒಂದು ನಿದ್ರೆಯ ಚಕ್ರದಲ್ಲಿ, ಕಣ್ಣಿನ ತೀವ್ರ ಚಲನೆಯಲ್ಲದ (NREM) ಮತ್ತು ಕಣ್ಣಿನ ತೀವ್ರ ಚಲನೆಯ (REM) ಎಂಬ ನಿದ್ರೆಯ ಎರಡು ಹಂತಗಳಿವೆ. ವಯಸ್ಕ ಒಂದು ಸಾಮಾನ್ಯ ನಿದ್ರೆಯಲ್ಲಿ ಇಂತಹ ನಾಲ್ಕರಿಂದ ಐದು ಚಕ್ರಗಳು ಪೂರ್ಣಗೊಳ್ಳುತ್ತವೆ. ಪ್ರತಿ ಚಕ್ರದ ಅವಧಿಯು ಒಂದೂವರೆ ಗಂಟೆ.

ಬೆನ್ನುಹುರಿಯಲ್ಲಿನ ನರಕೋಶಗಳ ಮೇಲೆ ನಿದ್ರೆ ಅವಲಂಬಿತವಾಗಿದೆ. ಆದ್ದರಿಂದ, ಈ ಪ್ರದೇಶವು ಹಾನಿಗೊಳಗಾದರೆ ಅಥವಾ ಇದರ ಮೇಲೆ ಪರಿಣಾಮವಾದರೆ, ಅತಿ ನಿದ್ರೆ ಬರುತ್ತದೆ ಅಥವಾ ಸಾಕಷ್ಟು ನಿದ್ರೆ ಬರುವುದಿಲ್ಲ. ಇದು ನಿಜವಾಗಿದ್ದರೂ, ಅತಿಯಾದ ನಿದ್ರೆ ಸಾಮಾನ್ಯವಾಗಿ ಅಭ್ಯಾಸದ ಪರಿಣಾಮವಾಗಿದೆ. ಆದ್ದರಿಂದ, ಸರಿಯಾದ ಅಭ್ಯಾಸವು ರೂಡಢಿಸಿಕೊಂಡರೆ ನಿದ್ರೆಯನ್ನು ಸಾಮಾನ್ಯಗೊಳಿಸಬಹುದು.

ಈ ಅವಧಿಯಲ್ಲಿ ದೇಹವು ವಿಶ್ರಾಂತಿ ಪಡೆಯುವುದರಿಂದ ನಿದ್ರೆಯು ಜೀವನಕ್ಕೆ ಅವಶ್ಯಕವಾಗಿದೆ. ಉಸಿರಾಟ ಮತ್ತು ರಕ್ತಪರಿಚಲನೆಯ ಕಾರ್ಯವು ನಿಧಾನಗೊಳ್ಳುತ್ತದೆ. ಇಂತಹ ಈ ನಿದ್ದೆ ಜಾಸ್ತಿಯಾದರೆ, ನಿದ್ದೆಬಡುಕ ಎಂದು ಟೀಕೆ ಮಾಡುತ್ತಾರೆ; ಕಡಿಮೆಯಾದರೆ ಆತಂಕವೂ ಕಾಡುತ್ತದೆ.

ಡಾ. ಅಂಜಲಿ ದೀಕ್ಷಿತ್ ಮತ್ತು ಡಾ. ಜಗನ್ನಾಥ ದೀಕ್ಷಿತರ ಪುಸ್ತಕದಿಂದ ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ.

After sleep, we feel fresh again. Every day we go to sleep after exertion and wake up in the morning to go to work again. You must have experienced what happens when we don't get enough sleep. We get irritable, lack concentration at work, feel drowsy, sometimes dizzy, so we realize that sleep is a must.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ
ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group