Opinion

ಹವಾಮಾನ ಬದಲಾವಣೆಯಿಂದ ನಮಗೇನು ತೊಂದರೆ…? | ಇದರ ಮೊದಲ ಬಲಿಪಶು ರೈತ..!

Share

ಹವಾಮಾನ ಬದಲಾವಣೆಯಿಂದ ನಮಗೇನು ತೊಂದರೆ…? ಅದಕ್ಕೂ ನಮಗೂ ಸಂಬಂಧವಿಲ್ಲ.., ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಎನ್ನುವವರೇ ಕೇಳಿ. ಇದರ ಮೊದಲ ಬಲಿ ಪಶು ರೈತ..! ಹೇಗೆಂದರೆ, ಹವಾಮಾನ ಬದಲಾವಣೆ/ವೈಪರೀತ್ಯದ ಪರಿಣಾಮ ಮೊದಲು ರೈತರ ಮೇಲೆ ಪ್ರಭಾವ ಬೀರುತ್ತದೆ.ಇದು ಇಡೀ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ.

Advertisement

ಕಾಲವಲ್ಲದ ಕಾಲದಲ್ಲಿ ಮಳೆಯಾಗ್ತದೆ, ಮಲೆನಾಡಿನಂತೆ ಬಯಲು ಸೀಮೆಯಲ್ಲಿ ಮಳೆಯಾಗುತ್ತಿದೆ. ಮಳೆ, ಚಳಿ, ಬಿಸಿಲು ನಿಸರ್ಗದ ಲಯ ತಪ್ಪಿವೆ. ಇದಕ್ಕೇ ಹವಾಮಾನ ಬದಲಾವಣೆ/ ಹವಾಮಾನ ವೈಪರೀತ್ಯ ಅಥವಾ ಕ್ಲೈಮಟ್ ಚೇಂಚ್ ಎನ್ನುತ್ತಿದ್ದಾರೆ. ಇದನ್ನು ಇನ್ನೂ ಸೀರಿಯಸ್ ಆಗಿ ಜನರು ಯೋಚಿಸುತ್ತಿಲ್ಲ.

ಜನರ ಮನಸ್ಸಿನಲ್ಲಿ ರಾಜಕೀಯದವರು ಏರಿಸಿರುವ ಧರ್ಮದ ನಶೆ ಮಾತ್ರ ಇದೆ.! ಅದಷ್ಟೇ ಸಾಕು ರಾಜಕೀಯದವರಿಗೂ.
ಇಷ್ಟೊತ್ತಿಗೆ ಹವಾಮಾನ ಬದಲಾವಣೆ ಒಂದು ರಾಜಕೀಯ ವಿಷಯವಾಗಬೇಕಿತ್ತು! ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಹವಾಮಾನ ಬದಲಾವಣೆ ಜೊತೆ ಹೊಂದಿಕೊಳ್ಳುವ ಯೋಜನೆಗಳ ರೂಪು ರೇಷೆ ರೂಪಿಸಬೇಕಿತ್ತು.
ರಾಜಕೀಯದವರ ವಿಷಯ ಹಾಳಾಗಿ ಹೋಗಲಿ ಬಿಡಿ, ಕನಿಷ್ಠ ಪಕ್ಷ ರೈತರಾದರೂ ತಲೆಕೆಡಿಸಿಕೊಳ್ಳಬೇಕಾಗಿತ್ತು. ಹಾಗಾಗಲಿಲ್ಲ..

ರೈತರಿಗೋಸ್ಕರ ಕೆಲವು ಗ್ರಹಿಕೆಗಳು : ಈ ಹವಾಮಾನ ಬದಲಾವಣೆ ಎಂದರೆ ಸರಳವಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಹಲಸು, ಮಾವು, ತೆಂಗಿನಮರದ ಹತ್ತಿರ ಹೋಗಿ., ನಿಂತು ಮಾತಾಡಿ.‌. ಆವಾಗ ಅರ್ಥ ಆಗುತ್ತದೆ.. ಹಲಸಿನ ಮರಗಳಲ್ಲಿ ಪ್ರತಿ ವರ್ಷ ಇಷ್ಟೊತ್ತಿಗೆ ಹೂವು ಕಾಯಿ ಬಿಡಬೇಕಿತ್ತು, ಬಿಟ್ಟಿಲ್ಲ. ಮಾವು ಹೂವಾಗುವುದೇ ತಡವಾಗುತ್ತಿದೆ; ಇಷ್ಟೊತ್ತಿಗೆ ಹೂವಾಗಬೇಕಿತ್ತು..

ತೆಂಗಿನ ಮರದ ಗರಿಗಳೆಲ್ಲಾ ನವಂಬರ್ ತಿಂಗಳಲ್ಲೇ ಒಣಗಿ ಉದುರಬೇಕಿತ್ತು, ಉದುರಿಲ್ಲ… ತೇಗದ ಮರಗಳ ಎಲೆ ನವೆಂಬರ್ ನಲ್ಲಿ ಉದುರಿಸಬೇಕಿತ್ತು, ಉದುರಿಲ್ಲ.. ತೆಂಗಿನ ಮರದಲ್ಲಿ ಈಗ ಕೂಳೆ ಕಾಯಿ ಬರಬೇಕಿತ್ತು, ಇನ್ನೂ ತುಂಬಿದ ಗೊನೆಗಳ ಕೋಯ್ಲು ಮಾಡಲಾಗುತ್ತಿದೆ.. ಮುಂದಿನ ವರ್ಷಕ್ಕೆ ಫಲವೇ ಕಡಿಮೆ ಅನ್ನುವ ಹಾಗೆ ಕಾಣುತ್ತಿದೆ..! ಗೆಡ್ಡೆ ಗೆಣಸು ಚೆನ್ನಾಗಿ ಬಿಟ್ಟಿವೆ. ಈ ತರ ಎಲ್ಲವೂ ಅದಲು ಬದಲಾಗಿದೆ..!

ನಮ್ಮ ಆಹಾರ ಮತ್ತು ಜೀವನ ಶೈಲಿ ಬದಲಾಗಿಲ್ಲ.. ನಿಸರ್ಗದಿಂದ ನೋಡಿ ಕಲಿಯದೇ ಹೋದರೆ ಮುಂದೆ ಭೀಕರ ಅಪಾಯಗಳು ಬಂದೊದಗಲಿವೆ. ಇಡೀ ಭಾರತ ದೇಶವೇ ಪ್ರೋಟೀನ್ ಸಮಸ್ಯೆಯಿಂದ ಬಳಲುತ್ತಿದೆ.. ಈ ಪ್ರೋಟೀನ್ ಮೂಲದ ಕಾಳುಗಳು ಈ ವರ್ಷ ಸರಿಯಾಗಿ ಒಣಗದೆ ಅದರ ತುಂಬಾ ಅಪ್ಲಾ ಟಾಕ್ಸಿನ್ ತರದ ವಿಷ ತುಂಬಿವೆ.. ಇದಕ್ಕೆ ಉದಾಹರಣೆ ನೋಡಿ, ಹೆಸರುಕಾಳು ಕೋಯ್ಲು ಸಮಯ ಮಳೆ ಬಂತು, ಈಗ ಹುರುಳಿಕಾಳಾದರೂ ಚೆನ್ನಾಗಿ ಬರುತ್ತಿದೆ, ಅವರೆಕಾಳಾದರೂ ಸಿಗುತ್ತವೆ ಎನ್ನುವ ಸಮಯದಲ್ಲಿ ಮತ್ತೆ ಮಳೆಯಾಗುತ್ತಿದೆ.. ಈ ಮಳೆಗೆ ಕಾಳು ಕಡ್ಡಿ ನೆನೆದಾಗ, ಸರಿಯಾಗಿ ಒಣಗಿಸದೇ ಇದ್ದಾಗ ಆ ಕಾಳುಗಳಲ್ಲಿ ಭಯಾನಕ ವಿಷಕಾರಿಯಾದ ಅಪ್ಲಾಟಾಕ್ಸಿನ್ ತುಂಬಿಕೊಳ್ಳುತ್ತದೆ..! ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಇದು ಮನುಷ್ಯನ ದೇಹ ಸೇರಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ..!

ಇದೆಲ್ಲಾ ಹವಾಮಾನ ವೈಪರಿತ್ಯದ ಪರಿಣಾಮಗಳು..! : ವಿಪರೀತ ಮಳೆ ಅಥವಾ ಮಳೆಯಿಲ್ಲದ ಕಾರಣದಿಂದ ಒಣಭೂಮಿಯ ಬೆಳೆಗಳು ಫಲ ಬಿಡುವುದಿಲ್ಲ.. ಪರಾಗಸ್ಪರ್ಶಕ್ಕೂ ತೊಂದರೆಯಾಗುತ್ತದೆ ಮತ್ತು ಬಿಸಿಲಿನ ತೀವ್ರತೆಯೂ, ಕೊರತೆಯೂ ಕಾರಣವಾಗುತ್ತದೆ. ಹಲಸು, ಮಾವು ಈ ವರ್ಷ ತೋಟಗಳಲ್ಲಿ ಕೈಕೊಟ್ಟಿವೆ. ಸಪೋಟ ಕೂಡ ಕಡಿಮೆ ಫಸಲು ಬಿಟ್ಟಿದೆ. ತೆಂಗಿನಲ್ಲಿಯೂ ಇಳುವರಿ ಕಡಿಮೆಯಾಗಿದೆ ಕಾರಣ ವಿಪರೀತ ಮಳೆ ಅಥವಾ ಬೀಳುವ ಮಳೆಯ ಪ್ರಮಾಣ ಸಾಕಾಗದೆ ಇರಬಹುದು. ಅಕಾಲಿಕ ಮಳೆ ಕೂಡ ದೊಡ್ಡ ಮಟ್ಟದ ಹಾನಿಯನ್ನು ಮಾಡುತ್ತಿದೆ..

ಆರ್ಥಿಕವಾಗಿ ತರಕಾರಿ ಕೃಷಿ ಅವಲಂಭಿತ ರೈತರು ಇಂತಹ ಹವಾಮಾನ ವೈಪರಿತ್ಯದ ಕಾರಣ ಹೆಚ್ಚು ಹೆಚ್ವು ರಾಸಾಯನಿಕಗಳನ್ನು ಕೃಷಿಯಲ್ಲಿ ಬಳಸುತ್ತಿದ್ದಾರೆ. ಇದರಿಂದ ಗ್ರಾಹಕನ ಹೊಟ್ಟೆಗೆ ರಾಸಾಯನಿಕಗಳು ಸೇರುತ್ತಿವೆ..
ಹವಾಮಾನ ಬದಲಾವಣೆ ಎದುರಿಸುವತ್ತ ಯೋಚಿಸುವ ಬದಲು, ರೈತರು ಆರ್ಥಿಕ ಬೆಳೆಗಳ ಕಡೆ ಯೋಚಿಸುತ್ತಿದ್ದಾರೆ..
ಇದರ ಬಗ್ಗೆ ಯೋಚಿಸಿ, ಯೋಜಿಸಿ ಕಾರ್ಯಪ್ರವೃತ್ತರಾಗಬೇಕಿದ್ದ ವಿಶ್ವವಿದ್ಯಾಲಯಗಳು, ಸರ್ಕಾರಿ ಇಲಾಖೆಗಳು ಅಷ್ಟೇನು ಆಶಾದಾಯಕವಾಗಿ ಕಾಣುತ್ತಿಲ್ಲ..

ಏನೆಲ್ಲಾ ಮಾಡಬಹುದು.? ಏನೆಲ್ಲಾ ಅನಾಹುತ ಆಗಿವೆ.? ಏನೆಲ್ಲಾ ಆಗಬಹುದು.? ಇದರ ಬಗ್ಗೆ ಆಳವಾದ ಅಧ್ಯಯನಗಳು ಆಗಬೇಕು..

ಒಂದು ಅಧ್ಯಯನದ ಪ್ರಕಾರ, ಉತ್ತರ ಭಾರತದಲ್ಲಿ ಗೋಧಿ ಮತ್ತು ಭತ್ತ ಉತ್ಪಾದನೆ ಗಣನೀಯವಾಗಿ ಕುಸಿದಿದೆ ಎನ್ನುತ್ತಿದ್ದಾರೆ. ಈ ಪರಿಣಾಮ ನಮ್ಮಲ್ಲಿಯ ಬೆಳೆಗಳ ಉತ್ಪಾದನೆ ಮೇಲೆಯೂ ಆಗಿದೆ. ಬೇಸಿಗೆಯಲ್ಲಿ ಕಾಳುಗಳ ಮತ್ತು ಆಹಾರ ಧಾನ್ಯಗಳ ಉತ್ಪಾದನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಈ ವರ್ಷ ಗೆಡ್ಡೆ-ಗೆಣಸು ಮಳೆಗಾಲದಲ್ಲಿ ಚೆನ್ನಾಗಿ ಬಂದಿವೆ, ನಮ್ಮ ಆಹಾರದಲ್ಲಿ ಗೆಡ್ಡ-ಗೆಣಸುಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಬೆಳೆ, ತಳಿಗಳನ್ನು ತರಬೇಕು. ಎಚ್ಚೆತ್ತುಕೊಳ್ಳಬೇಕಿದೆ..

ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಬಗೆಯ ಚರ್ಚೆಗಳಾಗಬೇಕಿದೆ. ಈ ಬಗ್ಗೆ ಚರ್ಚಿಸಲು ವೇದಿಕೆಗಳು ಸಿದ್ಧವಾಗುತ್ತಿದೆ. ಇದೀಗ  ದಿನಾಂಕ 19/07/2023 ರ ಬುಧವಾರ ದಂದು, ಕೊಳ್ಳೇಗಾಲದ ಅರಣ್ಯ ಇಲಾಖೆಯ ಕಾವೇರಿ ಸಭಾಂಗಣದಲ್ಲಿ. ಬೆಳಗ್ಗೆ 10 ಗಂಟೆಯಿಂದ. ಮಾಹಿತಿಗಾಗಿ : 9880949689

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ

ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…

2 minutes ago

ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 minutes ago

ಹವಾಮಾನ ವರದಿ | 10-04-2025 | ಎ.18 ರ ತನಕವೂ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮಳೆ

11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

15 hours ago

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

20 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

22 hours ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

22 hours ago