ಭಾರತ ಮತ್ತು ಬಾಂಗ್ಲಾದೇಶ ವ್ಯಾಪಾರ ವಹಿವಾಟು ಹೇಗಿದೆ..?

December 26, 2025
6:12 AM

ಬಾಂಗ್ಲಾದೇಶವು ದೈನಂದಿನ ಜೀವನದಿಂದ ಹಿಡಿದ ಆರೋಗ್ಯ ಕ್ಷೇತ್ರದವರೆಗೆ ಬಹುಮಟ್ಟಿಗೆ ಭಾರತ ದೇಶವನ್ನು ಅವಲಂಬಿತವಾಗಿದೆ. ಈ ವ್ಯಾಪಾರ ವ್ಯವಸ್ಥೆಗಳು ಎರಡು ಮೂರು ದಿನದಿಂದ ಶುರುವಾದ ಸಂಬಂಧವಲ್ಲ. ಹೊರತು, ದಶಕಗಳಿಂದ ಈ ಎರಡು ರಾಷ್ಟ್ರಗಳ ನಡುವೆ ಬಲವಾದ ವ್ಯಾಪಾರ ಸಂಬಂಧಗಳು ನಿರ್ಮಾಣವಾಗಿದೆ. ಆದರಲ್ಲೂ ಬಾಂಗ್ಲಾದೇಶದ ಆಹಾರ ಭದ್ರತೆಯಲ್ಲಿ ಭಾರತದ ಪಾತ್ರ ಅತ್ಯಂತ ಪ್ರಮುಖವಾಗಿದೆ.

ಬಾಂಗ್ಲಾದೇಶವೂ ಸುಮಾರು 2.1 ಮಿಲಿಯನ್ ಮೆಟ್ರಿಕ್ ಟನ್ ಗೋಧಿ ಆಮದು ಮಾಡಿಕೊಂಡಿತ್ತು. ಗೋಧಿಯ ಜೊತೆಗೆ ಬಾಸ್ಮತಿ ಅಕ್ಕಿಯನ್ನು ಭಾರತದಿಂದ ರಫ್ತು ಮಾಡಲಾಗುತ್ತದೆ. 2021-22 ರಲ್ಲಿ ಮಾತ್ರ ಬಾಂಗ್ಲಾದೇಶವು ಭಾರತದಿಂದ ರೂ 5,000 ಕೋಟಿಗೂ ಹೆಚ್ಚು ಮೌಲ್ಯದ ಸಕ್ಕರೆಯನ್ನು ಖರೀದಿಸಿತ್ತು. ಇದರ ಜೊತೆಗೆ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮುಂತಾದ ದಿನನಿತ್ಯದ ತರಕಾರಿಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಸರಬರಾಜಾಗುತ್ತವೆ. ಮಾತ್ರವಲ್ಲ, ಮಸಾಲೆ ಪಾದಾರ್ಥ, ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಸಂಸ್ಕರಿಸಿದ ಆಹಾರಗಳಿಗೂ  ಭಾರತವನ್ನು ಅವಲಂಬಿತವಾಗಿದೆ.

ಆದರಲ್ಲೂ ಅತ್ಯಂತ ಮಹತ್ವದ ಉದ್ಯೋಗ ಕ್ಷೇತ್ರವಾಗಿರುವ ಜವಳಿ ಉದ್ಯಮಕ್ಕೆ ಬಾಂಗ್ಲಾದೇಶವು 11% ಕೊಡುಗೆ ನೀಡಿದರೆ, ಈ ಉದ್ಯಮಕ್ಕೆ ಹತ್ತಿಯ ಅವಶ್ಯಕತೆ ಇರುವುದು ಭಾರತದ ಹತ್ತಿ. ಹತ್ತಿನ ರಫ್ತು ಸುಮಾರು 35% ಬಾಂಗ್ಲಾದೇಶಕ್ಕೆ ಹೋಗುತ್ತದೆ. ಒಂದು ವೇಳೆ ಹತ್ತಿಯ ಸರಬರಾಜುವಿಗೆ ಅಡ್ಡಿಪಡಿಸಿದರೆ, ಲಕ್ಷಾಂತರ ಉದ್ಯೋಗಗಳು ಅಪಾಯದಲ್ಲಿರುತ್ತವೆ. ಜೊತೆಗೆ, ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು, ಪ್ಲಾಸ್ಟಿಕ್, ಉಕ್ಕು, ವಿದ್ಯುತ್ ಉಪಕರಣಗಳು ಮತ್ತು ಔಷಧಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಪೂರೈಕೆಯಾಗುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ
ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
October 10, 2026
2:44 PM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror