ಹಿಂದುತ್ವ ಭಾಷಣಗಾರ್ತಿ ಚೈತ್ರಾ ಕುಂದಾಪುರಳನ್ನು ಕೋಟ್ಯಂತರ ರೂಪಾಯಿ ವಂಚನೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಂಧನದ ನಂತರ ಆಕೆ ಮಾಡಿರುವ ಒಂದೊಂದೇ ಅವಾಂತರಗಳ ಬಗ್ಗೆಯೂ ಮಾಹಿತಿ ಹೊರಬರುತ್ತಿದೆ.ಹೆಚ್ಚಿನ ತನಿಖೆಗೂ ಮುನ್ನ ಆಕೆ ಅಸ್ವಸ್ಥಗೊಂಡಿದ್ದಳು ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಣ ಪಡೆದಿರುವುದನ್ನು ಸತ್ಯ ಒಪ್ಪಿಕೊಂಡಿದ್ದಾಳೆ. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಹಣ ಪಡೆದಿದ್ದಾಗಿ ಚೈತ್ರಾ ಕುಂದಾಪುರ ಬಾಯ್ಬಿಟ್ಟಿದ್ದಾಳೆ. ಆದರೆ 5 ಕೋಟಿ ರೂ. ಅಲ್ಲ 3 ಕೋಟಿ ರೂ. ಪಡೆದಿರುವ ಬಗ್ಗೆ ಚೈತ್ರಾ ಕುಂದಾಪುರ ಮತ್ತು ಆಕೆಯ ಗ್ಯಾಂಗ್ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ ಹಣ ಪಡೆದಿರುವುದಾಗಿ ವಂಚನೆ ಪ್ರಕರಣದ ಏಳನೇ ಆರೋಪಿ ಶ್ರೀಕಾಂತ್ ಒಪ್ಪಿಕೊಂಡಿದ್ದಾನೆ. ಗೋವಿಂದ್ ಬಾಬು ಅವರಿಂದ ನಾನೇ ಹಣ ಪಡೆದುಕೊಂಡು ಬಂದು ಚೈತ್ರಾ ಕುಂದಾಪುರ, ಗಗನ್ಗೆ ನೀಡಿದ್ದೇನೆ ಸತ್ಯ ಒಪ್ಪಿಕೊಂಡಿದ್ದಾನೆ. ಆದರೆ, ಆರೋಪಿಗಳು ಈಗ ಆ ಹಣ ಎಲ್ಲಿದೆಯೋ ಗೊತ್ತಿಲ್ಲ ಎನ್ನುತ್ತಿದ್ದಾರೆ.
(Source : news Agencies )
ಈಗಿನಂತೆ ಎಪ್ರಿಲ್ 29 ಅಥವಾ 30ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ…
ಬದುಕಿನ ಯಾನಕ್ಕೆ ಪಾಲಕರು ರೇಖೆಯನ್ನು ಎಳೆದು ತೋರಿಸುತ್ತಾರೆ. ಅದು ಭವಿಷ್ಯದ ಕೈತಾಂಗು. ರಕ್ಷಣೆ…
ಹನುಮಸಾಗರ ಗ್ರಾಮದ ಏಳು ವರ್ಷದ ಪ್ರದ್ವಿಕಾ ಕಣ್ಣಿಗೆ ಬಟ್ಟೆ ಕಟ್ಟಿ6 ನಿಮಿಷದಲ್ಲಿ 112…
ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಜಾಥದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ…
ಜಾಗತಿಕರಣದ ಆಕ್ರಮಣದಿಂದ ಜನಸಮುದಾಯಗಳ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಪರಿಣಾಮಕಾರಿ ಪ್ರಯತ್ನ…