Advertisement
The Rural Mirror ಫಾಲೋಅಪ್

ಅಡಿಕೆ ಕೊಳೆರೋಗ | ಕೊಳೆರೋಗಕ್ಕೆ ಮುಂಜಾಗ್ರತಾ ಕ್ರಮವಾಗಿ ಏನು ಸಿಂಪಡಣೆ ಆಯ್ತು…? ಸಿಪಿಸಿಆರ್‌ಐ ಶಿಫಾರಸು ಹೊರತಾಗಿಯೂ ನಡೆದ ಸಿಂಪಡಣೆ ಯಾವುದು..?

Share

ಈ ಬಾರಿಯ ಮಳೆ ಅಡಿಕೆ ಬೆಳೆಗಾರರನ್ನು ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ. ಹಾಗೆಂದು ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆಯಾಗಿಲ್ಲ. ಆದರೆ ನಿರಂತರವಾಗಿ ಮಳೆ ಸುರಿಯಿತು. ಈ ಬಾರಿ ಜೂನ್‌ ತಿಂಗಳಲ್ಲಿ ಸುಮಾರು 1090 ಮಿಮೀ ಮಳೆಯಾದರೆ, ಜುಲೈ ತಿಂಗಳಲ್ಲಿ 1650 ಮಿಮೀ ಮಳೆಯಾಗಿದೆ. ಅದೇ ಕಳೆದ ವರ್ಷ ಜೂನ್‌  ತಿಂಗಳಲ್ಲಿ 965 ಮಿಮೀ ಮಳೆ ಹಾಗೂ ಜುಲೈ ತಿಂಗಳಲ್ಲಿ 1770 ಮಿಮೀ ಮಳೆಯಾಗಿತ್ತು. ವಾರ್ಷಿಕವಾಗಿಯೂ ಕಳೆದ ವರ್ಷ 5770 ಮಿಮೀ ಹಾಗೂ ಈ ವರ್ಷ ಇದುವರೆಗೆ 5068 ಮಿಮೀ ಮಳೆಯಾಗಿದೆ. ಈ ಅಂಕಿ ಅಂಶ ಸುಳ್ಯದ ಗುತ್ತಿಗಾರಿನದ್ದು, ಕೆಲವು ಕಡೆ 100 ಮಿಮೀ ಹೆಚ್ಚು ಕಡಿಮೆ ಇರಬಹುದು.  ಅಂದರೆ ಒಟ್ಟಾರೆಯಾಗಿ ಈ ವರ್ಷ ಮಳೆ ಭಾರೀ ಸುರಿದಿಲ್ಲ, ಆದರೆ ನಿರಂತರವಾಗಿ ಸುರಿದ ಮಳೆಯಿಂದ ಔಷಧಿ ಸಿಂಪಡಣೆ ಸಾಧ್ಯವಾಗಿಲ್ಲ. ಹೀಗಾಗಿ ಕೊಳೆರೋಗ ವ್ಯಾಪಕವಾಗಿ ಹರಡಿದೆ.

ಅಡಿಕೆ ಕೊಳೆರೋಗ ನಿಯಂತ್ರಣಕ್ಕೂ ಮೊದಲು ಕೊಳೆ ರೋಗ ಮುಂಜಾಗ್ರತಾ ಕ್ರಮವಾಗಿ ಮಳೆಗಾಲದ ಆರಂಭದಲ್ಲಿ ಔಷಧಿ ಸಿಂಪಡಣೆಯನ್ನು ಬಹುತೇಕ ಕೃಷಿಕರು ಮಾಡುತ್ತಾರೆ. ಬಹುತೇಕ ಮಂದಿ ಕೃಷಿಕರು ಬೋರ್ಡೋ ಸಿಂಪಡಣೆಯನ್ನು ಮಾಡುತ್ತಾರೆ. ಈ ಬಾರಿಯೂ ಶೇ.85 ರಷ್ಟು ಕೃಷಿಕರು ಮೊದಲ ಸಿಂಪಡಣೆಗೆ ಬೋರ್ಡೋ ಸಿಂಪಡಣೆ ಮಾಡಿದ್ದಾರೆ. ಶೇ.5 ರಷ್ಟು ಕೃಷಿಕರು ಮೆಟಲಾಕ್ಸಿಲ್‌ ಹಾಗೂ ಮ್ಯಾಂಕೋಜೆಬ್‌ ಸಿಂಪಡಣೆ ಮಾಡಿದ್ದರೆ, ಶೇ.2.4 ಕೃಷಿಕರು ಪೊಟಾಸಿಯಂ ಪಾಸ್ಫೋನೇಟ್‌ ಸಿಂಪಡಣೆ ಮಾಡಿದ್ದಾರೆ. ಶೇ.7.4 ರಷ್ಟು ಕೃಷಿಕರು ಬೇರೆ ಔಷಧಿ ಸಿಂಪಡಣೆ ಮಾಡಿದ್ದಾರೆ. ಅಂದರೆ ಕ್ಯುಪ್ರೋಫಿಕ್ಸ್‌, ಕಾಪರ್‌ ಆಕ್ಸಿ ಕ್ಲೋರೈಡ್‌,ಬ್ಲೈಟೆಕ್ಸ್..‌ ಹೀಗೇ ಬೇರೆ ಬೇರೆ ಔಷಧಿಗಳನ್ನು ಸಿಂಪಡಣೆ ಮಾಡಿದ್ದಾರೆ. ಸಿಪಿಸಿಆರ್‌ಐ ಮಾಡುವ ಶಿಫಾರಸು ಅಡಿಕೆ ಕೊಳೆರೋಗಕ್ಕೆ ಬೋರ್ಡೋ ದ್ರಾವಣ. 1:1 ಅನುಪಾತದಲ್ಲಿ ಸುಣ್ಣ ಹಾಗೂ ಕಾಪರ್‌ಸಲ್ಪೇಟ್‌ ಬಳಕೆಗೆ ಹೇಳುತ್ತದೆ. ಅದರ ಜೊತೆಗೆ ಇತರ ಯಾವುದೇ ಔಷಧಿಗಳು ಅಗತ್ಯವಿಲ್ಲ ಎಂದು ಹೇಳುತ್ತದೆ. ಒಂದು ವೇಳೆ ಬೇರೆ ಸಿಂಪಡಣೆ ಇದ್ದರೆ ಅದನ್ನು ಪ್ರತ್ಯೇಕವಾಗಿಯೇ ಸಿಂಪಡಿಸಬೇಕು ಎಂದು ಬೆಳೆಗಾರರಿಗೆ ಸಲಹೆ ನೀಡುತ್ತದೆ. ಆದರೂ ಅಡಿಕೆ ಬೆಳೆಗಾರರು ತಮಗೆ ಅನುಕೂಲ ಹಾಗೂ ಫಲಿತಾಂಶ ಲಭಿಸಿದ ಮಾರ್ಗದಲ್ಲಿಯೇ ಕೃಷಿ ಕ್ರಮ ಹಾಗೂ ಔಷಧಿ ಸಿಂಪಡಣೆ ಮಾಡುತ್ತಿರುವುದು ಕಂಡುಬಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

ಬೋರ್ಡೋ ತಯಾರಿಕೆಯಲ್ಲಿ ಬಹಳಷ್ಟು ವ್ಯತ್ಯಾಸಗಳು ಇವೆ. ಕೆಲವು ಕೃಷಿಕರು 1:1 ಮಾದರಿಯಲ್ಲಿ ತಯಾರಿ ಮಾಡಿದರೆ ಇನ್ನೂ ಕೆಲವರು ಸುಣ್ಣ ಹೆಚ್ಚು ಬಳಕೆ ಮಾಡಿದ್ದಾರೆ. ಅಚ್ಚರಿ ಎಂದರೆ, 1 ಕೆಜಿ ಸುಣ್ಣ ಹಾಗೂ ಒಂದು ಕೆಜಿ ಮೈಲುತುತ್ತವನ್ನು 200 ಲೀಟರ್‌ ಗೆ ಹಾಕಿ ಸಿಂಪಡಣೆ ಮಾಡುವ ವಿಧಾನವೂ ಇದೆ. ಹೀಗೇ ವಿವಿಧ ಪ್ರಯತ್ನಗಳು ಕೃಷಿಕರಲ್ಲಿರುವುದು ಕಂಡುಬಂದಿದೆ.

ಹೀಗೇ ಒಂದನೇ ಸಿಂಪಡಣೆ ಬಳಿಕ ಕೊಳೆರೋಗ ಯಾರಲ್ಲಿ ಇದೆ ಎನ್ನುವ ಪ್ರಶ್ನೆಗೆ ಶೇ.95.6 ಕೃಷಿಕರಲ್ಲಿ ಅಡಿಕೆಗೆ ಕೊಳೆರೋಗ ಬಾಧಿಸಿದೆ ಎಂದು ಉತ್ತರಿಸಿದ್ದರು. ಶೇ.4.4 ಕೃಷಿಕರು ಆರಂಭದಲ್ಲಿ ಕೊಳೆರೋಗ ಇಲ್ಲ ಎಂದು ಹೇಳಿದ್ದರು. ಆದರೆ ಆಗಸ್ಟ್‌ ತಿಂಗಳ ಅಂತ್ಯದ ವೇಳೆಗೆ ಅವರಲ್ಲಿ ಶೇ.2 ರಷ್ಟು ಕೃಷಿಕರು ನಮ್ಮಲ್ಲೂ ಕೊಳೆರೋಗ ಕಂಡುಬಂದಿದೆ ಎಂದು ಹೇಳಿದ್ದಾರೆ. ಹೀಗಾಗಿ ಕೊಳೆರೋಗದ ತೀವ್ರತೆ ಶೇ.98 ರಷ್ಟು ಕಂಡುಬಂದಿದೆ…… ( ನಾಳೆ ಮುಂದುವರಿಯುತ್ತದೆ…..)  ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

7 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

8 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

8 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

8 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

9 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

1 day ago