ಮೆಟಾ ಒಡೆತನದ ವಾಟ್ಸ್ಆ್ಯಪ್(Whats App ) ಈಗ ವಿನೂತನವಾದ ಅಪ್ಡೇಟ್ ಮೂಲಕ ತನ್ನ ಗ್ರಾಹಕರಿಗೆ ಹೆಚ್ಚಿನ ಸೇವೆ ನೀಡುತ್ತಿದೆ. ಇದೀಗ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್ ಪರಿಚಯಿಸಿದೆ. ಈ ನೂತನ ಪೀಚರ್‌ನೊಂದಿಗೆ ರೂರಲ್ ಮಿರರ್ ಕೂಡಾ Update ಆಗಿದೆ. ಹೀಗಾಗಿ ಇನ್ನು ಮುಂದೆ ಕಮ್ಯೂನಿಟಿ ಫೀಚರ್ಸ್ ಹೆಚ್ಚು ಸುಲಭವಾಗಿ ಸುದ್ದಿಗಳನ್ನು, ಮಾಹಿತಿಗಳನ್ನು ಹಂಚಲು ಸಾಧ್ಯವಾಗುತ್ತದೆ.
ಕಳೆದ ಕೆಲವು ಸಮಯಗಳಿಂದ ವಾಟ್ಸ್ಆ್ಯಪ್ ಹೊಸ ಹೊಸ ಪೀಚರ್‌ಗಳ ಮೂಲಕ ಇನ್ನಷ್ಟು ಜನಸ್ನೇಹಿಯಾಗುತ್ತಿದೆ. ಇದೀಗ ತನ್ನ ಗ್ರಾಹಕರಿಗೆ ಕಮ್ಯೂನಿಟಿ ಫೀಚರ್ಸ್ ಜಾಗತಿಕವಾಗಿ ಪರಿಚಯಿಸುತ್ತಿದೆ. ಹೆಚ್ಚು ಜನರಿರುವ ದೊಡ್ಡ ಗುಂಪುಗಳನ್ನು ರಚಿಸಲು ಇದು ಅನುವು ಮಾಡಿಕೊಡುತ್ತಿದೆ. ಈ ಫೀಚರ್ ಅನ್ನು ಗ್ರೂಪ್‌ಗಳ ಗ್ರೂಪ್ ಎಂದು ಹೇಳಬಹುದು. ಅಂದರೆ ವಾಟ್ಸ್ಆ್ಯಪ್ನಲ್ಲಿ ಆಡ್ಮಿನ್‌ಗಳು ನಿರ್ದಿಷ್ಟ ಗುಂಪುಗಳಿಗೆ ಅಥವಾ ಇಡೀ ಸಮುದಾಯಕ್ಕೆ ವಿಚಾರವನ್ನು ಗುಂಪಿನ ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಈಗಾಗಲೇ ಹೆಚ್ಚು ಜನರಿಗೆ ವಿಡಿಯೊ ಕರೆ ಮಾಡುವ ಹಾಗೂ ಇನ್ನಿತರ ಸೇವೆಯನ್ನು Update ಮಾಡಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ವಾಟ್ಸ್ಆ್ಯಪ್ ವೆಬ್ ಬಳಕೆದಾರರಿಗೆ ಈ ನೂತನ ಫೀಚರ್ಸ್ ಲಭ್ಯವಾಗುತ್ತಿದೆ.
ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿಕೊಳ್ಳಬಹುದಾದ ಸಮುದಾಯದ ಗ್ರೂಪ್‌ನಲ್ಲಿ ಆಹ್ವಾನಿಸಲಾದ ಬಳಕೆದಾರರು ತಮ್ಮ ಆಸಕ್ತಿಗಳ ಆಧಾರದ ಮೇಲೆ ಯಾವ ಗ್ರೂಪ್ ಅನ್ನು ಸೇರಬೇಕೆಂದು ನಿರ್ಧರಿಸಬಹುದು. ಇದರಿಂದ ಇತರೆ ವಾಟ್ಸ್ಆ್ಯಪ್ ಗ್ರೂಪ್‌ಗಳಂತೆ ಈ ಗ್ರೂಪ್‌ಗಳಲ್ಲಿ ಅನ್ಯ ವಿಷಯಗಳ ಬಗ್ಗೆ ಅರ್ಥವಿಲ್ಲದೆ ಚರ್ಚೆಗೆ ಅವಕಾಶವಿರುವುದಿಲ್ಲ. ಗೌಪ್ಯತೆಯ ಕಾರಣಗಳಿಗಾಗಿ ಗುಂಪುಗಳಲ್ಲಿನ ಸದಸ್ಯರ ಸಂಖ್ಯೆಯನ್ನು ಅಡ್ಮಿನ್ ಹೊರತಾಗಿ ಇತರರಿಗೆ ಕಾಣಿಸದೇ ಇರುವ ಹಾಗೆ ಈ ಗ್ರೂಪ್‌ಗಳ ಫೀಚರ್ ತರಲಾಗಿದೆ.
ಇದರ ಜೊತೆಗೆ ಸದ್ಯದಲ್ಲಿಯೇ ವಾಟ್ಸಪ್‌ನಲ್ಲಿ ಡು ನಾಟ್ ಡಿಸ್ಟರ್ಬ್ ಎಂಬ ಹೊಸ ಫೀಚರ್ ಬರಲಿದೆ. ವಾಟ್ಸಪ್ ಅಪ್‌ಡೇಟ್‌ಗಳ ಕುರಿತು ಮಾಹಿತಿ ನೀಡುವ ಬೀಟಾ ಪ್ರಕಾರ ವಾಟ್ಸಪ್‌ನಲ್ಲಿ ಮಿಸ್ ಕಾಲ್ ಕಿರಿಕಿರಿ ತಪ್ಪಿಸಲು ಹೊಸ ಫೀಚರ್ ಬರಲಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…