Advertisement
MIRROR FOCUS

ವಿಶ್ವದಲ್ಲೇ ಅತೀ ಹೆಚ್ಚು ಹಲಸು ಬೆಳೆಯುವ ದೇಶ ಯಾವುದು..? | ಭಾರತ ಯಾವ ಸ್ಥಾನದಲ್ಲಿದೆ..?

Share

ಹಲಸು(Jack fruit).. ಯಾರಿಗೆ ಇಷ್ಟ ಇಲ್ಲ ಹೇಳಿ. ವರ್ಷದಲ್ಲಿ ಒಂದು ಸಲ ಫಸಲು ಬಿಡುವ ೀ ಹಲಸು ಎಲ್ಲರಿಗೂ ಅಚ್ಚುಮೆಚ್ಚು. ನಾನಾ ತರದ ಹಲಸಿನ ಹಣ್ಣುಗಳನ್ನು ನೋಡಬಹುದು. ಇತ್ತೀಚೆಗೆ ತಳಿ ಅಭಿವೃದ್ಧಿ ಸಾಕಷ್ಟು ಆಗಿದೆ. ವರ್ಷ ಪೂರ್ತಿ ಫಸಲು ಕೊಡುವ ಗಿಡಗಳನ್ನು ನೋಡಬಹುದು. ಕೇವಲ ತಿನ್ನಲು ಮಾತ್ರವಲ್ಲದೆ, ಆರೋಗ್ಯದ(Health) ದೃಷ್ಟಿಯಿಂದ ಕೂಡ ಹಲಸು ತುಂಬಾ ಸಹಕಾರಿ. ಹಲಸಿನಲ್ಲಿ ವಿವಿಧ ರೀತಿಯ  ಖಾದ್ಯಗಳನ್ನು ತಯಾರಿಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ಹಲಸು ಬೆಳೆಯಲಾಗುತ್ತದೆ. ಅದರಲ್ಲಿ ಭಾರತ(India) ಅಗ್ರಸ್ಥಾನದಲ್ಲಿದೆ.

Advertisement
Advertisement
Advertisement
ಹಲಸಿನ ಪರಿಚಯ ಹೀಗಿದೆ : ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸ್ಥಳೀಯ ಹಣ್ಣಾಗಿರುವ ಹಲಸು, 100 ಪೌಂಡ್‌ಗಳ ತೂಕವನ್ನು ಹೊಂದಿರುತ್ತದೆ. ಹಲಸಿನ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಹಲಸಿನ ಉತ್ಪಾದನೆ ಹಾಗೂ ಪೂರೈಕೆ ಕೃಷಿಯ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.

ವಿಶ್ವದಾದ್ಯಂತ ಹಲಸಿನ ಉತ್ಪಾದನೆ ಹೇಗಿದೆ? : ಪ್ರಾಥಮಿಕವಾಗಿ ಏಷ್ಯಾದಲ್ಲಿ ವಿಫುಲವಾಗಿ ಬೆಳೆಯುವ ಹಲಸಿಗೆ ಅಗ್ರ ಉತ್ಪಾದಕರಾಗಿ ಭಾರತ ಹಾಗೂ ಬಾಂಗ್ಲಾ ಪ್ರಮುಖ ಸ್ಥಾನದಲ್ಲಿವೆ. ವಾರ್ಷಿಕವಾಗಿ ಸುಮಾರು 1.25 ಮಿಲಿಯನ್ ಮೆಟ್ರಿಕ್ ಟನ್‌ಗಳ ಉತ್ಪಾದನೆಯನ್ನು ಒದಗಿಸುತ್ತವೆ. ಹಲಸಿನ ಮರದ ಜೀವಿತಾವಧಿ 60 ರಿಂದ 70 ವರ್ಷಗಳು ಹಾಗೂ ಪ್ರೌಢ ಮರಗಳು ವರ್ಷಕ್ಕೆ 700 ಹಣ್ಣುಗಳನ್ನೊದಗಿಸುವ ಸಾಮರ್ಥ್ಯ ಪಡೆದುಕೊಂಡಿರುತ್ತವೆ.

ವಿಶ್ವದಲ್ಲಿಯೇ ಹಲಸಿನ ವಿಫುಲ ಉತ್ಪಾದನೆಯಲ್ಲಿ ಸ್ಥಾನ ಪಡೆದುಕೊಂಡಿರುವ ದೇಶ : ಭಾರತವು ವಿಶ್ವದ ಅತಿ ದೊಡ್ಡ ಹಲಸಿನ ಹಣ್ಣಿನ ಉತ್ಪಾದಕ ಎಂದೆನಿಸಿದ್ದು, ವಾರ್ಷಿಕ ಉತ್ಪಾದನೆ ಸುಮಾರು 1.4 ಮಿಲಿಯನ್ ಟನ್‌ಗಳ ಉತ್ಪಾದನೆಯನ್ನು ಹೊಂದಿದೆ. ದೇಶದ ಅನುಕೂಲಕರ ವಾತಾವರಣವು ವಿಶೇಷವಾಗಿ ಕೇರಳ, ತಮಿಳುನಾಡು ಮತ್ತು ಕರ್ನಾಟಕದಂತಹ ಪ್ರದೇಶಗಳಲ್ಲಿ ಹಲಸಿನ ಹಣ್ಣಿನ ವ್ಯಾಪಕ ಕೃಷಿಯನ್ನು ಬೆಂಬಲಿಸುತ್ತದೆ. ಹಲಸಿನ ಹಣ್ಣಿನಿಂದ ಸಾಂಪ್ರದಾಯಿಕ ಭಕ್ಷ್ಯಗಳು, ಸಿಹಿತಿಂಡಿ ಹಾಗೂ ಸಸ್ಯಾಹಾರಿ ಪಾಕವಿಧಾನಗಳನ್ನು ತಯಾರಿಸಲಾಗುತ್ತದೆ.

ಭಾರತದಲ್ಲಿ ಹಲಸಿನ ಹಣ್ಣಿನ ಉತ್ಪಾದನೆ : ಹಲಸು ಕೃಷಿಯು ಭಾರತದ ಉಷ್ಣವಲಯದ ತಗ್ಗು ಪ್ರದೇಶಗಳಲ್ಲಿ ಬೆಳೆಯುತ್ತದೆ, ಅಲ್ಲಿ ಮರವು ಸಮುದ್ರ ಮಟ್ಟದಿಂದ 4,000 ಅಡಿ ಎತ್ತರದಲ್ಲಿ ಬೆಳೆಯುತ್ತದೆ. ಬೀಜವನ್ನು ನೆಟ್ಟು ಮರಗಳನ್ನು ಬೆಳೆಸಲಾಗುತ್ತದೆ ಹಾಗೂ ಹೊಲಗಳಲ್ಲಿ ನೆಡುವ ಮುನ್ನ ನರ್ಸರಿಗಳಲ್ಲಿ ನೆಡಲಾಗುತ್ತದೆ. ಪ್ರತಿ ಮರವನ್ನು 30 ಅಡಿಗಳ ಅಂತರದಲ್ಲಿ ನೆಡಲಾಗುತ್ತದೆ ಹಾಗಾಗಿ ಪ್ರತಿ ಎಕರೆಗೆ ಸುಮಾರು 69 ಮರಗಳಿರುತ್ತವೆ. 
ಹಲಸಿಗೆ ರೋಗ ಬರುವುದು ತುಂಬಾ ಕಡಿಮೆ ಅದಾಗ್ಯೂ ಸರಿಯಾಗಿ ಕಾಳಜಿ ವಹಿಸದಿದ್ದರೆ ಅವು ಬಾಡಿ ಹೋಗುತ್ತವೆ. ಮರಗಳು ನೆಟ್ಟ ಮೂರರಿಂದ ನಾಲ್ಕು ವರ್ಷಗಳ ನಂತರ ಫಲವನ್ನು ನೀಡುತ್ತವೆ, ಪ್ರತಿ ಮರವು ಪ್ರತಿ ಋತುವಿಗೆ ಸರಾಸರಿ 15 ಹಣ್ಣುಗಳನ್ನು ಉತ್ಪಾದಿಸುತ್ತದೆ.

ಹಲಸಿನ ಉಪಯೋಗ ಹಾಗೂ ಪ್ರಯೋಜನಗಳು : ಹಲಸು ನಂಬಲಾರದಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಹಲಸಿನ ಕಾಯಿ ಹಾಗೂ ಹಣ್ಣುಗಳಿಂದ ಅನೇಕ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಕಾಯಿ ಹಣ್ಣಾದಾಗ ಸಿಹಿಯಾಗಿರುತ್ತದೆ ಹಾಗೂ ಇದರಿಂದ ಅನೇಕ ಬಗೆಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. 
ಕಾಯಿ ಹಲಸಿನಿಂದ ಕೂಡ ಖಾರದ ಪದಾರ್ಥ ಹಾಗೂ ತಿಂಡಿಗಳನ್ನು ತಯಾರಿಸಲಾಗುತ್ತದೆ. ಹಲಸು ಪೋಷಕಾಂಶಗಳ ಕೇಂದ್ರಬಿಂದುವಾಗಿದ್ದು ಬಿ6, ಸಿ, ಕಾರ್ಬೋಹೈಡ್ರೇಟ್ಸ್ ಹಾಗೂ ಫೈಬರ್ ಅಂಶಗಳನ್ನೊಳಗೊಂಡಿದೆ. ಹಲಸಿನ ಬೀಜಗಳು ಕೂಡ ಪ್ರೊಟೀನ್‌ನ ಆಗರ ಎಂದೆನಿಸಿದ್ದು ಬೀಜಗಳಿಂದ ಕೂಡ ಹಲವಾರು ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಮರದಿಂದ ಪೀಠೋಪಕರಣಗಳನ್ನು, ಸಂಗೀತ ವಾದ್ಯ ಉಪಕರಣಗಳನ್ನು ತಯಾರಿಸಲಾಗುತ್ತದೆ.

ಹಲಸಿನ ಉತ್ಪಾದನೆಯಲ್ಲಿ ಸ್ಥಾನ ಪಡೆದುಕೊಂಡಿರುವ ಇತರ ದೇಶಗಳು : ಹಲಸಿನ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದರೆ, ಬಾಂಗ್ಲಾದೇಶವು ವಾರ್ಷಿಕ 926,000 ಟನ್ ಉತ್ಪಾದನೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶದಲ್ಲಿ, ಹಲಸು ರಾಷ್ಟ್ರೀಯ ಹಣ್ಣು ಮತ್ತು ಸ್ಥಳೀಯ ಆಹಾರದಲ್ಲಿ ಅವಿಭಾಜ್ಯವಾಗಿದೆ. ಹಲಸಿನ ಇತರ ಉತ್ಪಾದಕರೆಂದರೆ ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ನೇಪಾಳ ದೇಶವಾಗಿದೆ. ಸರಿಯಾದ ನಿರ್ವಹಣೆ ಹಾಗೂ ಬಳಕೆ ಮಾಡದಿದ್ದರೆ ಹಣ್ಣು ಬೇಗ ಕೊಳೆತು ಹೋಗುತ್ತದೆ. ಯುಎನ್ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಹಲಸಿನ ಹಣ್ಣಿನಲ್ಲಿ 75% ರಷ್ಟು ತ್ವರಿತವಾಗಿ ಸೇವಿಸದಿದ್ದರೆ ಅಥವಾ ಸಂರಕ್ಷಿಸದಿದ್ದರೆ ವ್ಯರ್ಥವಾಗುತ್ತದೆ.

Source : ನ್ಯೂಸ್ 18
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

2 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

2 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

13 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

17 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

17 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago