ಹಣ್ಣುಗಳು.. ಕಾರ್ಬೋಹೈಡ್ರೇಟ್ಗಳು, ಅಗತ್ಯವಾದ ಜೀವಸತ್ವಗಳು ಖನಿಜಗಳು ಮತ್ತು ನಾರಿನಂಶಗಳು ಸಮೃದ್ಧಿ ಮೂಲವಾಗಿದೆ.ಕೆಲವು ಪೋಷಕಾಂಶ ಹಣ್ಣುಗಳಲ್ಲಿ ಮಾತ್ರದೊರೆಯುತ್ತದೆ. ಹೀಗಾಗಿ ಸಮತೋಲನ ಹಾಗೂ ಆರೋಗ್ಯಕರ ಆಹಾರವನ್ನು ಹೊಂದಲು ಹಣ್ಣುಗಳು ನಮಗೆ ಅತ್ಯಗತ್ಯ. ಹಣ್ಣುಗಳು ನೈಸರ್ಗಿಕ ಸಕ್ಕರೆ ಪ್ರಕ್ಟೊಸನ್ನು ಹೊಂದಿರುತ್ತದೆ.
ಸಿಟ್ರೆಸ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮೂಲವಾಗಿದೆ. ಬಾಳೆಹಣ್ಣು ಪೊಟಾಸಿಯಂ ಮತ್ತು tryptopan ಮೂಲವಾಗಿದೆ. ಸೇಬುಗಳು ಕಬ್ಬಿಣ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ನಾರಿನಂಶ /ಫೈಬರ್ ಸಮೃದ್ಧ ಹಣ್ಣುಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯಕಾರಿ. ಫೈಬರ್ ಸಮೃದ್ಧವಾಗಿರುವ ಆಹಾರ ರಕ್ತದಿಂದ ಗ್ಲುಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಟೈಪ್ ಟು ಮಧುಮೇಹಕ್ಕೆ ಸ್ತೂಲಕಾಯ ಒಂದು ಕಾರಣವಾಗಿದೆ. ಫೈಬರ್ ಸಮೃದ್ಧವಾಗಿರುವ ಹಣ್ಣುಗಳ ಸೇವನೆಯಿಂದ ತೂಕವನ್ನು ನಿಯಂತ್ರಿಸುವ ಮೂಲಕ ಮಧುಮೆಹವನ್ನು ತಡೆಗಟ್ಟಬಹುದು.
Low Glycemic Index(LGI) ಅಂದರೆ ನಮ್ಮ ದೇಹದಲ್ಲಿ ಹರಿಯುವ ರಕ್ತಕ್ಕೆ ಗ್ಲುಕೋಸ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುವಂಥದ್ದು ಈ ಕಡಿಮೆ glycemic index ಇರುವ ಎಲ್ಲಾ ಹಣ್ಣುಗಳು ಮಧುಮೇಹ ರೋಗಿಗಳು ಉಪಯೋಗಿಸಬಹುದು ಅವುಗಳು ಯಾವುವೆಂದರೆ. ಸೇಬು, ಪಪ್ಪಾಯ, ಕಿತ್ತಳೆ, ಮರಸೇಬು, ಚೆರ್ರಿ, ನೇರಳೆ, ಪೇರಳೆ, ಡ್ರಾಗನ್ ಫ್ರೂಟ್, ಕಿವಿಹಣ್ಣು, ಅವಕಾಡೋ.
ಪಪ್ಪಾಯಿ: ಕಡಿಮೆ ಕ್ಯಾಲೋರಿಇದೆ hypoglycemic effect..ಎಲ್ಲಾ ವಿಟಮಿನ್ ಗಳು ಫೈಬರ್ ಅಂಶ ಜಾಸ್ತಿ ಇರವುದರಿಂದ ಮಧುಮೆಹ ರೋಗದಲ್ಲಿ ಬಳಸಬಹುದು.
ಚೆರ್ರಿ : ಸ್ವಾಭಾವಿಕವಾಗಿ ಸಿಗುವ ಚೆರ್ರಿ ಹಣ್ಣು antioxidents.ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಕಾರಿ. ಕೃತಕ ಚೆರ್ರಿಯಲ್ಲಿ ಸಕ್ಕರೆ ಅಂಶ ಇರುವುದರಿಂದ ಸೇವಿಸುವುದು ಒಳ್ಳೇದಲ್ಲ.
ಕಿವಿಹಣ್ಣು : ಬಿಳಿರಕ್ತ ಕಣಗಳನ್ನು ಹೆಚಿಸುತ್ತದೆ ಫೈಬರ್, ಪೊಟಾಸಿಯಂ ವಿಟಮಿನ್ಸ್ ಸಮೃದ್ಧವಾಗಿದ್ದು ಕಡಿಮೆ ಕ್ಯಾಲೋರಿ ಯನ್ನು ಹೊಂದಿದೆ.
ಡ್ರ್ಯಾಗನ್ ಫ್ರೂಟ್ : ಕೆಡಿಮೆ ಕ್ಯಾಲರಿ,ಆಂಟಿ ಆಕ್ಸಿಡೆಂಟ್ ಹಾಗೂ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಈ ಎಲ್ಲಾ ಹಣ್ಣುಗಳನ್ನು ಮಿತವಾಗಿ ಸೇವಿಸಿ. ಮಧುಮೆಹ ರೋಗಿಗಳು ಬಾಳೆಹಣ್ಣು, ಮಾವಿನ ಹಣ್ಣು, ದ್ರಾಕ್ಷಿ, ಚಿಕ್ಕು, ಇವುಗಳಲ್ಲಿ ಸಕ್ಕರೆಯ ಪ್ರಮಾಣ (High Glycemic Index ) ಅಧಿಕವಿರುವುದರಿಂದ ಸೇವಿಸದೆ ಇರುವುದು ಉತ್ತಮ. ಉತ್ತಮ ಆಹಾರಪದ್ದತಿ ವ್ಯಾಯಾಮ ಯೋಗ ವಾಕ್ ಉತ್ತಮ ಜೀವನಶೈಲಿ ಇವುಗಳಿಂದ ಮಧುಮೇಹ ನಿಯಂತ್ರಿಸಬಹುದು.
( ಸಂಗ್ರಹ ಮಾಹಿತಿ)
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…