Opinion

ನಿಮ್ಮೂರಲ್ಲಿ ಯಾವ ಹೋಟೆಲ್ | ಚಾಟ್ಸ್ ನಲ್ಲಿ ಹೆಚ್ಚು ರುಚಿ ತಿಂಡಿ ತಿನಿಸು ಸಿಗುತ್ತದೆ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅದೊಂದು ತಾಲ್ಲೂಕು ಕೇಂದ್ರ. ಅಲ್ಲಿನ ಬ್ಯಾಂಕ್(Bank) ವೊಂದಕ್ಕೆ ಕೇಂದ್ರ ಕಚೇರಿಯಿಂದ(Office) ಲೆಕ್ಕ ಪರಿಶೋಧನೆಗೆ ಅಧಿಕಾರಿಗಳೊಬ್ಬರು ಬಂದಿದ್ದರು. ಮಧ್ಯಾಹ್ನ ಊಟದ(Meal) ಸಮಯದಲ್ಲಿ ಆ ಮೇಲಾಧಿಕಾರಿಗಳು ‘ ಈ ಊರಿನಲ್ಲಿ ಅತ್ಯಂತ ರುಚಿಕರ ಊಟ ಯಾವ ಹೋಟೆಲ್(Hotel) ನಲ್ಲಿ ಸಿಗುತ್ತದೆ ‌..? ‘ ಎಂದು ಕೇಳಿದರು. ಬ್ರಾಂಚ್ ಮ್ಯಾನೇಜರ್(Branch Manager) ಊರಿನ ಪ್ರಮುಖ ಊಟದ ಹೋಟೆಲ್ ಗಳ ಮಾಹಿತಿಯನ್ನು ನೀಡಿದರು. ನಂತರ ಆ ಮೇಲಾಧಿಕಾರಿಗಳು ಕಡಿಮೆ ರುಚಿಯ ಹೋಟೆಲ್ ಯಾವುದೆಂದು ಕೇಳಿ ಮದ್ಯಾಹ್ನದ ಊಟಕ್ಕೆ ಆ ಕಡಿಮೆ ರುಚಿಯ ಹೋಟೆಲ್ ಗೆ ಮ್ಯಾನೆಜರ್ ರನ್ನು ಕರೆದುಕೊಂಡು ಹೋಗಿ ಉಂಡು ಬಂದರು.

Advertisement

ಬ್ಯಾಂಕ್ ಲೆಕ್ಕಪತ್ರ ಸಂಜೆಯೊರೆಗೂ ಆಯಿತು. ಸಂಜೆ ಕಾರ್ಯ ಕಲಾಪ ಮುಗಿಸಿ ಬ್ಯಾಂಕ್ ನ ಎಲ್ಲಾ ಸಿಬ್ಬಂದಿ ಗಳನ್ನು ಊರಿನ ಚಾಟ್ ಸೆಂಟರ್ ಗೆ ಕರೆದುಕೊಂಡು ಹೋಗಿ ಪಾನಿ ಪುರಿ ಗೋಭಿ ಮಂಚೂರಿ ತಿನ್ನುವುದೆಂದಾಯಿತು. ಮತ್ತೆ ಆ ಮೇಲಾಧಿಕಾರಿಗಳು ಊರಿನ ಚಾಟ್ ಸೆಂಟರ್ ನಲ್ಲಿ ಒಮ್ಮೆ ತಿಂದರೆ ಮತ್ತೆ ಮತ್ತೆ ಅದೇ ಚಾಟ್ ಗೆ ಹೋಗಿ ಗೋಬಿ ಪಾನಿ ಪೂರಿ ತಿನ್ನುವ ಆಸೆ ಮೂಡಿಸುವ ಚಾಟ್ ಸೆಂಟರ್ ಯಾವುದಿದೆ …? ಎಂದು ಕೇಳಿದರು. ಅವರು ಒಂದೆರಡು ಚಾಟ್ ಸೆಂಟರ್ ನ ಹೆಸರು ಹೇಳಿದರು. ಮತ್ತೆ ಆ ಮೇಲಾಧಿಕಾರಿಗಳು “ಕಡಿಮೆ ರುಚಿಯ ಚಾಟ್ಸ್ ಸೆಂಟರ್” ಹೋಗೋಣ ಎಂದರು.

ಇದನ್ನು ಕೇಳಿ ಬ್ರಾಂಚ್ ಮ್ಯಾನೇಜರ್ ಗೆ ಅಚ್ಚರಿ ಯಾಯಿತು. ಅವರು ಆ ಮೇಲಾಧಿಕಾರಿಗೆ “ಸಾರ್ ಎಲ್ಲರೂ ಎಲ್ಲಿ ಹೆಚ್ಚು ರುಚಿಯಾದ ಊಟ ಉಪಹಾರ ದೊರೆಯುತ್ತದೆ ಎಂದು ಹುಡುಕಿ ಕೊಂಡು ಹೋದರೆ ನೀವು ಕಡಿಮೆ ರುಚಿಯ ಊಟ ಉಪಹಾರ ಎಲ್ಲಿ ಸಿಗುತ್ತದೆ ಎಂದು ಕೇಳು ತ್ತಿದ್ದೀರ…!? ಎಂದು ಪ್ರಶ್ನಿಸಿದರು.

ಅದಕ್ಕೆ ಆ ಮೇಲಾಧಿಕಾರಿಗಳು ” ಇತ್ತೀಚಿನ ದಿನಗಳಲ್ಲಿ ಮಾಮೂಲಿಗಿಂತ ಹೆಚ್ಚು ರುಚಿ ಆಹಾರ ತಿನಸು ಗಳು ಹಲವೆಡೆ ಲಭ್ಯ ವಾಗುತ್ತಿದೆ. ಅಲ್ಲಿ ನೀವು ಒಮ್ಮೆ ಉಪಹಾರ ಮಾಡಿದರೆ, ಗೋಭಿ ಮಂಚೂರಿ ಪಾನಿ ಪುರಿ ಇತರೆ ಸ್ನ್ಯಾಕ್ಸ್ ತಿಂದರೆ ಮತ್ತೆ ಮತ್ತೆ ಅಲ್ಲೇ ತಿನ್ನಬೇಕು ಎನಿಸುತ್ತದೆ… ನೀವು ಅಲ್ಲೇ ಹೋಗಿ ತಿನ್ನಲು ಇಚ್ಚೆಪಡುತ್ತೀರ… ನಮ್ಮ ಯುವ ಪೀಳಿಗೆ ಈ ತಿನಿಸು ತಿನ್ನಲು‌ ಮುಗಿ ಬೀಳುತ್ತಿದೆ.

ಈ ಬಾಯಿರುಚಿಯ addiction ಆಹಾರ ತಯಾರಕರು ಬಳಸುವ ಟೇಸ್ಟಿಂಗ್ ಪೌಡರ್ ಅಜಿನೊಮೊಟೋ ಎಂಬ ಅಪಾಯಕಾರಿ ಪೌಡರ್ ನಲ್ಲಿ ರುತ್ತದೆ. ಈ ಪೌಡರ್ ಬಳಕೆಯ ತಿನಿಸು ಗಳನ್ನು ಒಮ್ಮೆ ತಿಂದರೆ ಇನ್ನಷ್ಟು ಮತ್ತಷ್ಟು ತಿನ್ನಬೇಕೆನ್ನಿಸುತ್ತದೆ. ಇದು ನೇರವಾಗಿ ಮನುಷ್ಯ ನ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಿಡ್ನಿ ಹೃದಯ ತೊಂದರೆ ಗೊಳಪಡುತ್ತದೆ. ಯುವ ಪೀಳಿಗೆ ಯ ಲೈಂಗಿಕ ಶಕ್ತಿ ಕುಂದಿಸಿ ಬಂಜೆ ತನ ಇತರೆ ಸಮಸ್ಯೆ ಹೆಚ್ಚಿಸುತ್ತದೆ.

ಚೀನಾ ದಂತಹ ದೇಶಗಳು ಈ “ಟೇಸ್ಟಿಂಗ್ ಪೌಡರ್ ನ್ನ ” ನಮ್ಮ ದೇಶದ ಮೂಲೆ ಮೂಲೆಗೂ ತಲುಪಿಸಿದೆ. “ರುಚಿ ಯ” ಆಸೆಗೆ ನಮ್ಮ ಯುವ ಪೀಳಿಗೆ ಟೇಸ್ಟಿಂಗ್ ಪೌಡರ್ ಹಾಕಿದ ಆಹಾರ ತಿಂದು “ನಿರ್ವೀರ್ಯ” ರಾಗುತ್ತಿರುವುದು ಅತ್ಯಂತ ಕಳವಳಕಾರಿ…. ಆದ್ದರಿಂದ ನೀವುಗಳು ಹೆಚ್ಚು ಟೆಸ್ಟ್ ಇರುವ ಚಾಟ್ಸ್ ಸೆಂಟರ್, ಸ್ಮ್ಯಾಕ್ ಸೆಂಟರ್ ಹೋಟೆಲ್ ಗಳಲ್ಲಿ ತಿನಿಸು ತಿನ್ನಲು ಹೋಗಬೇಡಿ. ಈ ಕಾಲದಲ್ಲಿ “ಹೆಚ್ಚು ರುಚಿ ಅತ್ಯಂತ ಅಪಾಯಕಾರಿ… ‌”

ನಮ್ಮ ನೆರೆಯ ಶತೃ ದೇಶ ಚೀನಾ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುತ್ತಿದೆ. ಯಾವುದೇ ಆಯುಧ ವಿಲ್ಲದೆ “ಅಜಿನಮೊಟೊ ಟೇಸ್ಟಿಂಗ್ ಪೌಡರ್”(Ajinamoto Tasting Powder) ನ್ನ ನಮ್ಮ ದೇಶಕ್ಕೆ ಮಾರಿ ನಮ್ಮ ಯುವ ಪೀಳಿಗೆಯ ಬುಡಕ್ಕೆ ಕೈ ಹಾಕಿ ಈ ದೇಶವನ್ನು ನಾಶ ಮಾಡಲು ಯತ್ನಿಸುತ್ತಿದೆ. ಈ ಟೇಸ್ಟಿಂಗ್ ಪೌಡರ್ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಮಾಡಿ ನಮ್ಮ ಜನರನ್ನು ಜಾಗೃತೆ ಗೊಳಿಸಿ ” ಎಂದರು…..

ಇತ್ತೀಚೆಗೆ ಗೋವಾದಲ್ಲಿ ಟೇಸ್ಟಿಂಗ್ ಪೌಡರ್ ಬಳಕೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಇದು ದೇಶದಾದ್ಯಂತ ನಿಷೇಧ ಆಗಬೇಕು. ದಿನ ದಿನಕ್ಕೂ ಟೇಸ್ಟಿಂಗ್ ಪೌಡರ್ ಪ್ರಭುತ್ವದ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುವುದು ಅತ್ಯಂತ ಆತಂಕಕಾರಿ. ಇತ್ತಿಚೆಗೆ ಕೆಲವು ಅಡಿಗೆ ತಯಾರಕರು “ಮದುವೆ ಮನೆ ಅಡುಗೆಗೂ” ಕೆಲವು ಕಡೆಯಲ್ಲಿ ಮದುವೆ ಊಟದ ರುಚಿ ಹೆಚ್ಚಿಸಲು ಬಳಸುತ್ತಿದ್ದಾರೆ ಎಂಬ ಸುದ್ದಿ ಇದೆ‌ . “ಮದುವೆ ಮನೆ” ಮಾಡುವವರು ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

ಅಜಿನಮೊಟೋ ಮಾರಿ ದೇಶ ಬಿಟ್ಟು ತೊಲಗಲಿ… ದೇಶದ ಪ್ರಜೆಗಳು ಆರೋಗ್ಯವಂತರಾಗಲಿ…. ಹೆಚ್ಚು ರುಚಿ ಬೇಡ…. ಕಡಿಮೆ ರುಚಿಯ ಹೆಚ್ಚು ಶುಚಿಯ ಉತ್ತಮ ಆಹಾರ ತಿಂದು ದೀರ್ಘ ಕಾಲ ಆರೋಗ್ಯ ವಾಗಿ ಜೀವನ ಮಾಡೋಣ…

ಬರಹ :
ಪ್ರಬಂಧ ಅಂಬುತೀರ್ಥ
 
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ

ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…

1 hour ago

ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್

ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…

1 hour ago

ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |

ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.

8 hours ago

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ

ಖಾಸಗಿಯವರಿಂದ ಒತ್ತುವರಿಯಾಗಿರುವ  ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…

15 hours ago

ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ

ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…

15 hours ago

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…

15 hours ago