ಅಡಿಕೆ ಬೆಳೆಗಾರರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತೆ WHO ಪ್ರಾಯೋಜಿತ ವೆಬಿನಾರ್‌ನಲ್ಲಿ ನಡೆಯುತ್ತಿರುವ ಚರ್ಚೆ ಆತಂಕ ಮೂಡಿಸಿದೆ. ಅಲ್ಲಿ ಮುಖ್ಯ ವಿಷಯವೇ ಅಡಿಕೆಯನ್ನು ಯಾವ ವಿಧಾನದ ಮೂಲಕ ನಿಯಂತ್ರಿಸಬಹುದು ಎಂಬುದಾಗಿದ್ದು, ಅಡಿಕೆಯನ್ನು “ಕ್ಯಾನ್ಸರ್ ಕಾರಕ” ಎಂದು ನಿರ್ಧರಿಸಲಾಗಿದೆ ಎಂಬ ಹಿನ್ನೆಲೆ ಈಗಾಗಲೇ ರೂಪುಗೊಂಡಿದೆ.
ಈ ಕಾರಣದಿಂದ ಆ ವೇದಿಕೆಯಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಸಮರ್ಥವಾಗಿ ವಾದಿಸುವ ಅವಕಾಶ ಬಹುತೇಕ ಇಲ್ಲದಂತಾಗಿದೆ. WHO ಜೊತೆಗೆ ಅಂತಹ ವಿಚಾರ ಚರ್ಚೆ ಮಾಡುವ ಅವಕಾಶವನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಮುಂದೆ ಅದು ದೊರಕುವುದು ಸಂದೇಹಾಸ್ಪದ.
ಭಾರತದೊಳಗೂ ಅವಕಾಶ ಕಡಿಮೆ: ಇದರಿಂದ ಭಾರತದೊಳಗೂ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸುವ ಅವಕಾಶ ಕುಗ್ಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿರುವ ಅಫಿಡವಿಟ್ ಬದಲಾಯಿಸುವ ಸಾಧ್ಯತೆಯೂ ಬಹಳ ಕಡಿಮೆ. ಈ ಹಂತದಲ್ಲಿ ಬೆಳೆಗಾರರು ಮತ್ತು ಸಂಸ್ಥೆಗಳ ಮುಂದೆ ಉಳಿಯುವ ಅವಕಾಶ ಎಂದರೆ – “ಯಾವ ಮಾದರಿಯ ನಿಯಂತ್ರಣಗಳು ಬರಬಹುದು?” ಎಂಬುದನ್ನು ಗಮನಿಸಿ, ಅದಕ್ಕೆ ಪ್ರತಿತಂತ್ರ ರೂಪಿಸುವುದು ಮಾತ್ರ.
ವೆಬಿನಾರ್‌ನಲ್ಲಿ ಭಾಗವಹಿಸುವುದು ಅಗತ್ಯ : ನಮ್ಮ ಕಡೆಯಿಂದ ಯಾರಾದರೂ ಆ ವೆಬಿನಾರ್‌ನಲ್ಲಿ ಭಾಗವಹಿಸಿದರೆ, WHO ಯಾವ ಮಾದರಿಯ ನಿಯಂತ್ರಣ ಹೇರಲು ತಯಾರಿ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಬಹುದು. ಆದರೆ ಚರ್ಚಿಸಲು ಬೇಕಾದ ಮಾಹಿತಿ ಮತ್ತು ಸಾಮರ್ಥ್ಯ ನಮ್ಮಲ್ಲಿ ಇಲ್ಲ ಎಂಬುದು ಕಟು ವಾಸ್ತವ.
ನಾವು ಈಗ ಮಾಡಬಹುದಾದ ಏನು? – ಡೇಟಾ ಆಧಾರಿತ ಪ್ರತಿತಂತ್ರ:
Safe Limit ನಿರ್ಧಾರ ಅತ್ಯಂತ ಮುಖ್ಯ : WHOಗೆ ವರದಿ ನೀಡಿದ ತಜ್ಞರು ಬಳಸಿದ arecoline ಪ್ರಮಾಣವನ್ನು ಪರಿಶೀಲಿಸಬೇಕು. ಅವರ ಪ್ರಯೋಗವನ್ನು ಭಾರತದಲ್ಲೇ ಪುನರಾವರ್ತಿಸಿ, ಕಡಿಮೆ ಪ್ರಮಾಣದಲ್ಲಿ ಪರೀಕ್ಷಿಸಿದರೆ ಒಂದು ಹಂತದಲ್ಲಿ ಕ್ಯಾನ್ಸರ್ trigger ನಿಲ್ಲುತ್ತದೆ. ಆ ಪ್ರಮಾಣವೇ safe limit ಆಗಿ ಸ್ಥಾಪಿತವಾದರೆ, “ನಿಯಂತ್ರಿತ ಪ್ರಮಾಣದ ಅಡಿಕೆ ಬಳಕೆ ಕ್ಯಾನ್ಸರ್ ಕಾರಕ ಅಲ್ಲ” ಎಂಬ ವೈಜ್ಞಾನಿಕ ಆಧಾರ ನಿರ್ಮಾಣವಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Clinical Trial – ದುಬಾರಿ ಆದರೆ ಅತ್ಯಂತ ಪರಿಣಾಮಕಾರಿ. Clinical trial ಮಾಡುವುದು ಬಹು ವೆಚ್ಚದ ಕೆಲಸ. ಆದರೂ ಇದು ಮಾನವರ ಮೇಲೆ ನೇರವಾಗಿ ನಡೆಯುವ ಪ್ರಯೋಗವಾಗಿರುವುದರಿಂದ ಅತ್ಯಂತ ವಿಶ್ವಾಸಾರ್ಹ ವರದಿ ನೀಡಬಲ್ಲದು. ಗುಣಾತ್ಮಕ ವರದಿ ದೊರೆತರೆ ಅಡಿಕೆ ಕುರಿತ ಜಾಗತಿಕ ಚರ್ಚೆಯ ದಿಕ್ಕನ್ನೇ ಬದಲಾಯಿಸಬಹುದಾದ ಸಾಧ್ಯತೆ ಇದೆ.
ನಾವು ಕಳೆದುಕೊಂಡ golden opportunity time ಅನ್ನು ಮತ್ತೆ ಹಿಂದಕ್ಕೆ ತರಲು ಸಾಧ್ಯವಿಲ್ಲ. ಆದರೆ ಇನ್ನು ಮುಂದೆ ವೈಜ್ಞಾನಿಕ ಡೇಟಾ, ಸಂಶೋಧನೆ ಮತ್ತು ತಂತ್ರ ರೂಪಿಸುವ ಮೂಲಕ ಅಡಿಕೆ ಬೆಳೆಗಾರರ ಹಿತ ರಕ್ಷಿಸಬೇಕಾಗಿದೆ.
ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…
ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…
ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…
ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…
ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…
ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…