ಸರಕಾರಿ ಶಾಲೆಗಳ ಅಧಃಪತನದ ಹಿಂದೆ ಷಡ್ಯಂತ್ರ ಮಾಡುತ್ತಿರುವರಾರು…? ಇದೊಂದು ಪ್ರಶ್ನೆ ಕೆಲವು ಸಮಯಗಳಿಂದ ಓಡುತ್ತಿದೆ. ಯಾರು..? ಶಿಕ್ಷಣ ತಜ್ಞರೇ.. ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು(ಜಿಲ್ಲಾ ಡಿಸಿ) ಮತ್ತು ಉಪ ಅಧ್ಯಕರೇ(ಸಿಇಒ) ಅಥವಾ ಶಿಕ್ಷಣ ಇಲಾಖೆಯ ಬಿಇಒ ಅಥವಾ ಡಿಡಿಪಿಐ ಗಳೇ… ಅಥವಾ ಕೆಲವು ಖಾಸಗಿ ಶಾಲೆಯ ಸಂಘ ಸಂಸ್ಥೆಗಳ ಪೀತೂರಿಯೇ? ಅಥವಾ ಕೆಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ
ರಾಜಕೀಯ ವ್ಯಕ್ತಿ ಗಳೇ.?
ಈ ಹಿಂದೆ 2009 ರಿಂದ 2015 ರವರೆಗೆ SSA ಮತ್ತು RMSA ಅಡಿಯಲ್ಲಿ ಸುಮಾರು ಸಾವಿರಾರು ಕೋಟಿ ಹಣವನ್ನು ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಕೊಟ್ಟಿದೆ . ಈ ಹಣವನ್ನು ಶಿಕ್ಷಣ ಇಲಾಖೆ ರಾಜ್ಯದ ಯಾವುದೇ ಶಾಲೆಗಳ ನಿಜವಾದ ಅಗತ್ಯತೆ ಬೇಕು ಬೇಡಗಳ ಸಮಗ್ರ ಅಧ್ಯಯನ ಮಾಡದೇ, ಶಾಲೆ ಕೊಡುವ ಮುನ್ನ ಸುತ್ತ ಮುತ್ತಲಿನ ಜನಸಂಖ್ಯೆ ಆಧಾರಿತ ಪರಿಶೀಲನೆ ಮಾಡದೇ ಕೇವಲ ಶಾಸಕರ ಗಳ ಪತ್ರಗಳ ಮೇಲೆ ಶಾಲೆಗಳಿಗೆ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ.
ಅನೇಕ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ತಮ್ಮ ಕಾರ್ಯಕರ್ತರನ್ನು ಖುಷಿಪಡಿಸಲು ಪತ್ರ ನೀಡಿ ಕಾಮಗಾರಿಗಳ ಕೆಲಸವನ್ನು ಅವರ ಕಾರ್ಯಕರ್ತರಿಗೆ ಕೊಟ್ಟು ಎಲ್ಲಿಬೇಕಂದರಲ್ಲಿ ಬೇಕಾ ಬಿಟ್ಟಿ ಶಾಲೆಗಳನ್ನು ಕಟ್ಟಿಸಿದ್ಧಾರೆ . ಇಂತಹ ಉಲ್ಲಂಘನೆಗಳ ಬಗ್ಗೆ, ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಉಪ ಅಧ್ಯಕ್ಷರು ಅದಾ ಜಿಲ್ಲಾ ಡಿಸಿ ಮತ್ತು ಸಿಇಒ ಗಳು ಇಂತಹ ಈ ಉಲ್ಲಾಘನೆಗಳ ಬಗ್ಗೆ ಹಾಗೂ ಶಿಕ್ಷಣ ಇಲಾಖೆಯ ಬಿಇಓ ಮತ್ತು ಡಿಡಿಪಿಐಗಳು ಸರಕಾರಕ್ಕಾಗಲಿ ಅಥವಾ ಇಲಾಖೆಗಾಗಲಿ ಗಮನಕ್ಕೆ ತಾರದೆ ಇಂತಹ ಕೆಲಸ ಮಾಡಿಸಿದ್ಧಾರೆ.
ಹಾಗೂ ಶಿಕ್ಷಣ ಇಲಾಖೆಯ ಬಿಇಓ ಮತ್ತು ಡಿಡಿಪಿಐ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ಶಿಕ್ಷಣ ಕಾಯಿದೆಯ ಜನಸಂಖ್ಯೆ ಆಧಾರದ ಮೇಲೆ ಶಾಲೆಯನ್ನು ತೆರೆಯಲು ಅನುಮತಿ ಕೊಡಬೇಕೆಂಬ ನಿಯಮಗಳನ್ನು ಪಾಲನೆ ಮಾಡದೆ ಇವರೆಲ್ಲ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಹಾಗೂ ಇಂತಹ ಅಕ್ರಮಗಳ ಬಗ್ಗೆ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಉಪ ಅಧ್ಯಕ್ಷರು ಇಂತಹ ಅವೈಜ್ಞಾನಿಕವಾಗಿ ಪರಿಶೀಲನೆ ಮಾಡದೆ ನಿಯಂತ್ರ ಮಾಡುವ ಕೆಲಸವೇ ಇದಕ್ಕೆ ಮುಖ್ಯ ಕಾರಣವಾಗಿದೆ
ಈ ರೀತಿ ಎಲ್ಲೆಂದರಲ್ಲಿ ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಟ್ಟು ಶಾಲೆಗಳನ್ನು ಕಟ್ಟಿಸಿ ಸರ್ಕಾರವನ್ನು ಇಲಾಖೆಯನ್ನು ದಿಕ್ಕುತಪ್ಪಿಸಿದ್ದಾರೆ. ಅಂದು ಕಟ್ಟಿಸಿದ ಅನೇಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಹಾಗೂ ಅನೇಕ ಇಂತಹ ಶಾಲೆಗಳು ಕಳಪೆ ಮಟ್ಟದ ಕಾಮಗಾರಿಯಿಂದಾಗಿ ಮುಚ್ಚಲ್ಪಟ್ಟಿವೆ ಇದು ವಾಸ್ತವಿಕ ಸತ್ಯ.
ಇದೇ ಶಿಕ್ಷಣ ಇಲಾಖೆಯ ಬಿಇಓ ಮತ್ತು ಡಿಡಿಪಿಐ ಅಧಿಕಾರಿಗಳು ಶಿಕ್ಷಣ ಕಾಯಿದೆಯ ಜನಸಂಖ್ಯೆ ಯ ಆಧಾರದ ಮೇಲೆ ಶಾಲೆಯನ್ನು ಕೊಡಬೇಕು ಎಂಬ ನಿಯಮಗಳನ್ನು ಗಾಳಿಗೆ ತೂರಿ ಭ್ರಷ್ಚಾಚಾರದಲ್ಲಿ ಭಾಗಿಯಾಗಿ ಚೆನ್ನಾಗಿ ನಡೆಯುತ್ತಿರುವ ಸರ್ಕಾರಿ ಶಾಲೆಗಳ ಪಕ್ಕದಲ್ಲಿಯೇ ಖಾಸಗಿ ಶಾಲೆಗಳಿಗೆ ಅನುಮತಿ ಕೊಟ್ಟು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಂದು ಕುಸಿಯುವಲ್ಲಿ ಹಾಗೂ ಮುಚ್ಚಲು ಇವರೇ ಕಾರಣರಾಗಿದ್ದಾರೆ.
ಹಿಂದೆ SSA ಮತ್ತು RMSA ಅಡಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಮತ್ತು ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಗೆಗಳಿಗೆ ಶಾಲೆಗೆ ಬಂದ ಸರ್ಕಾರದ ಅನುಧಾನ ಹಣವನ್ನು ವರ್ಷದ ಕೊನೆಯ ವರೆಗೂ ಯಾವುದೇ ಕೆಲಸವನ್ನು ಮಾಡಿಸದೆ ಖಾತೆಯಲ್ಲಿ ಉಳಿಸಿ ಬಳಸದೆ ಶಾಲಾ ಮುಖ್ಯ ಶಿಕ್ಷಕರಿಂದ ಇಲ್ಲವೇ ಅತಿಥಿ ಶಿಕ್ಷಕರಿಂದ ಇಲ್ಲವೇ ಕೆಲವು ಅಧಿಕಾರಿಗಳ ಸಹಕಾದಿಂದ ವರ್ಷದ ಕೊನೆಯಲ್ಲಿ ನಕಲಿ ಬಿಲ್ಲುಗಳನ್ನು ಇಟ್ಟು ಅನೇಕ ಕಡೆ ಎಲ್ಲಾ ಅಧಿಕಾರಿಗಳು ಒಟ್ಟಿಗೆ ಸೇರಿ ದೋಚಿದ್ದಾರೆ
ಇದೂ ಮಾತ್ರ ವಲ್ಲದೆ ಇನ್ನೂ ಕೆಲವು ಕಡೆ ಮುಖ್ಯ ಶಿಕ್ಷಕರು ಗಳನ್ನು ಬೆದರಿಸಿ ಲೂಟಿ ಸಹ ಮಾಡಿದ್ದಾರೆ ಇಂತಹ ಅನೇಕ ಪ್ರಕರಣಗಳು ಇಲಾಖೆಯಲ್ಲಿ ನಡೆದಿದೆ.
ಇಂದು ಸರ್ಕಾರ ಇಂತಹ ಅನೇಕ ಭ್ರಷ್ಟಾಚಾರದ ಬಗ್ಗೆ ಪರಿಶೀಲನೆ ಮಾಡಿಸಿ ಹಿಂದಿನ ಲೋಪಗಳನ್ನು ಸರಿಪಡಿಸಲು ಹಾಗೂ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಲು ಅನೇಕ ನಿಯಮಗಳನ್ನು ಬದಲಾವಣೆ ಮಾಡಿ ಸರ್ಕಾರಿ ಶಾಲೆಗಳಲ್ಲಿ ದ್ವಿ ಭಾಷಾ/ ಬಹುಭಾಷೆ ಶಿಕ್ಷಣ ಪದ್ಧತಿತಂದು ಪಂಚಾಯಿತಿಮಟ್ಟದಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ ಅನೇಕ ಇರುವ ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮಾಡಿ ಅಲ್ಲಿಗೆ ಬೇಕಾದ ಸೌಲಭ್ಯಗಳನ್ನು ಕೊಟ್ಟು ಸರ್ಕಾರಿ ಶಾಲೆಗಳನ್ನು ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಬಲಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಹಾಗೂ ಅನೇಕ ಸರ್ಕಾರಿ ಶಾಲೆಯಲ್ಲಿ ಎಲ್ ಕೆ ಜಿ ತೆರೆಯಲು ಶಾಲೆಯ ಶಿಕ್ಷಕರ ಜೊತೆ ಸೇರಿ ಎಲ್ಲಾ ಎಸ್ಡಿಎಂಸಿ ಸದಸ್ಯರಿಗೂ ಸಹ ಅವಕಾಶ ಮಾಡಿಕೊಟ್ಟಿದೆ. ಎಲ್ಲಾ ಮ್ಯಾಗ್ನೆಟ್ ಕೆಪಿಎಸ್ ಶಾಲೆಗಳಿಗೆ ಮಕ್ಕಳನ್ನು ವಾಹನಗಳ ಮುಖೇನ ಕರೆತರುವ ಕೆಲಸವನ್ನು ಆಯಾ ಶಾಸಕರಿಗೆ ವಹಿಸಿ ಕೊಟ್ಟಿದ್ದಾರೆ ಸಹ.
ಈ ರೀತಿ ಸರ್ಕಾರಿ ಶಾಲೆಗಳು ಬೆಳೆದರೆ ಖಾಸಗಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ತಲುಪುತ್ತವೆ ಎಂಬ ಭೀತಿಯಿಂದ ಈ ರೀತಿ ಅಪಪ್ರಚಾರ ಪಿತೂರಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ ಇದು ನಿಜಕೂಡ ಎಂದು ಹೇಳಲಾಗುತ್ತಿದೆ ಇವರೆಲ್ಲ ಸೇರಿ ಇದಕ್ಕೆ ಸರ್ಕಾರ ಯಾವುದೇ ಅವಕಾಶ ಮಾಡಿಕೊಡಬಾರದು ಈ ಪಿತೂರಿಯ ಇಂದೇ ಇರುವ ರಹಸ್ಯ ಎಂದು ಸಾರ್ವಜನಿಕರಲ್ಲಿ ಚರ್ಚೆ ಮಾಡಲಾಗುತ್ತಿದೆ ಸರ್ಕಾರ ಇಂತಹ ಪಿತೂರಿಕರರನ್ನು ಮಟ್ಟ ಹಾಕುವ ಕೆಲಸ ಮಾಡಬೇಕು.
ಸರಕಾರದ ಇಂತಹ ಒಳ್ಳೆಯ ಕೆಲಸವನ್ನು ತಡೆಯಲು ಖಾಸಗಿ ಶಾಲೆಯ ಕೆಲವು ಸಂಘಗಳು , ಕೆಲವು ಖಾಸಗಿ ಸಂಘ ಸಂಸ್ಥೆಗಳ ಜೊತೆ ಸೇರಿ ಕೆಲವು ಖಾಸಗಿ ಮಾಧ್ಯಮಗಳಿಂದ, ಮಕ್ಕಳ ಹಕ್ಕು ಇಲಾಖೆಯ ಅಧಿಕಾರಿಗಳಿಂದ, ಹಾಗೂ ಕೆಲವು ಸ್ವಯಂಘೋಷಿತ ಶಿಕ್ಷಣ ತಜ್ಞರಿಂದ ಪಿತೂರಿ ಮಾಡಿಸುತ್ತಿದ್ದಾರೆ. ಇಂತಹ ಪಿತೂರಿಗಳ ಬಗ್ಗೆ ಸರ್ಕಾರ ಗಮನ ಹರಿಸದೆ ಸರ್ಕಾರಿ ಶಾಲಾ ಮಕ್ಕಳ ಹಿತದೃಷ್ಟಿಯನ್ನು ಇಟ್ಟುಕೊಂಡು ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು.
ಸರ್ಕಾರಿ ಶಾಲೆಯ ಅನೇಕ ಪೋಷಕರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದಾರೆ. ಇವರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಅಥವಾ ಸರ್ಕಾರಿ ಶಾಲೆಗಳಲ್ಲಿನ ಇಂದಿನ ಶೈಕ್ಷಣಿಕ ಸಮಸ್ಯೆಗಳ ಬಗ್ಗೆಯಾಗಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆಯಾಗಲಿ , ಮಕ್ಕಳ ಹಕ್ಕುಗಳ ಬಗ್ಗೆಯಾಗಲಿ ಸರಿಯಾದ ತಿಳುವಳಿಕೆ ಇಲ್ಲದ ಕಾರಣ ಇಂತಹ ಖಾಸಗಿ ಶಾಲೆಯ ಸಂಘಗಳು ಮತ್ತು ನಕಲಿ ಶಿಕ್ಷಣ ತಜ್ಞರು ಜೊತೆ ಸೇರಿ ಖಾಸಗಿ ಮಾಧ್ಯಮಗಳಿಂದ ಹಾಗೂ ಪತ್ರಿಕೆಗಳಲ್ಲಿ ಮಾಡಿಸುತ್ತಿರುವ ಪಿತೂರಿಗಳ ಬಗ್ಗೆ ಪ್ರಶ್ನೆ ಮಾಡಲು ಶಕ್ತರಿಲ್ಲದ ಕಾರಣ ಇವರುಗಳು ಇಂತಹ ಪಿತೂರಿಗಳನ್ನು ಮತ್ತು ಷಡ್ಯಂತ್ರವನ್ನು ನಡೆಸಿ ಸರ್ಕಾರವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಯಾವುದೇ ರೀತಿಯಿಂದ ಮಣಿಯಬಾರದು. ಸರ್ಕಾರಿ ಶಾಲೆಗಳ ಎಲ್ಲಾ SDMC ಸದಸ್ಯರು ಒಂದಾಗಿ , ಇಲಾಖೆಯ ಜೊತೆ ಸೇರಿ ಕೊಂಡು ಕೆಲಸ ಮಾಡಬೇಕು
ಸರ್ಕಾರಿ ಶಾಲೆಯ ಎಸ್ಡಿಎಂಸಿ ಸದಸ್ಯರುಗಳು ಒಂದಾಗಿ ನಿಮ್ಮ ನಿಮ್ಮ ಕ್ಷೇತ್ರದ MLA ಗಳನ್ನೂ ಇಂತಹ ಪಿತೂರಿಗಳ ಮತ್ತು ಷಡ್ಯಂತ್ರಗಳ ಬಗ್ಗೆ ಪ್ರಶ್ನೆ ಮಾಡಬೇಕು. ಸರ್ಕಾರಿ ಶಾಲೆ ಗಳ ಎಸ್ಡಿಎಂಸಿ ಸದಸ್ಯರು ಒಂದಾಗಿ ಸೇರಿಕೊಂಡರೆ ಇಂತಹ ಎಷ್ಟೇ ಸಾವಿರ ಪಿತೂರಿಗಳನ್ನು, ಷಡ್ಯಂತ್ರವನ್ನು ನಕಲಿ ಕೂಗುಗಳನ್ನು ಮಾಡಿದರೂ ಏನೂ ಮಾಡಲು ಸಾಧ್ಯವಾಗುವುದಿಲ್ಲ.
ಈ ಷಡ್ಯಂತ್ರ ಅನ್ಯಾಯ ಗಳ ಬಗ್ಗೆ ಸ್ಥಳೀಯ ಕ್ಷೇತ್ರಗಳ ಎಲ್ಲಾ ಮಾನ್ಯ ಶಾಸಕರು ವಿಧಾನ ಸಭೆಗಳಲ್ಲಿ ಪ್ರಶ್ನೆ ಮಾಡಬೇಕು . ಸರ್ಕಾರಿ ಶಾಲೆಯ ಎಸ್ಡಿಎಂಸಿ ಮತ್ತು ಪೋಷಕರ ಜೊತೆ ಸೇರಿಕೊಂಡು ವೈಜ್ಞಾನಿಕ ಅಧ್ಯಯನ ಮಾಡಿಸಿ ಕೆಪಿಎಸ್ ಶಾಲೆಗಳು ಮತ್ತು ಮ್ಯಾಗ್ನೆಟ್ ಶಾಲೆಗಳಾಗಲು ಅನುಮತಿ ಕೊಡಿಸುವ ಕೆಲಸವಾಗಬೇಕು. ಅನೇಕ ಅವೈಜ್ಞಾನಿಕ ಕೆಲಸದಿಂದ, ಪಿತೂರಿಗಳಿಂದ ಮತ್ತು ಷಡ್ಯಂತ್ರಗಳಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಪ್ರತಿ ವರುಷ ಕಡಿಮೆ ಯಾಗಿ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಹೆಚ್ಚುವರಿ ನಿಯಮದಿಂದ ಅನೇಕ ಶಿಕ್ಷಕರಿಗೆ ತೊಂದರೆಯಾಗುತ್ತಿದೆ
.
ಇಂತಹ ಪಿತೂರಿಗಳನ್ನು, ಷಡ್ಯಂತ್ರವನ್ನು ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಶಿಕ್ಷಕರ ಸಂಘಗಳು ಸಹ ಕೈ ಜೋಡಿಸಿ ಪ್ರಶ್ನೆ ಮಾಡಬೇಕು ಹಾಗೂ ಸರಕಾರದ ಜೊತೆ ಸೇರಿ ಕೆಲಸಮಾಡಬೇಕು. ಆಗ ಸರಕಾರಿ ಶಾಲೆಗಳ ಉಳಿವಿನ ಜೊತೆಗೆ ಶಿಕ್ಷಕರಿಗೂ ಕೆಲಸದ ಭದ್ರತೆ ದೊರೆಯುತ್ತದೆ. ಊರಿನ ಆರ್ಥಿಕವಾಗಿ ಹಿಂದುಳಿದ ಪೋಷಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಖಾಸಗಿ ಶಾಲೆಗಳ ಕುತಂತ್ರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಸರಕಾರಿ ಶಾಲೆಗಳ ಉಳಿಸುವ ಪ್ರಯತ್ನ ವಾಗಲಿ.
ಸರ್ಕಾರಿ ಕೆಪಿಎಸ್ ಶಾಲೆಗಳ ಮತ್ತು ಮ್ಯಾಗ್ನೆಟ್ ಶಾಲೆಗಳ ಅಧ್ಯಕ್ಷರು ಆಯಾ ಶಾಸಕರಗಳೇ ಆಗಿದ್ದಾರೆ ಈ ಶಾಲೆಗಳಿಗೆ ಕೋಟಿಗಟ್ಟಲೆ ಅನುದಾನ ಕೊಡಲಾಗುತ್ತಿದೆ ಹಾಗಾಗಿ ಪ್ರತಿ ವರ್ಷ ಆಯಾ ತಾಲೂಕಿನ MLA ಗಳು ಮತ್ತು ಜಿಲ್ಲಾ ಡಿಸಿ ಗಳು ಸೋಷಿಯಲ್ ಆಡಿಟ್ ಮಾಡಿಸಿ ಸಾರ್ವಜನಿಕರ ಮುಂದೆ ಇಡಬೇಕು .
ಶಿಕ್ಷಣ ಇಲಾಖೆಯ ಶಾಲಾ ಕಾಲೇಜುಗಳಿಗೆ ಬೇಕಾಗುವ ವಿದ್ಯಾರ್ಥಿ ಗಳಿಗೆ ಶೈಕ್ಷಣಿಕವಾಗಿ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಜಿಲ್ಲಾ ಹಂತದಲ್ಲಿ ನೇರವಾಗಿ ಖರೀದಿ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ ಇದು ಮುಂದುವರಿಯ ಬೇಕು. ಯಾವುದೇ ಕಾರಣಕ್ಕೂ ರಾಜ್ಯಾದ್ಯಂತ ಕೇಂದ್ರೀಕರಣ ಮಾಡಿ ಹಿಂದೆ ಇಲಾಖೆಯಲ್ಲಿ ಇದ್ದ ಐಸಿಟಿ ತರಹದ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿ ಕೊಡಬಾರದು.
ಇದಲ್ಲದೆ, ಹಣಕಾಸಿನ ಗುರಿಗಳನ್ನು ಅನುಸರಿಸುವಾಗ, ರಾಜ್ಯ ಸರ್ಕಾರವು ಮಧ್ಯಮಾವಧಿ ಹಣಕಾಸು ಯೋಜನೆಯಲ್ಲಿ “ಹೆಚ್ಚಿನ ಆದ್ಯತೆಯ ಅಭಿವೃದ್ಧಿ ವೆಚ್ಚ” (ಇತರ ವಿಷಯಗಳ ನಡುವೆ, ಪ್ರಾಥಮಿಕ ಶಿಕ್ಷಣ, ಮೂಲಭೂತ ಆರೋಗ್ಯ ಮತ್ತು ಗ್ರಾಮೀಣ ನೀರು ಸರಬರಾಜು ಸೇರಿದಂತೆ)ಎಂದು ಘೋಷಿಸಲಾದ ಕೆಲವು ಖರ್ಚುಗಳನ್ನು ಕಡಿತಗೊಳಿಸುವುದರಿಂದ ರಕ್ಷಿಸಲು ಆದ್ಯತೆ ನೀಡುತ್ತದೆ ಅಥವಾ ಕಡಿಮೆ ಅಥವಾ ಭಾಗಶಃ ಕಡಿತಗೊಳಿಸಬಹುದು ಇದು ರಾಜ್ಯ ಸರ್ಕಾರವೇ ಮಾಡಿರುವ KFR ಕಾಯಿದೆ 13 ಹಾಫ್ 2011 ಅನ್ನು ಸರ್ಕಾರವೇ ಉಲ್ಲಂಘನೆ ಮಾಡುತ್ತದೆ ಕೂಡ.
KPS ಶಾಲೆಗಳಲ್ಲಿ KTPP Act 1999 ಕಡ್ಡಾಯವಾಗಿ ಪಾಲಿಸುವುದು, ವಾರ್ಷಿಕ ಖರ್ಚು-ವೆಚ್ಚಗಳನ್ನು ಸಾರ್ವಜನಿಕವಾಗಿ, ಪಾರದರ್ಶಕವಾಗಿ ಮಂಡಿಸುವುದು, ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಕಡ್ಡಾಯವಾಗಿ ಮಾಡಿಸುವುದು, ಗವರ್ನಿಂಗ್ ಕೌನ್ಸಿಲ್ ಸಭೆಯ ನಡವಳಿಗಳನ್ನು ಶಾಲೆಯ ಜಾಲತಾಣದಲ್ಲಿ ಪ್ರಕಟಿಸುವುದು ತುಂಬಾ ಮುಖ್ಯವಾದುದು ಇದು ಎಲ್ಲಾ ಕ್ಷೇತ್ರಗಳ MLA ಗಳು ತಮ್ಮ ತಮ್ಮ ಜಿಲ್ಲಾ ಡಿಸಿ ಮತ್ತು ಸಿಇಒ ಗಳ ಮುಖೇನ ಮಾಡಿಸಬೇಕು ಹಾಗೂ ಶಿಕ್ಷಣ ಇಲಾಖೆಯು ಇಲಾಖೆಯ ನಿಯಮದಲ್ಲಿ ತಂದು ಎಲ್ಲಾ ಡಿಸಿ ಮತ್ತು ಡಿಡಿಪಿಐ ಗಳಿಗೆ ಕಡ್ಡಾಯವಾಗಿ ತಮ್ಮ ತಮ್ಮ ಜಿಲ್ಲಾ ಜಾಲಾ ತಾಣದಲ್ಲಿ ಪ್ರತಿ ವರ್ಷ ಪ್ರಕಟಣೆ ಮಾಡಲು ಸೂಚಿಸ ಬೇಕು .


