ಪ್ರಾಕೃತಿಕ ವಿಕೋಪ ಸಂಭವಿಸಿದ ವಯನಾಡ್‌ನಲ್ಲಿ ಭಾರತೀಯ ಸೈನಿಕರು ತಮ್ಮ ಕಾರ್ಯಾಚರಣೆ ನಡೆಸಿ ಮರಳಿದೆ, ದೇಶದ ವಿವಿಧ ಭಾಗಗಳಿಂದ ಬಂದಂತಹ ಹಲವಾರು ಮಂದಿ ಆ ತಂಡದಲ್ಲಿದ್ದರು. ಆದರೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವ್ಯಕ್ತಿಯೋರ್ವರ ಮುಖವು ಮಾಸ್ಕ್‌ನಂತಹ ವಸ್ತ್ರದಿಂದ ಸದಾ ಮರೆಮಾಚಲಾಗಿತ್ತು.. ಆ ಮುಖ ಮರೆಮಾಚಿದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಋಷಿ ರಾಜಲಕ್ಷ್ಮಿ.
ಮೂಲತ ಕೇರಳದ ಆಲಪುಳ ನಿವಾಸಿ ಲೆಫ್ಟಿನೆಂಟ್ ಕರ್ನಲ್ ಋಷಿ ರಾಜಲಕ್ಷ್ಮಿ. ಮಾರ್ಚ್ 4, 2017 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದರು. ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡು 23 ಶಸ್ತ್ರಚಿಕಿತ್ಸೆಗೆ ಒಳಪಟ್ಟು ಮುಖದ ರೂಪವನ್ನೇ ಕಳೆದುಕೊಂಡ ಕಾರಣ ಸದಾ ಮುಖ ಮರೆಮಾಚಿ ಆಗಿದೆ ಇವರ ಜೀವನ. ಎಂಜಿನಿಯರಿಂಗ್ ಪದವಿ ಪಡೆದಿದ್ದ ಇವರು ತಮ್ಮ ವೃತ್ತಿ ಜೀವನ ಶುರುಮಾಡಿದ್ದು ಕೇರಳ ವಿದ್ಯುತ್ ಇಲಾಖೆಯಲ್ಲಿ, ನಂತರ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗ ಪಡೆದ ಇವರು ತಮ್ಮ ಸೈನಿಕನಾಗಬೇಕು ಎಂಬ ಕನಸಿನೊಂದಿದೆ ಭಾರತೀಯ ಸೇನೆಗೆ ಪ್ರವೇಶಿಸಿದ್ದರು.
ಋಷಿ ರಾಜಲಕ್ಷ್ಮಿ ಅವರ ಪತ್ನಿ ಕ್ಯಾಪ್ಟನ್ ಅನುಪಮಾ ಆರ್ಮಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದರು, ತಂದೆ ತಾಯಿ ಮತ್ತು ಪತ್ನಿಯ ಅತೀವ ಕಾಳಜಿಯಿಂದ ಚಿಕಿತ್ಸೆ ಪಡೆದ ಋಷಿ ಗಾಯಗಳಿಂದ ಬದುಕುಳಿದಿದ್ದರೂ ಅವರ ಮುಖ ಅವರಿಗೆ ನಷ್ಟವಾಗಿತ್ತು, ಅಂದಿನಿಂದ ಋಷಿ ಸದಾ ಮುಖಕವಚ ಧರಿಸಿ ದೇಶ ಸೇವೆಯಲ್ಲಿ ನಿರತರಾಗಿದ್ದರು. ತನ್ನ ದೇಶದ ನಾಗರಿಕರಿಗೆ ಭಯೋತ್ಪಾದಕರಿಂದ ಮಾತ್ರವಲ್ಲದೆ ಪ್ರಕೃತಿ ವಿಕೋಪದಂತಹ ದುರಂತದಿಂದಲೂ ರಕ್ಷಣೆ ನೀಡುವುದೂ ಜವಾಬ್ದಾರಿ ಆಗಿದೆ ಎಂಬ ಸೇನೆಗೆ ಜನರ ಮೇಲಿರುವ ಬದ್ಧತೆಯು ಕರ್ನಲ್ ಋಷಿ ರಾಜಲಕ್ಷ್ಮಿ ಅವರನ್ನು ವಯನಾಡ್ ದುರಂತ ಭೂಮಿಗೆ ತಲುಪಿಸಿದ್ದು, ಇದು ತನ್ನ ರಾಜ್ಯ ಕಂಡ ದುರಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿ ಜನರ ಪ್ರೀತಿಯನ್ನು ಎದೆಯಲ್ಲಿರಿಸಿ ಋಷಿ ರಾಜಲಕ್ಷ್ಮಿ, ಮತ್ತು ಭಾರತೀಯ ಸೈನಿಕರು ವಯನಾಡಿನಿಂದ ಮರಳಿದ್ದಾರೆ.
Source : keralakaumudi
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…