Advertisement
ಸುದ್ದಿಗಳು

ಅಡಿಕೆ ಉತ್ಪನ್ನಗಳ ನಿಯಂತ್ರಣ-ಬಲವಾದ ನೀತಿ ಅಗತ್ಯ | WHO ಸಭೆಯಲ್ಲಿ ಭಾರತದ ತಜ್ಞರ ಸಲಹೆ

Share

ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಗಂಭೀರ ಆರೋಗ್ಯ ಸವಾಲುಗಳನ್ನು ಎದುರಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ವೆಬ್‌ನಾರ್ ಆಯೋಜಿಸಿತ್ತು. “ಅಡಿಕೆ ಸವಾಲು: ಆಗ್ನೇಯ ಏಷ್ಯಾದಲ್ಲಿ ನೀತಿಯನ್ನು ಪ್ರಭಾವವನ್ನಾಗಿ ಪರಿವರ್ತಿಸುವುದು” ಎಂಬ ವಿಷಯದ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಸರ್ಕಾರದ ICMR ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆನ್ಷನ್ ಅಂಡ್ ರಿಸರ್ಚ್ ಸಂಸ್ಥೆಯ ನಿರ್ದೇಶಕಿ ಶಾಲಿನಿ ಸಿಂಗ್  ಹಾಗೂ ಪ್ರೊಫೆಸರ್  ಡಾ.ರುಚಿಕಾ ಗುಪ್ತಾ ವಿಚಾರ ಮಂಡಿಸಿದರು.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆನ್ಷನ್ ಅಂಡ್ ರಿಸರ್ಚ್ ಸಂಸ್ಥೆಯ  ನಿರ್ದೇಶಕಿ ಡಾ. ಶಾಲಿನಿ ಅವರು ತಂಬಾಕು ನಿಯಂತ್ರಣ ಸಂಬಂಧಿಸಿದ ಬೇರೆ ಸಭೆಯಲ್ಲಿ ಭಾಗವಹಿಸಿದ್ದರಿಂದ ಪ್ರೊಫೆಸರ್  ಡಾ.ರುಚಿಕಾ ಗುಪ್ತಾ ವಿಚಾರ ಮಂಡಿಸಿದರು. ಅದರ ವಿವರ ಹೀಗಿದೆ…

ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ: ವೈಜ್ಞಾನಿಕ ಸಾಕ್ಷ್ಯಾಧಾರಭಾರತದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧವು ಅತ್ಯಂತ ಕಟ್ಟುನಿಟ್ಟಾದ ಮತ್ತು ವೈಜ್ಞಾನಿಕ ಪ್ರಕ್ರಿಯೆಯ ಮೂಲಕ ಜಾರಿಗೆ ಬಂದಿದೆ.  ಪ್ರೊ. ಸಲ್ಮಾನ್ ಅವರು ತಿಳಿಸಿದಂತೆ, ಈ ನಿಷೇಧಕ್ಕೆ ಅಗತ್ಯವಿರುವ ಸಾಕ್ಷ್ಯಗಳನ್ನು ಕ್ಲಿನಿಕಲ್ ಅಧ್ಯಯನಗಳ ಮೂಲಕ ಹಾಗೂ ಪ್ರಯೋಗಾಲಯ ಅಧ್ಯಯನಗಳ ಮೂಲಕ ಸಂಗ್ರಹಿಸಲಾಗಿದೆ.

ಈ ಉತ್ಪನ್ನಗಳಲ್ಲಿ ನಿಕೋಟಿನ್ ಇಲ್ಲ ಎಂಬುದಾಗಿ ಉದ್ಯಮವು ಹೇಳಿದ್ದರೂ, ಭಾರತದಲ್ಲಿರುವ ಮೂರು ರಾಷ್ಟ್ರೀಯ ತಂಬಾಕು ಪರೀಕ್ಷಾ ಪ್ರಯೋಗಾಲಯಗಳಲ್ಲಿ (ಅವುಗಳಲ್ಲಿ ಒಂದು ನಮ್ಮ ಸಂಸ್ಥೆಯಲ್ಲಿದೆ) ಪರಿಶೀಲನೆ ನಡೆಸಿದೆ. ರಾಜ್ಯಗಳ ನೋಡಲ್ ಅಧಿಕಾರಿಗಳು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಉತ್ಪನ್ನಗಳನ್ನು ಮಾನದಂಡದ ವಿಧಾನಗಳಲ್ಲಿ ಪರೀಕ್ಷಿಸಿದಾಗ, ಅವುಗಳಲ್ಲಿ ನಿಕೋಟಿನ್ ಇರುವುದಕ್ಕೆ ದೃಢ ಸಾಕ್ಷ್ಯ ದೊರೆಯಿತು. ಇದು ನೀತಿ ನಿರೂಪಕರಿಗೆ ಆಹಾರ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧವನ್ನು ರೂಪಿಸಲು ನೆರವಾಯಿತು.

ನಿಯಮ ಜಾರಿಗೆ ಇರುವ ಸವಾಲುಗಳು, ಭಾರತದಲ್ಲಿ ಗುಟ್ಕಾ ನಿಷೇಧ ಜಾರಿಯಾಗಿದ್ದು ಹಲವು ವರ್ಷಗಳಾಗಿದ್ದರೂ, ಅನುಷ್ಠಾನದಲ್ಲಿ ಕೆಲವು ದೊಡ್ಡ ಸವಾಲುಗಳು ಮುಂದುವರಿದಿವೆ. ಇತ್ತೀಚಿನ GATS-India ವರದಿ ಪ್ರಕಾರ, ನಿಷೇಧದ ನಂತರ ಗುಟ್ಕಾ ಬಳಕೆಯಲ್ಲಿ ಕೆಲವು ಮಟ್ಟದ ಇಳಿಕೆ ಕಂಡುಬಂದಿದೆ.  ಆದರೆ ಭಾರತದಲ್ಲಿ ರಾಜ್ಯವಾರು ಅನುಷ್ಠಾನ ವಿಭಿನ್ನವಾಗಿದೆ. ಕೆಲವು ರಾಜ್ಯಗಳು ಪರಿಣಾಮಕಾರಿಯಾಗಿ ಉತ್ಪಾದನೆ, ಮಾರಾಟ ಮತ್ತು ಜಾಹೀರಾತು ಕಡಿಮೆ ಮಾಡಿವೆ, ಕೆಲವು ರಾಜ್ಯಗಳು ಯಶಸ್ವಿಯಾಗಿಲ್ಲ ಇದರಿಂದಲೇ ಭಾರತದಲ್ಲಿಯೇ ಪ್ರಾದೇಶಿಕ ವ್ಯತ್ಯಾಸ ಕಂಡುಬರುತ್ತದೆ. ಆದರೂ ಧೂಮರಹಿತ ತಂಬಾಕು ಬಳಕೆ ಇನ್ನೂ ಹೆಚ್ಚೇ ಇದೆ ಎಂಬುದು ನಮ್ಮ ಚಿಂತೆಯಾಗಿದೆ.

ನಿಷೇಧ ಜಾರಿಯಲ್ಲಿರುವ ಕಾರಣದಿಂದ ಗುಟ್ಕಾ/ಪಾನ್ ಮಸಾಲಾ ಮಾರಾಟ ಸಾಧ್ಯವಿಲ್ಲ. ಆದರೆ ಕೆಲವು ವರದಿಗಳು ಸೂಚಿಸುವಂತೆ, ಇವುಗಳ ಬದಲು ನಿಯಮಾವಳಿಯಲ್ಲಿ ಒಳಗಾಗದ ಇತರ ಉತ್ಪನ್ನಗಳ ಮೂಲಕ ಮಾರುಕಟ್ಟೆ ಸಾಗುತ್ತಿದೆ, “Surrogate Advertising” (ಪರೋಕ್ಷ ಜಾಹೀರಾತು) ದೊಡ್ಡ ಅನುಷ್ಠಾನ ಸವಾಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತದಲ್ಲಿ ಜಾರಿಗೆ ಇರುವ ಪ್ರಮುಖ ಅಡಚಣೆಗಳಲ್ಲಿ, ಗುಟ್ಕಾ ನಿಷೇಧವು ಮೊದಲ ಹೆಜ್ಜೆ ಮಾತ್ರ. ನಿಜವಾದ ಕಾರ್ಯಾನುಷ್ಠಾನಕ್ಕೆ ಬಲವಾದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮನೋಬಲ ಅಗತ್ಯ. ಇಲ್ಲಿನ ಮುಖ್ಯ ಸವಾಲುಗಳು ಹೀಗಿದೆ,

  • ಅಂತರರಾಜ್ಯ ವ್ಯಾಪಾರ ಸಮಸ್ಯೆ: ಒಂದು ರಾಜ್ಯದಲ್ಲಿ ನಿಷೇಧ ಪರಿಣಾಮಕಾರಿಯಾಗಿದ್ದರೂ, ಪಕ್ಕದ ರಾಜ್ಯದಿಂದ ಗಡಿ ವ್ಯಾಪಾರದ ಮೂಲಕ ಉತ್ಪನ್ನಗಳು ಬರುತ್ತವೆ.
  • ಅಡಿಕೆ ಉತ್ಪನ್ನಗಳಲ್ಲಿ ಪ್ರಾಬಲ್ಯ
  • ಭಾರತದಲ್ಲಿ ಅಡಿಕೆ ವ್ಯಾಪಾರ ಬಹುತೇಕ ಅನೌಪಚಾರಿಕ ವಲಯದಲ್ಲಿ ನಡೆಯುತ್ತದೆ. ಪ್ಯಾಕೇಜಿಂಗ್ ನಿಯಂತ್ರಣ ಇಲ್ಲ, ಘಟಕಗಳ ಘೋಷಣೆ ಇಲ್ಲ, ಗುಣಮಟ್ಟ ಏಕರೂಪವಿಲ್ಲ.
  • ಅನುಷ್ಠಾನಕಾರರ ಸಂಪನ್ಮೂಲ ಕೊರತೆ
  • Food Safety Act ಅಡಿಯಲ್ಲಿ ಅಧಿಕಾರ ಇದ್ದರೂ, ಸಂಪನ್ಮೂಲ ಮತ್ತು ಶಕ್ತಿ ಸೀಮಿತವಾಗಿದೆ.
  • ದುರ್ಬಲ ದಂಡನೆಗಳು, ಪೆನಾಲ್ಟಿಗಳು ತುಂಬಾ ಕಡಿಮೆ ಇರುವುದರಿಂದ ಮಾರಾಟಗಾರರಿಗೆ ಭಯ ಅಥವಾ ತಡೆ ಉಂಟಾಗುವುದಿಲ್ಲ.
  • ಜನಜಾಗೃತಿ ಕೊರತೆ- ನಿಷೇಧ ಇದ್ದರೂ ಸಾರ್ವಜನಿಕ ಜಾಗೃತಿ ಬಹಳ ಕಡಿಮೆ. ಕೆಲವೊಮ್ಮೆ ಅನುಷ್ಠಾನಕಾರರಲ್ಲಿಯೂ ತಿಳುವಳಿಕೆ ಕೊರತೆ ಇದೆ.

ಅಡಿಕೆ ಬಳಕೆ ಮತ್ತು ಬಾಯಿ ಕ್ಯಾನ್ಸರ್ ಸಂಬಂಧ :  ಅಡಿಕೆ ಬಾಯಿ ಕ್ಯಾನ್ಸರ್ ಉಂಟುಮಾಡುವ ಪ್ರಮುಖ ಕಾರಣಗಳಲ್ಲಿ ಒಂದೆಂಬುದು ಸ್ಪಷ್ಟ ಸಾಕ್ಷ್ಯಗಳಿಂದ ದೃಢವಾಗಿದೆ.ಇತ್ತೀಚಿನ ವಿಶ್ಲೇಷಣೆ ಪ್ರಕಾರ, ಅಡಿಕೆ ಸೇವನೆ ನಿಲ್ಲಿಸಿದರೆ ಬಾಯಿ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ಆದರೆ ಧೂಮಪಾನ ನಿಲ್ಲಿಸಿದ ನಂತರ ಎಷ್ಟು ವರ್ಷಗಳಲ್ಲಿ ಅಪಾಯ ಕಡಿಮೆಯಾಗುತ್ತದೆ ಎಂಬಂತೆ, ಅಡಿಕೆಗೆ ಸಂಬಂಧಿಸಿದ ದೀರ್ಘಾವಧಿಯ ಅಧ್ಯಯನಗಳು ಇನ್ನಷ್ಟು ಅಗತ್ಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ನೀತಿನಿರ್ಧಾರಕರಿಗೆ ಶಿಫಾರಸು ಮಾಡಿದ ಕ್ರಮ : ಅಡಿಕೆ ನಿಯಂತ್ರಣಕ್ಕೆ ಮುಂದಿನ ತಂತ್ರಗಳನ್ನು ಈಗಾಗಲೇ ಹೇಳಿದೆ. ಅದರಲ್ಲಿ ತೆರಿಗೆ ಹೆಚ್ಚಿಸುವುದು, ತಂಬಾಕು ಉತ್ಪನ್ನಗಳಂತೆ ಅಡಿಕೆ ಉತ್ಪನ್ನಗಳ ಮೇಲೂ ತೆರಿಗೆ ಹೆಚ್ಚಿಸಬೇಕು. COTPA ಕಾಯ್ದೆಯ ವ್ಯಾಪ್ತಿ ವಿಸ್ತರಣೆಯಾಗಬೇಕು. ಭಾರತದಲ್ಲಿನ Tobacco Control Act ನಿಯಮಗಳನ್ನು ಅಡಿಕೆಗೆ ಸಹ ಅನ್ವಯಿಸುವ ಅಗತ್ಯ ಇದೆ. ಆರೋಗ್ಯ ಎಚ್ಚರಿಕೆ ಸಂದೇಶ ಕಡ್ಡಾಯವಾಗಿದೆ. ತಂಬಾಕುಗೆ ಇರುವಂತೆ ಕೇವಲ ಅಡಿಕೆ ಉತ್ಪನ್ನಗಳ ಮೇಲೂ ಆರೋಗ್ಯ ಎಚ್ಚರಿಕೆ ಇರಬೇಕು.  ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದಲ್ಲಿ ಏಕೀಕರಣ ಅಗತ್ಯವಿದ್ದು, ಅಡಿಕೆ ನಿಯಂತ್ರಣವು ಬಾಯಿಯ ಆರೋಗ್ಯ ಭಾಗವಾಗಬೇಕು. NCD ಕಾರ್ಯಕ್ರಮಗಳಲ್ಲಿ ಸೇರಿಸುವುದು, Cancer, Stroke, Cardiac prevention ಯೋಜನೆಗಳ ಜೊತೆಗೂಡಬೇಕು. ಶಾಲಾ ಆರೋಗ್ಯ ಕಾರ್ಯಕ್ರಮದಲ್ಲಿ ನಿಯಂತ್ರಣ ಕೂಡಾ ಅಗತ್ಯವಾಗಿ ಬೇಕು. ಅಡಿಕೆ ಬಳಕೆ ಬಹಳ ಚಿಕ್ಕ ವಯಸ್ಸಿನಲ್ಲಿ ಆರಂಭವಾಗುತ್ತದೆ. ಆದ್ದರಿಂದ ಶಾಲಾ ಮಟ್ಟದಲ್ಲೇ ನಿಯಂತ್ರಣ ಶಿಕ್ಷಣ ಅಗತ್ಯ.  ಆಶಾ ಕಾರ್ಯಕರ್ತರು, ANM, ಅಂಗನವಾಡಿ ಸಿಬ್ಬಂದಿ ಸಮುದಾಯದಲ್ಲಿ ನೇರ ಸಂಪರ್ಕದಲ್ಲಿರುತ್ತಾರೆ, ಅವರಿಗೆ ಹೆಚ್ಚಿನ ಮಾಹಿತಿ ಹಾಗೂ ಅವರ ಮೂಲಕ ನೀಡುವ ಸಂದೇಶ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಒಟ್ಟಾರೆ,  ಭಾರತದಲ್ಲಿ ಅಡಿಕೆಯಿಂದ ಆಗುವ ಆರೋಗ್ಯ ಪರಿಣಾಮಗಳ ಹೊರೆಗಳ ಅಧ್ಯಯನ ಅಗತ್ಯ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…

10 minutes ago

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

13 hours ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

1 day ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

1 day ago

ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…

2 days ago