Opinion

#Opinion | ನಾನೇಕೆ ಕೃಷಿಕ….? | ಕೃಷಿಕ ರಮೇಶ ದೇಲಂಪಾಡಿ ಹೇಳುತ್ತಾರೆ…. |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹುಟ್ಟಿದ್ದು ಕೃಷಿ ಕುಟುಂಬದಲ್ಲಿ.ಕೃಷಿ ಹೊರತಾಗಿ ಇತರ ಆದಾಯ ಇಲ್ಲದ ಮನೆ.1960ರ ಉತ್ತರಾರ್ಧದ ದಶಕದಲ್ಲಿ ನನ್ನ ಜನ್ಮ.ಈ ಕಾಲಘಟ್ಟದಲ್ಲಿ ಮತ್ತು ಮುಂದಕ್ಕೆ 1990ರ ದಶಕದ ತನಕವೂ ಕೃಷಿ ಆದಾಯದ ಮುಂದೆ ಇತರ ಉದ್ಯೋಗಗಳಿಂದ ಸಿಗುವ ಸಾಮಾನ್ಯ ಆದಾಯ ಕಡಿಮೆ ಇದ್ದ ಕಾಲಘಟ್ಟ.

Advertisement

ಹಾಗಾಗಿ ಏನೇ ವಿದ್ಯಾಭ್ಯಾಸ ಇದ್ದರೂ ಕೊನೆಗೆ ಜೀವನ ಕೃಷಿಯಲ್ಲೇ ಅಂತ ಹೆತ್ತವರ ನಿರ್ಧಾರ.ಅದಕ್ಕೆ ಪೂರಕವಾಗಿ ನನ್ನ ಮನಸ್ಥಿತಿಯೂ ಹೊಂದಿಕೊಂಡಿತ್ತು. ನನ್ನ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದದ್ದು 1987ನೇ ಇಸವಿಯಲ್ಲಿ. ಅಂದಿನಿಂದ ಕೃಷಿಯೇ ನನ್ನ ಉದ್ಯೋಗ.

ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಹೆಚ್ಚು ಆದಾಯ ಕೊಡುತ್ತದೆ ಅಂತ.ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಕನಿಷ್ಟ ಶ್ರಮದಾಯಕ ಅಂತ.ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಹೆಚ್ಚು ನೆಮ್ಮದಿ ಕೊಡುವಂತಹದ್ದು ಅಂತ.
ಹೌದು ,ನನ್ನ ಆದಾಯ ಸಂಪೂರ್ಣವಾಗಿ ಕೃಷಿ ಕ್ಷೇತ್ರದಿಂದಲೇ.ನನ್ನ ಎಲ್ಲಾ ಆಸೆ,ಬಯಕೆಗಳನ್ಬೂ ಪೂರೈಸಿಕೊಳ್ಳಲು ಪ್ರಯತ್ನಿಸ ಬೇಕಾದ್ದೂ ಇದೇ ಕೃಷಿ ಕ್ಷೇತ್ರದ ಆದಾಯದಿಂದಲೇ.ಇದಕ್ಕಾಗಿ ಕೃಷಿಯಿಂದ ನನಗೆ ಹಣ ಬೇಕು,ಮತ್ತಷ್ಟು ಬೇಕು.
ನನಗೂ ಆಸೆಗಳಿವೆ.ಸ್ವಂತಕ್ಕೊಂದು ನನ್ನದೇ ಆದ , ನನ್ನ ಸೈಟಿನ ಮನೆ ಇರಬೇಕು.ಕನಿಷ್ಟ ಇನ್ನೋವಾ ಲಕ್ಷುರಿ ಕಾರು ಕೊಂಡು ಕೊಳ್ಳಲು ಸಾಧ್ಯವಾಗಬೇಕು.

ಆಗಿಲ್ಲ ಇನ್ನೂ,ಪೂರೈಸಿಲ್ಲ ಇನ್ನೂ.ಅಷ್ಟೊಂದು ಹಣ ನನಗಿನ್ನೂ ಕೃಷಿಯಿಂದ ದೊರಕಿಲ್ಲ. ಅಷ್ಟು ಸಾಕಾ? ಖಂಡಿತಾ ಸಾಲದು.ಸಾಧ್ಯ ಆದರೆ ಸ್ವಂತಕ್ಕೊಂದು ಹೆಲಿಕಾಪ್ಟರ್ ಖರೀದಿಸ ಬೇಕು.ಖಾಸಾಗಿ ಜೆಟ್ ವಿಮಾನ ಇಟ್ಟುಕೊಳ್ಳ ಬೇಕು.ಆಸೆ ತಪ್ಪಾ?

‌ನನ್ನ ಉತ್ಪನ್ನಗಳನ್ಬು ನಾನು ಮುಕ್ತ ಮಾರುಕಟ್ಟೆ ಬೆಲೆಯಲ್ಲಷ್ಟೇ ಮಾರಬೇಕಾದ ಅನಿವಾರ್ಯತೆ ನನಗಿದೆ.ನನ್ನ ಉತ್ಪನ್ನಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚು ದರ ಕೊಟ್ಟು ಖರೀದಿಸುವ ಗಿರಾಕಿಗಳು ನನಗಿಲ್ಲ. ಅದೆಲ್ಲ ಪೂರೈಸಿದ ಬಳಿಕ ಇನ್ನುಳಿದ ವಿಷಯಗಳತ್ತ ಗಮನ ಕೊಡೋಣ.ಅಲ್ಲಿ ತನಕ ನನ್ನ ನೀತಿಗಳಲ್ಲಿ‌ ಯಾವ ಬದಲಾವಣೆಯೂ ಇಲ್ಲ.

ಬರಹ :
ರಮೇಶ್‌ ದೇಲಂಪಾಡಿ
ರಮೇಶ್‌ ದೇಲಂಪಾಡಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

52 minutes ago

ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…

2 hours ago

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

1 day ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

1 day ago