Advertisement
Opinion

#Agriculture |ಸುಸ್ಥಿರ ಮತ್ತು ಸಮಗ್ರ ಕೃಷಿ ಅಭಿವೃದ್ಧಿ ಏಕೆ ಮತ್ತು ಹೇಗೆ…?

Share

ನಮ್ಮ ಬಹುತೇಕ ರೈತರು ಹೆಚ್ಚು ರಾಸಾಯನಿಕ ಗೊಬ್ಬರ #ChemicalFertilizers ಮತ್ತು ಔಷಧಿಗಳನ್ನು ಬಳಸುತ್ತಿರುದರಿಂದ, ಆಧುನಿಕ ಕಾಲದಲ್ಲಿ ಅಪರಿಮಿತ ಹಣ ಮಾಡುವ ಆಸೆಗೆ ಸಿಲುಕಿ ವಾಣಿಜ್ಯದಾಯಕ ಏಕಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿರುವದರಿಂದ ಮಣ್ಣಿನ ರಚನೆ ಹದಗೆಟ್ಟು, ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿ #micro-organism ಗಳ ಸಂಖ್ಯೆ ಕ್ಷೀಣಗೊಂಡು, ಅವಶ್ಯಕ ಪೋಷಕಾಂಶಗಳ ಕೊರತೆ ಮತ್ತು ಭೂಮಿಯ ಫಲವತ್ತತೆ ಕಡಿಮೆಯಾಗಿ, ಮೇಲ್ಪದರದ ಮಣ್ಣು ಗಡುಸಾಗುತ್ತಿದೆ. ಮಣ್ಣಿನಲ್ಲಿ ನೀರು ಇಂಗದೇ, ಮಣ್ಣು #soil ನೀರನ್ನು ಹಿಡಿದಿಡಲಾಗದ ಸ್ಥಿತಿಯನ್ನು ತಲುಪಿದೆ.

ಇಂತಹ ಮಣ್ಣಿನಲ್ಲಿ ಬೆಳೆ ಮತ್ತು ನಿವ್ವಳ ಆದಾಯ ಅನಿಶ್ಚಿತತೆಯಿಂದ ಕೂಡಿರುವುದರಿಂದ ವ್ಯವಸಾಯದ ಖರ್ಚು ಅಧಿಕವಾಗಿ, ರೈತರು ಸಾಲಭಾಧೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಇದಕ್ಕಿರುವ ಸುಲಭ ಪರಿಹಾರ ಸಾವಯವ, ಸುಸ್ಥಿರ ಮತ್ತು ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವುದು.

1. ಮಣ್ಣು ಮತ್ತು ನೀರನ್ನು ಸಂರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವದು. ಬದುಗಳನ್ನು ನಿರ್ಮಿಸುವದು, ಜಮೀನಿನ ಸುತ್ತ ಹಸಿರೆಲೆ ಗೊಬ್ಬರ ಮತ್ತು ಬಹುಪಯೋಗಿ ಮರಗಿಡಗಳನ್ನು ಬೆಳೆಸುವುದು, ಹೊದಿಕೆ ಬೆಳೆಗಳನ್ನು ಬೆಳೆಯುವುದು, ಸಾವಯವ ತ್ಯಾಜ್ಯವನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಮೇಲ್ಪದರದಲ್ಲಿ ಹರಡುವುದು ಇತ್ಯಾದಿ.
ಕಾಡು ಜಾತಿಯ ಮರಗಳಾದ ತೇಗ, ಸಿಲ್ವರ್, ಮಹಾಘನಿ, ಹೆಬ್ಬೇವು, ಮುಂತಾದವುಗಳನ್ನು ಯಾವುದೇ ಕಾರಣಕ್ಕೂ ಬೆಳೆಯಬೇಡಿ.

2. ಮಣ್ಣಿನ ಫಲವತ್ತತೆ ಮತ್ತು ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಹಸಿರು ಗೊಬ್ಬರ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ, ಎಣ್ಣೆಕಾಳುಗಳ ಹಿಂಡಿ, ಕುರಿ-ಕೋಳಿ ಗೊಬ್ಬರ ಇತ್ಯಾದಿಗಳನ್ನು ನಿಯಮಿತವಾಗಿ ಕೃಷಿಭೂಮಿಗೆ ಸೇರಿಸಬೇಕು.

3. ಬೆಳೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವುದು ಏಕಬೆಳೆಯ ಬದಲಿಗೆ ಬಹುಬೆಳೆ ಪದ್ದತಿ (ಅಡಿಕೆ, ತೆಂಗು, ಬಾಳೆ, ಅರಿಶಿನ, ಕೊಕೊ, ಸಾಂಬಾರು ಪದಾರ್ಥಗಳು) ಅಕಡಿ ಬೆಳೆ (ಶೇಂಗಾ, ತೊಗರಿ, ಅಲಸಂದೆ, ಹೆಸರು, ರಾಗಿ, ಸಿರಿಧಾನ್ಯ, ಹರಳು) ಅಂತರಬೆಳೆಗಳು (ಈರುಳ್ಳಿ, ಕೊತ್ತಂಬರಿ, ಬೆಂಡೆ, ತೊಗರಿ ಇತ್ಯಾದಿ) ಬದಲಿ ಬೆಳೆ, ಮೋಹಕ ಬೆಳೆ (ಹರಳು, ಚೆಂಡುಹೂ, ಬೆಂಡೆ), ಪರ್ಯಾಯ ಬೆಳೆ (ಕೊರಲೆ, ಕಡಲೆ, ಜೋಳ) ಇತ್ಯಾದಿ ಬೆಳೆಪದ್ದತಿಗಳ ಬಗ್ಗೆ ತಿಳಿದುಕೊಳ್ಳುವದು ಮತ್ತು ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳವುದು.

4. ವ್ಯವಸ್ಥಿತ ಮತ್ತು ಸಮರ್ಪಕ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ತಳಿ ಮತ್ತು ಬೀಜದ ಆಯ್ಕೆ, ತೇವಾಂಶಕ್ಕನುಗುಣವಾಗಿ ಬಿತ್ತನೆಯ ಸಮಯವನ್ನು ನಿರ್ಧರಿಸುವದು. ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚು ಒತ್ತುಕೊಡುವುದು ಇತ್ಯಾದಿ.  ಬೀಜ ಸ್ವಾವಲಂಬನೆ : ಸಾಧ್ಯವಾದಷ್ಟು ಬಿತ್ತನೆ ಬೀಜಗಳನ್ನು ನೀವೇ ಸಂಗ್ರಹಿಸಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಿ.

5. ಕೃಷಿ ಅವಲಂಬಿತ ಜಾನುವಾರಗಳನ್ನು ಸಾಕುವದು.ಹಸು, ಕುರಿ, ಕೋಳಿ ಮುಂತಾದ ಜಾನುವಾರಗಳು ಕೃಷಿಗೆ ಪೂರಕ ಮತ್ತು ಹೆಚ್ಚುವರಿ ಆದಾಯ ತರುತ್ತವೆ.

6. ರಾಸಾಯನಿಕವಿಲ್ಲದೆ ಸಾವಯವ ಪದ್ದತಿಗಳಿಂದ ರೋಗ ಮತ್ತು ಕೀಟಗಳನ್ಬು ಹತೋಟಿ ಮಾಡುವದು

7. ಕೃಷಿಸಂಬಂಧಿತ ಉಪಕಸುಬುಗಳನ್ನು ಅಳವಡಿಸಿಕೊಳ್ಳುವುದು.

8. ರೈತ ಸಂಘಟನೆಗಳನ್ನು ಸೇರುವುದು, ತರಬೇತಿ ಮತ್ತು ಮೇಳಗಳಲ್ಲಿ ಭಾಗವಹಿಸುವುದರಿಂದ ಬಹಳಷ್ಟು ಮಾಹಿತಿ ದೊರೆಯುತ್ತದೆ ಮತ್ತು ಪರಸ್ಪರರ ಸಂಪರ್ಕದಿಂದ ಕೆಲಸಗಳು ಸುಲಲಿತವಾಗಿ ಸಾಗುತ್ತವೆ.

9. ಸಮುದಾಯಿಕವಾಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ಮಾರಾಟ ಮುಂತಾದ ತಾವು ಬೆಳೆದ ಪದಾರ್ಥಗಳಿಗೆ ದುಪ್ಪಟ್ಟು ಆದಾಯ ಗಳಿಸುವುದು. ಇದಕ್ಕಾಗಿ ಸರ್ಕಾರದಿಂದ ದೊರೆಯುವ ಪ್ರೋತ್ಸಾಹಧನವನ್ನು ಸಮರ್ಪಕವಾಗಿ ಬಳಸಿ.

(Source)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಎಲೆಚುಕ್ಕೆ ರೋಗ | ತಕ್ಷಣದ ಪರಿಹಾರಕ್ಕಿಂತ ವೈಜ್ಞಾನಿಕ ನಿರ್ವಹಣೆ ಮುಖ್ಯ | 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ ಪರಿಹಾರ

ಅಡಿಕೆ ಎಲೆಚುಕ್ಕೆ ರೋಗಕ್ಕೆ ತಕ್ಷಣದ ಪರಿಹಾರವಿಲ್ಲ, 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ…

4 hours ago

ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ

ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ‘FRUITS ID’ ಕಡ್ಡಾಯ. ನೋಂದಣಿ ಮಾಡದಿದ್ದರೆ ಭವಿಷ್ಯದ…

8 hours ago

ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ

ಗದಗ ಜಿಲ್ಲೆಯಲ್ಲಿ ಮುಂದಿನ 3-6 ದಿನ ತೀವ್ರ ಬಿಸಿಗಾಳಿ ಸಾಧ್ಯತೆ. ಸಾರ್ವಜನಿಕರು ಆರೋಗ್ಯದ…

8 hours ago

ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…

20 hours ago

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

1 day ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

2 days ago