ನೀರಿನ ಬಾಟಲಿಯ ಮುಚ್ಚಳಗಳು ಏಕೆ ನೀಲಿ ಬಣ್ಣದ್ದಾಗಿರುತ್ತವೆ…? ಇಲ್ಲಿದೆ ಮಾಹಿತಿ

November 18, 2023
10:49 AM

ಇತ್ತೀಚಿನ ದಿನಗಳಲ್ಲಿ ನೀರಿನ ಬಾಟಲಿಗಳ(Water Bottle) ಬಳಕೆ ಹೆಚ್ಚಾಗಿದೆ. ಪ್ರವಾಸಗಳು(Tourism) ಮತ್ತು ಸಭೆಗಳ(Meeting) ಸಮಯದಲ್ಲಿ ನಾವು ನೀರಿನ ಬಾಟಲಿಗಳನ್ನು ಖರೀದಿಸುತ್ತೇವೆ. ಆದರೆ ನಾವು ನೋಡುವ ನೀರಿನ ಬಾಟಲಿಗಳಲ್ಲಿ ಹೆಚ್ಚಿನವು ಕಡು ನೀಲಿ ಮುಚ್ಚಳಗಳನ್ನು(Blue cap) ಹೊಂದಿರುತ್ತವೆ. ಹಾಗಿದ್ದರೆ ಬಹುತೇಕ ನೀರಿನ ಬಾಟಲಿಗಳು ಈ ನೀಲಿ ಬಣ್ಣದ ಕ್ಯಾಪುಗಳನ್ನೇ ಹೊಂದಿರುವುದಕ್ಕೆ ಕಾರಣವೇನು? ಅದೇ ಬಣ್ಣವನ್ನು(color) ಬಳಸಲು ನಿರ್ದಿಷ್ಟ ಕಾರಣವೇನಾದರೂ ಇದೆಯೇ? ಇಂತಹ ಕುತೂಹಲ ಎಂದಾದರೂ ನಿಮ್ಮನ್ನು ಕಾಡಿದೆಯೇ?ಹೌದಾದಲ್ಲಿ ಬನ್ನಿ ಅದಕ್ಕೆ ಕಾರಣ ತಿಳಿಯೋಣ.

Advertisement
Advertisement

ಒಂದು ನೀರಿನ ಬಾಟಲಿಗೆ ನೀಲಿ ಕ್ಯಾಪ್ ಇದ್ದರೆ, ಅದು ಖನಿಜಯುಕ್ತ ನೀರು(Mineral Water) ಎಂದು ಅರ್ಥ. ಈ ನೀಲಿ ಕ್ಯಾಪ್ ವಾಟರ್ ಬಾಟಲ್‌ಗಳಲ್ಲಿರುವ ನೀರನ್ನು ಮಿನರಲ್ ವಾಟರ್ ಎಂದು ಹೇಳಲಾಗುತ್ತದೆ. ಇನ್ನೂ ಕೆಲವು ಬಾಟಲಿಗಳಲ್ಲಿ ಬಿಳಿ ಮತ್ತು ಹಸಿರು ಬಣ್ಣದ ಮುಚ್ಚಳಗಳಿರುತ್ತವೆ. ಹಸಿರು ಬಣ್ಣದ ಮುಚ್ಚಳದ ಅರ್ಥ ಬಾಟಲ್ ನೀರಿಗೆ ಹೆಚ್ಚುವರಿ ಖನಿಜಗಳನ್ನು ಸೇರಿಸಲಾಗಿದೆ ಎಂದು. ಕೆಲವು ನೀರಿನ ಬಾಟಲ್ ಕಂಪನಿಗಳು ನೀರಿಗೆ ಎಲೆಕ್ಟ್ರೋಲೈಟ್‌ಗಳಂತಹ(Electrolyte) ರುಚಿಗಳನ್ನು ಸೇರಿಸುತ್ತವೆ. ಅಂತಹ ಬಾಟಲಿಗಳ ಮೇಲಿನ ಕವರಿನ ಮೇಲಿನ ಅದರಲ್ಲಿ ಸೇರಿಸಿರುವ ರುಚಿಕಾರಕಗಳ ಹೆಸರನ್ನು ನೀವು ಓದಿ ನೋಡಬಹುದು.

ಕೆಲವು ನೀರಿನ ಬಾಟಲಿಗಳು ಕೆಂಪು, ಹಳದಿ, ಕಪ್ಪು ಮತ್ತು ಗುಲಾಬಿ ಬಣ್ಣದ ಮುಚ್ಚಳಗಳನ್ನು ಹೊಂದಿರುತ್ತವೆ. ಕೆಂಪು ಬಣ್ಣದ ಕ್ಯಾಪ್ ಹೊಂದಿರುವ ನೀರಿನ ಬಾಟಲಿಗಳು ಕಾರ್ಬೊನೇಟೆಡ್ ನೀರನ್ನು ಹೊಂದಿರುತ್ತವೆ ಎಂಬುದನ್ನು ನೆನಪಿಡಿ. ಹಳದಿ ಮುಚ್ಚಳದ ನೀರಿನ ಬಾಟಲಿಯಲ್ಲಿ ವಿಟಮಿನ್ಸ್ ಮತ್ತು ಎಲೆಕ್ಟ್ರೋಲೈಟ್ಸ್‌ ಸೇರಿಸಲಾಗಿರುತ್ತದೆ. ಮುಖ್ಯವಾಗಿ ನೀರಿನ ಬಾಟಲಿಗಳಿಗೆ ಬೇರೆ ಬೇರೆ ಬಣ್ಣಗಳ ಮುಚ್ಚಳವನ್ನು ಹಾಕಲು ಇರುವ ಕಾರಣವೆಂದರೆ ಅವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುವುದು.

ಕೆಲವು ಬಾಟಲಿಗಳಿಗೆ ಕಪ್ಪು ಬಣ್ಣದ ಕ್ಯಾಪ್ ಇರುತ್ತದೆ. ಈ ಬಾಟಲಿಯಲ್ಲಿ ಕ್ಷಾರೀಯ ನೀರು ಇದೆ ಎಂದು ಅರ್ಥಮಾಡಿಕೊಳ್ಳಬೇಕು. ಕಪ್ಪು ಕ್ಯಾಪ್ ಹೊಂದಿರುವ ನೀರಿನ ಬಾಟಲಿಗಳು ಅಪರೂಪ. ಇವುಗಳನ್ನು ಪ್ರೀಮಿಯಂ ನೀರಿನ ಉತ್ಪನ್ನಗಳಿಗೆ ಮಾತ್ರ ಬಳಸಲಾಗುತ್ತದೆ. ಹೆಚ್ಚಿನ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯುತ್ತಾರೆ. ಇನ್ನುಳಿದಂತೆ ಕೆಲವು ಬಾಟಲಿಗಳು ಪಿಂಕ್‌(ಗುಲಾಬಿ) ಕಲರ್‌ ಕ್ಯಾಪ್‌ ಹೊಂದಿರುತ್ತವೆ. ಇಂತಹ ಬಾಟಲಿಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಚಾರಿಟಿಗಳು ಬಳಸುತ್ತವೆ.

ವೆಂಕಟ್, ಘನತ್ಯಾಜ್ಯ ಪರಿವೀಕ್ಷಕರು-139, ಬಿ.ಬಿ.ಎಂ.ಪಿ.

If a water bottle has a blue cap, it means it is mineral water. The water in these blue cap water bottles is said to be mineral water. Some bottles also have white and green caps. A green colored lid means that extra minerals have been added to the bottled water. Some water bottling companies add flavors such as electrolytes to the water. You can read the names of flavorings added to such bottles on the lid.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ
ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ
February 12, 2026
6:47 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror