ವಾರದ ಹಿಂದೆ ಪೇಟೆಯಲ್ಲಿ ನನ್ನ ಸ್ನೇಹಿತರೊಬ್ಬರ ಎಲೆಕ್ಟ್ರಕಲ್ ಮಳಿಗೆಗೆ ಕಾರ್ಯನಿಮಿತ್ತ ಹೋಗಿದ್ದೆ. ನಾನು ಅವರ ಮಳಿಗೆಗೆ ಹೋದಾಗಲೇ ಒಬ್ಬ ಎಲೆಕ್ಟ್ರಿಕಲ್ ಉತ್ಪನ್ನ ಕಂಪನಿವೊಂದರ ಏಜಂಟ್ ರೊಬ್ಬರು ಬಂದು ತಮ್ಮ ಕಂಪನಿಯ ಉತ್ಪನ್ನ ಮಾರಾಟ ಮಾಡುವ ಏಜನ್ಸಿ ತೆಗೆದುಕೊಳ್ಳಲು ಅವರಿಗೆ ಒತ್ತಾಯ ಮಾಡುತ್ತಿದ್ದರು. ಆದರೆ ಆ ಅಂಗಡಿ ಮಾಲಿಕರು ಆ ಏಜನ್ಸಿ ತೆಗೆದುಕೊಳ್ಳಲು ಒಪ್ಪಲಿಲ್ಲ.
ಒಬ್ಬ ಪೇಟೆಯ ಉದ್ಯಮಿ ಅಡಿಕೆ ಬೆಳೆಯ ಭವಿಷ್ಯದ ಬಗ್ಗೆ ಈ ಪರಿ ಆತಂಕದಿಂದ ಚಿಂತಿಸುತ್ತಾನೆಂದರೆ ನಾವು ಸ್ವತಃ ಅಡಿಕೆ ಬೆಳೆಗಾರರು ಇನ್ನೆಷ್ಟು ಈ ಬಗ್ಗೆ ಅವಲೋಕನ ಚಿಂತನ ಮಂಥನ ಮಾಡಬೇಕು ಹೇಳಿ….?. ಆದರೆ ಖಂಡಿತವಾಗಿಯೂ ನಮ್ಮ ಅಡಿಕೆ ಬೆಳೆಗಾರರ ಸಮೂಹದಲ್ಲಿ ಅದರಲ್ಲೂ ಇವತ್ತು ಎಲೆಚುಕ್ಕಿ ಬಾಧೆ, ಹಳದಿ ಎಲೆರೋಗ ಇರದ ಅಡಿಕೆ ಕೃಷಿಕರಂತೂ ಕಿಂಚಿತ್ತೂ ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಅವಕಾಶ ಇದ್ದಲ್ಲಿ ಇನ್ನಷ್ಟು ಅಡಿಕೆ ಬೆಳೆ ವಿಸ್ತರಣೆಯನ್ನೂ ಮಾಡಲು ಆಸಕ್ತರು. ಹೆಚ್ಚಿನ ಯಾವ ಅಡಿಕೆ ಬೆಳೆಗಾರರಿಗೂ ಈಗಾಗಲೇ ರಾಜ್ಯ ಹೊರ ರಾಜ್ಯದಲ್ಲಿ ವಿಸ್ತರಣೆ ಆಗಿರುವ ಮತ್ತು ಆಗುತ್ತಿರುವ ಅಡಿಕೆ ಬೆಳೆ ಯಿಂದ ಬೆಲೆ ಗಂಭೀರ ಸ್ವರೂಪದಲ್ಲಿ ಕುಸಿ ಯುತ್ತದೆ ಎಂಬ ಆತಂಕ ಕಾಣಿಸುತ್ತಿಲ್ಲ.
ಒಂದು ಮಾತನ್ನ ಅಡಿಕೆ ಬೆಳೆಗಾರರೆಲ್ಲರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ” ಅಡಿಕೆ ಎಲೆಚುಕ್ಕಿ ರೋಗಬಾಧೆ ಮೊನ್ನೆ ಬೇಸಿಗೆ ಬಂದಾಗಿನಿಂದ ನಿಂತಿದೆ. ಆದರೆ ಇದು ಎಲೆಚುಕ್ಕಿ ರೋಗದ ಇಂಟ್ರವೆಲ್ ಮಾತ್ರ. ಈ ಆರು ತಿಂಗಳಲ್ಲಿ ಅಡಿಕೆ ಎಲೆಚುಕ್ಕಿ ರೋಗಕ್ಕೆ ಸರ್ಕಾರದ ಸಂಶೋಧನಾ ಕೇಂದ್ರ ಗಳು ಪರಿಣಾಮಕಾರಿ ಔಷಧ ಕಂಡು ಹಿಡಿದಲ್ಲಿ ಮಾತ್ರ ಎಲ್ಲಾ ಅಡಿಕೆ ಬೆಳೆಗಾರರು ಬಚಾವಾಗುತ್ತಾರೆ. ಆದರೆ ಅಡಿಕೆ ಎಲೆಚುಕ್ಕಿ ರೋಗಕ್ಕೆ ಅಷ್ಟು ವೇಗವಾಗಿ ಮದ್ದು ಕಂಡುಹಿಡಿಯುತ್ತಾರಾ..? ಸಾಧ್ಯವೇ..?
ಅಡಿಕೆ ಎಲೆಚುಕ್ಕಿ ರೋಗ ಮತ್ತೆ 2023 ರ ಜುಲೈ ಆಗಷ್ಟ್ ಸೆಪ್ಟೆಂಬರ್ ತಿಂಗಳ ಘೋರ ಮಳೆಗಾಲದಲ್ಲಿ ಮತ್ತೆ ತನ್ನ ಕೆಲಸ ಶುರುಮಾಡುತ್ತದೆ. ಈ ವರ್ಷ ಅಡಿಕೆ ಎಲೆಚುಕ್ಕಿ ರೋಗದಿಂದ ಬಚಾವಾದವರು ಮುಂದಿನ ವರ್ಷ ಬಾಧಿತ ಸಾಲಿನಲ್ಲಿ ಇರುತ್ತಾರೆ. ಇದು ಎಲ್ಲಾ ಅಡಿಕೆ ಬೆಳೆಗಾರರೂ ಒಪ್ಪಿ ಕೊಳ್ಳಬೇಕಾದ ಸತ್ಯ.
ಅಕಸ್ಮಾತ್ತಾಗಿ ಅಡಿಕೆ ಎಲೆಚುಕ್ಕಿ ರೋಗ ಮುಂದುವರಿದಲ್ಲಿ. ಮುಂದುವರಿದರೆ ನೇರವಾಗಿ ಅಡಿಕೆಯನ್ನೇ ನಂಬಿಕೊಂಡ ಸಾಲ ಮೂಲ ಮಾಡಿಕೊಂಡ ಅಡಿಕೆ ಬೆಳೆಗಾರರ ಭವಿಷ್ಯದ ಕಥೆ ಏನು..? ಅಡಿಕೆ ಬೆಳೆಗಾರರಿಗೆ ಸರ್ಕಾರ ಎಷ್ಟು ಪರಿಹಾರ ಕೊಡುತ್ತದೆ…? ಎಲೆಚುಕ್ಕಿ ರೋಗದ ಹತ್ತಿರದಲ್ಲಿ ಇರುವ ಮಲೆನಾಡು ಕರಾವಳಿ ಪ್ರದೇಶದ ರೈತರು ಈ ಬಗ್ಗೆ ಖಂಡಿತವಾಗಿಯೂ ಚಿಂತೆ ಮತ್ತು ಚಿಂತನೆ ಮಾಡಬೇಕಾದ ಅತ್ಯವಶ್ಯಕತೆ ಇದೆ ಅಲ್ವಾ…?
ಅಡಿಕೆ ವಿಸ್ತರಣೆಯ ಕಾರಣದಿಂದಾಗಿ ಸಾಂಪ್ರದಾಯಿಕವಾಗಿ ಲಗಾಯ್ತಿನಿಂದಲೂ ಅಡಿಕೆಯೊಂದನ್ನೇ ನಂಬಿಕೊಂಡ ರೈತರಿಗೆ ಬೆಲೆ ಕುಸಿತದ ಪ್ರಹಾರ ಉಂಟಾಗಬಾರದು. ಜೊತೆಯಲ್ಲಿ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಅಡಿಕೆ ಉತ್ಪನ್ನ ಕ್ಕೆ ಪ್ರತ್ಯೇಕ ಮಾರುಕಟ್ಟೆ ಈ ಬಯಲು ಸೀಮೆಯ ಪ್ರದೇಶದ ಅಡಿಕೆ ವಿಸ್ತರಣೆ ಯ ಸಮಸ್ಯೆಗೆ ಪರಿಹಾರವಾಗಬಹುದು.
ಈ ಬಗ್ಗೆ ರಾಜ್ಯ ಕೇಂದ್ರ ದ ಪ್ರಭಾವಿ ಜನಪ್ರತಿನಿಧಿಗಳು, ರಾಜಕೀಯ ನಾಯಕರು, ಸಚಿವರಗಳ ಸಖ್ಯ ಇರುವವರು ಸಮಸ್ತ ಅಡಿಕೆ ಬೆಳೆಗಾರರ ಪರವಾಗಿ ಈ ಬಗ್ಗೆ ಗಮನ ಹರಿಸುವಂತೆ ಅಹವಾಲು ಸಲ್ಲಿಸಿ.ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…