ಅಡಿಕೆ ಉತ್ಪಾದನೆ ಕಡಿಮೆಯಾದರೂ ಮಾರುಕಟ್ಟೆ ನಿರೀಕ್ಷೆಯ ಮಟ್ಟಕ್ಕೆ ಏಕೆ ಏರಿಕೆಯಾಗುತ್ತಿಲ್ಲ? ಅಡಿಕೆ ಬೆಳೆಗಾರರಿಗೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ. ಹೀಗಿರುವಾಗ ಅಡಿಕೆ ಧಾರಣೆ, ಅಡಿಕೆ ಮಾರುಕಟ್ಟೆ ಸ್ಥಿರತೆ ಮಾಡುವವರು ಯಾರು..? . ಫಸಲು ಕಡಿಮೆಯಾದರೆ ಬೆಲೆ ಏರಬೇಕು ಎಂಬ ನಿರೀಕ್ಷೆ ಇರುತ್ತದೆ. ಆದರೆ ಮಾರುಕಟ್ಟೆ ಕೆಲವೊಮ್ಮೆ ಆ ರೀತಿಯಲ್ಲಿ ನಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ಸ್ಥಿರತೆ ತರಬೇಕಾದ್ದು ಯಾರು..?
ಫಸಲು ಕಡಿಮೆಯಾದರೆ ಬೆಲೆ ಏರಬೇಕು ಎಂಬ ನಿರೀಕ್ಷೆ ಇರುತ್ತದೆ. ಆದರೆ ಮಾರುಕಟ್ಟೆ ಕೆಲವೊಮ್ಮೆ ಆ ರೀತಿಯಲ್ಲಿ ನಡೆಯುವುದಿಲ್ಲ. ಇದಕ್ಕೆ ಕಾರಣಗಳು ಹಲವು..
ಅಡಿಕೆ ಬೆಲೆ ಫಸಲು ಕಡಿಮೆಯಾದಾಗ ಅಲ್ಲ, ಮಾರುಕಟ್ಟೆಯಲ್ಲಿ ಲಭ್ಯವಿರುವ ಒಟ್ಟು ಅಡಿಕೆ ನಿಜವಾದ ಬೇಡಿಕೆಗೆ ಕಡಿಮೆಯಾದಾಗ ಮಾತ್ರ ಏರುತ್ತದೆ.ಇತ್ತೀಚಿನ ವರ್ಷಗಳಲ್ಲಿ: ಫಸಲು ಇಳಿಕೆ, ಆದರೆ ಹಳೆಯ ಸ್ಟಾಕ್ + ಆಮದು + ನಿಯಂತ್ರಿತ ಖರೀದಿ ಹೆಚ್ಚಳ ಇದೆ. ಆದ್ದರಿಂದ ನಿರೀಕ್ಷಿತ ಬೆಲೆ ಏರಿಕೆ ಕಂಡುಬರುತ್ತಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಮಾರುಕಟ್ಟೆ ಸುಧಾರಣೆಗೆ ಏನು ಮಾಡಬೇಕು?
ಕ್ಯಾಂಪ್ಕೊ ಹಾಗೂ ಸಹಕಾರಿ ಸಂಸ್ಥೆಗಳ ಪಾತ್ರ ದೊಡ್ಡದು : ಕ್ಯಾಂಪ್ಕೋ (Central Arecanut and Cocoa Marketing and Processing Co-operative Limited) ಅನ್ನು ಅಡಿಕೆ ಮಾರುಕಟ್ಟೆಯ ಬೆನ್ನೆಲುಬು ಹಾಗೂ ಮಾರುಕಟ್ಟೆ ಸ್ಥಿರತೆ ಸಂಸ್ಥೆ ಎಂದು ಕರೆಯಲಾಗುತ್ತದೆ. ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ಭಾರತದ ಅಡಿಕೆ ಬೆಳೆಗಾರರಿಗೆ ಕ್ಯಾಂಪ್ಕೋ ನೀಡಿರುವ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಸದ್ಯ ಕ್ಯಾಂಪ್ಕೊ ಅಡಿಕೆ ಮಾರುಕಟ್ಟೆಯನ್ನು ಏಕೆ ಮತ್ತು ಹೇಗೆ ಸ್ಥಿರಗೊಳಿಸುತ್ತದೆ?.…… ಮುಂದೆ ಓದಿ……
ಬೆಲೆ ಕುಸಿತದ ಹಿನ್ನೆಲೆ ಮತ್ತು ಕ್ಯಾಂಪ್ಕೊ ಸ್ಥಾಪನೆಯ ಉದ್ದೇಶ : 1970 ರ ದಶಕದ ಆರಂಭದಲ್ಲಿ ಅಡಿಕೆ ದರಗಳು ತೀವ್ರವಾಗಿ ಕುಸಿದಾಗ, ಬೆಳೆಗಾರರು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಆ ಸಮಯದಲ್ಲಿ ಖಾಸಗಿ ವರ್ತಕರು ಮತ್ತು ಮಧ್ಯವರ್ತಿಗಳು ಕಡಿಮೆ ದರಕ್ಕೆ ಅಡಿಕೆ ಖರೀದಿ ಮಾಡಿ ಲಾಭ ಪಡೆಯುತ್ತಿದ್ದರು. ಈ ಅನ್ಯಾಯವನ್ನು ತಡೆಗಟ್ಟಲು ಮತ್ತು ಬೆಳೆಗಾರರ ಹಿತವನ್ನು ಕಾಪಾಡಲು 1973ರಲ್ಲಿ ವಾರಣಾಸಿ ಸುಬ್ರಾಯ ಭಟ್ಟರಿಂದ ಕ್ಯಾಂಪ್ಕೊ ಸ್ಥಾಪನೆಯಾಯಿತು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ಎಸ್‌ಕೆಸಿಎಂಎಸ್ ಮೊದಲಾದ ಸಂಸ್ಥೆಗಳು ಅಂದು ನೆರವಾದವು. ಇವರೆಲ್ಲಾ ಮೂಲ ಉದ್ದೇಶವೇ ಅಡಿಕೆ ಬೆಳೆಗಾರರಿಗೆ ಕನಿಷ್ಠ ನ್ಯಾಯಸಮ್ಮತ ದರ ಒದಗಿಸುವುದು. ಇದಕ್ಕಾಗಿ ಸುಬ್ರಾಯ ಭಟ್ಟರು ಹಾಗೂ ಅವರ ಜೊತೆಗಾರರು ಹಲವು ಕಾಲ ಓಡಾಟ ಮಾಡಿದ್ದರು.
ಬೆಲೆ ಏರಿಳಿತಗಳನ್ನು ನಿಯಂತ್ರಿಸುವ ಪ್ರಮುಖ ಪಾತ್ರ : ಅಡಿಕೆ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಬೇಡಿಕೆ–ಸರಬರಾಜಿನ ಆಧಾರದಲ್ಲಿ ಅತಿಯಾಗಿ ಏರುಪೇರಾಗುತ್ತದೆ. ಕೊಯ್ಲು ಕಾಲದಲ್ಲಿ (ನವೆಂಬರ್–ಡಿಸೆಂಬರ್) ಅಡಿಕೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಾಗ ದರ ಕುಸಿಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕ್ಯಾಂಪ್ಕೊ ಮಾರುಕಟ್ಟೆಗೆ ಪ್ರವೇಶಿಸಿ ಅಡಿಕೆ ಖರೀದಿ ಹೆಚ್ಚಿಸುವ ಮೂಲಕ ದರ ಕುಸಿತವನ್ನು ತಡೆಗಟ್ಟುತ್ತದೆ. ದರಗಳು ಅತಿಯಾಗಿ ಏರಿದಾಗ, ಸಂಗ್ರಹಿತ ಅಡಿಕೆಯನ್ನು ಹಂತ ಹಂತವಾಗಿ ಮಾರಾಟ ಮಾಡಿ ಮಾರುಕಟ್ಟೆಗೆ ಸಮತೋಲನ ತರುತ್ತದೆ. ಈ ಕ್ರಮದಿಂದ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ತಪ್ಪುತ್ತದೆ.
ಮಧ್ಯವರ್ತಿಗಳ ಶೋಷಣೆಯಿಂದ ಬೆಳೆಗಾರರ ರಕ್ಷಣೆ: ಕ್ಯಾಂಪ್ಕೊ ಸ್ಥಾಪನೆಗೆ ಮೊದಲು ಬಹುತೇಕ ಬೆಳೆಗಾರರು ಸ್ಥಳೀಯ ದಲ್ಲಾಳಿಗಳು ಮತ್ತು ಖಾಸಗಿ ವ್ಯಾಪಾರಿಗಳ ಮೇಲೆ ಅವಲಂಬಿತರಾಗಿದ್ದರು. ಇವರು ಅಡಿಕೆಯ ಗುಣಮಟ್ಟದ ನೆಪದಲ್ಲಿ ಕಡಿಮೆ ದರ ನಿಗದಿ ಮಾಡುತ್ತಿದ್ದರು. ಕ್ಯಾಂಪ್ಕೊ ನೇರ ಖರೀದಿ ವ್ಯವಸ್ಥೆಯಿಂದ ಮಧ್ಯವರ್ತಿಗಳ ಹಿಡಿತ ದುರ್ಬಲವಾಯಿತು. ಬೆಳೆಗಾರರಿಗೆ ದರದಲ್ಲಿ ಪಾರದರ್ಶಕತೆ ದೊರಕಿತು.
ವ್ಯಾಪಕ ಖರೀದಿ ಮತ್ತು ಮಾರಾಟ ಜಾಲ : ಕ್ಯಾಂಪ್ಕೊ ಕರ್ನಾಟಕ, ಕೇರಳ ಮತ್ತು ದೇಶದ ವಿವಿಧ ಭಾಗಗಳಲ್ಲಿ ಖರೀದಿ ಕೇಂದ್ರಗಳು, ಮಾರಾಟ ಡಿಪೋಗಳು, ಗೋದಾಮುಗಳನ್ನು ನಿರ್ವಹಿಸುತ್ತದೆ. ಇದರಿಂದ ಅಡಿಕೆ ಒಂದು ಮಾರುಕಟ್ಟೆಗೆ ಮಾತ್ರ ಸೀಮಿತವಾಗದೆ ದೇಶಾದ್ಯಂತ ಸಮಾನವಾಗಿ ಹರಡುತ್ತದೆ, ಇದು ದರ ಸ್ಥಿರತೆಗೆ ಮುಖ್ಯ ಕಾರಣ.
ಸಂಗ್ರಹಣೆ, ಪ್ರೊಸೆಸಿಂಗ್ ಮತ್ತು ಮೌಲ್ಯವರ್ಧನೆ : ಕ್ಯಾಂಪ್ಕೊ ಕೇವಲ ಖರೀದಿ–ಮಾರಾಟ ಮಾತ್ರವಲ್ಲದೇ, ಸರಿಯಾದ ಸಂಗ್ರಹಣೆ, ಗ್ರೇಡಿಂಗ್, ಪ್ರೊಸೆಸಿಂಗ್ ಮಾಡುವ ಮೂಲಕ ಗುಣಮಟ್ಟ ಕಾಪಾಡುತ್ತದೆ. ಇದರಿಂದ ಅಡಿಕೆ ದೀರ್ಘಕಾಲ ಮಾರಾಟಕ್ಕೆ ಯೋಗ್ಯವಾಗಿದ್ದು, ತಕ್ಷಣದ ಒತ್ತಡದ ಮಾರಾಟದಿಂದ ದರ ಕುಸಿಯುವುದನ್ನು ತಡೆಯುತ್ತದೆ.…… ಮುಂದೆ ಓದಿ……
ಸಹಕಾರ ತತ್ವ ಮತ್ತು ಸಾಮೂಹಿಕ ಶಕ್ತಿ : ಕ್ಯಾಂಪ್ಕೊ ಒಂದು ಸಹಕಾರ ಸಂಘವಾಗಿರುವುದರಿಂದ, ಅದರ ಮಾಲೀಕರು ಬೆಳೆಗಾರರು. ಬೆಳೆಗಾರರು ಸದಸ್ಯರಾಗಿದ್ದು ಲಾಭವೂ ಅವರಿಗೇ ಮರಳುತ್ತದೆ. ಒಟ್ಟುಗೂಡಿದ ಶಕ್ತಿಯಿಂದ ಸರ್ಕಾರದ ಮುಂದೆ ಮತ್ತು ಮಾರುಕಟ್ಟೆಯಲ್ಲಿ ಬೆಳೆಗಾರರ ಧ್ವನಿ ಬಲವಾಗುತ್ತದೆ.
ದರ ಕುಸಿತದ ಸಂದರ್ಭದಲ್ಲಿ ಬೆಳೆಗಾರರಿಗೆ ರಕ್ಷಣೆ ಆಗಿ ನಿಲ್ಲುವುದರಿಂದ, ಮಧ್ಯವರ್ತಿಗಳ ಶೋಷಣೆಯನ್ನು ಕಡಿಮೆ ಮಾಡುತ್ತದೆ. ಸಂಗ್ರಹಣೆ, ಪ್ರೊಸೆಸಿಂಗ್ ಮತ್ತು ಮೌಲ್ಯವರ್ಧನೆಯಿಂದ, ಸಹಕಾರ ತತ್ವದ ಮೂಲಕ ಬೆಳೆಗಾರರಿಗೆ ವಿಶ್ವಾಸ ನೀಡುವುದರಿಂದ ಕ್ಯಾಂಪ್ಕೊ ಅಡಿಕೆ ಮಾರುಕಟ್ಟೆಯ ಸ್ಥಿರೀಕಾರಕವಾಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ಇಲ್ಲದಿದ್ದರೆ ದರಗಳ ಅಸ್ಥಿರತೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂಬುದು ಬಹುತೇಕ ಬೆಳೆಗಾರರ ಅನುಭವ. ಆದರೆ ಈಚೆಗೆ ಕ್ಯಾಂಪ್ಕೊ ದರ ಇಳಿಕೆ ಮಾಡುವುದು, ಇದು ಮೊದಲೇ ವ್ಯಾಪಾರಿಗಳಿಗೂ ತಿಳಿಯುವುದು ಸಹಕಾರಿ ತತ್ತ್ವ ಹಾಗೂ ಬೆಳೆಗಾರರ ನಡುವೆ ಚರ್ಚೆಗೂ ಕಾರಣವಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…
ಪ್ರಕೃತಿಯಲ್ಲಿ ಇರುವ ಡಿಎನ್ಎ, ಪ್ರೋಟೀನ್ಗಳಂತೆ ಪ್ಲಾಸ್ಟಿಕ್ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…
2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…
ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…
ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…
ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…