ಮನುಷ್ಯರಾದ ನಾವು ದೇವತಾರಾಧನೆಗೆ ಎಷ್ಟು ಪ್ರಾಮುಖ್ಯ ನೀಡುತ್ತೇವೋ ಅಷ್ಟೇ ಪ್ರಾಮುಖ್ಯವನ್ನು ಪಿತೃದೇವತೆಗಳಿಗೆ ನೀಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ನಮ್ಮ ಸನಾತನ ಧರ್ಮದಲ್ಲಿ ಮೃತರಿಗೆ ಪೂರ್ವಿಕರ ಸಂಸ್ಕಾರ, ತರ್ಪಣ ಬಿಡುವುದು ಸಂಪ್ರದಾಯ.
ಮನೆಯಲ್ಲಿ ಯಾರಾದರೂ ಸತ್ತಾಗ ಕೆಲವು ಕಾರಣಗಳಿಂದ ಪಿತೃಕರ್ಮಗಳನ್ನು ಮಾಡಲಾಗದೇ ಇದ್ದರೆ, ಕೆಲವೊಮ್ಮೆ ಅವಘಡಗಳಲ್ಲಿ ಸತ್ತಾಗ ಅವರು ಯಾವಾಗ ಸತ್ತರು ಎಂಬ ಸಮಯ, ಘಳಿಗೆ ತಿಳಿಯದ ಸಂದರ್ಭದಲ್ಲಿ ಭಾದ್ರಪದ ಪಿತೃಪಕ್ಷ ಮಾಸದ ಸಮಯದಲ್ಲಿ ಕಾರ್ಯಗಳನ್ನು ಮಾಡುವುದು ಯೋಗ್ಯ ಎಂದು ಹೇಳುತ್ತವೆ. ಪ್ರತಿ ತಿಂಗಳ ಅಮಾವಾಸ್ಯೆಯಂದು ಪಿತೃತರ್ಪಣ ಅರ್ಪಿಸಬೇಕು ಎನ್ನುವ ಮಾತು ಸಹ ಇದೆ. ಪ್ರತಿ ತಿಂಗಳು ಮಾಡಲು ಸಾಧ್ಯವಾಗದೇ ಇದ್ದವರು ಮಹಾಲಯ ಮಾಸದಂದು ಮಹಾಲಯ ಅಮಾವಾಸ್ಯೆಯಂದು ಗತಿಸಿದ ಹಿರಿಯರಿಗೆ ಅಥವಾ ಪಿತೃಗಳಿಗೆ ತರ್ಪಣ ಕಾರ್ಯ ಮಾಡಿದರೆ ವರ್ಷಪೂರ್ತಿ ಫಲ ಸಿಕ್ಕಂತೆ ಎನ್ನುತ್ತಾರೆ.
ಮಹಾಲಯವನ್ನು ಏಕೆ ಆಚರಿಸಬೇಕು ? : ಆಷಾಢ ಮಾಸದ ಹದಿನೈದು ದಿನಗಳಿಂದ ಆರಂಭಿಸಿ, ಭಾದ್ರಪದ ಕೃಷ್ಣ ಪಕ್ಷಕ್ಕೆ ಹಿಂತಿರುಗುವವರೆಗೆ ನಮ್ಮ ಪಿತೃದೇವತೆಗಳು ಹಲವು ತೊಂದರೆಗಳನ್ನು ಎದರಿಸುತ್ತಾರೆ. ತುಲಾ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಸೂರ್ಯನು ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದು ಪುರಾಣಶಾಸ್ತ್ರಗಳು ಹೇಳುತ್ತವೆ. ಆ ಸಮಯದಲ್ಲಿ ಪಿತೃಗಳು ಆಶೀರ್ವಾದವನ್ನು ಬಯಸಿ ಭೂಮಿಯ ಮೇಲಿನ ತಮ್ಮ ಮನೆಗಳಲ್ಲಿ ಬರುತ್ತಾರೆ ಎನ್ನುವ ಪ್ರತೀತಿ ಇದೆ.
ಆ ಕಾರಣದಿಂದಲೇ ಮರಣಾನಂತರ ಮಾಡುವ ಈ ಆಚರಣೆಗಳು ಎಷ್ಟು ಪ್ರಾಮುಖ್ಯವನ್ನು ಪಡೆದಿವೆ. ನೂರು ಯಜ್ಞಗಳನ್ನು ಮಾಡುವುದಕ್ಕಿಂತಲೂ ನಮ್ಮ ಪಿತೃದೇವತೆಗಳ ತರ್ಪಣ ಬಿಡುವುದು ಮುಖ್ಯವೆಂದು ಹೇಳಲಾಗುತ್ತದೆ. ಈ ವಿಷಯದಲ್ಲಿ ನಿರಾಸಕ್ತಿ ಬೇಡ.
ದೇವತೆಗಳ ಕಾಲವಾದ್ದರಿಂದ ಉತ್ತರಾಯಣವು ಅತ್ಯುತ್ತಮ ಕಾಲವೆಂದೂ, ಪಿತೃಕಾಲವಾದ್ದರಿಂದ ದಕ್ಷಿಣಾಯಣವು ಅಶುಭ ಕಾಲವೆಂದೂ ನಮ್ಮ ಪೂರ್ವಜರು ನಂಬಿದ್ದಾರೆ. ಮಹಾಲಯ ಎಂದರೆ ಭಾದ್ರಪದ ಮಾಸ ಕೃಷ್ಣ ಪಕ್ಷದ ಪಾಡ್ಯಮಿಯಿಂದ ಆರಂಭವಾಗಿ ಅಮಾವಾಸ್ಯೆಯಂದು ಮುಗಿಯುವ ಹದಿನೈದು ದಿನಗಳು. ಇದನ್ನು ಪಿತೃಪಕ್ಷ ಮತ್ತು ಮಹಾಲಯ ಎಂದು ಕರೆಯಲಾಗುತ್ತದೆ. ಇದರಲ್ಲಿ ಅತ್ಯಂತ ಪ್ರಮುಖವಾದ ತಿಥಿ ತ್ರಯೋದಶಿ. ಅಂದರೆ ಭಾದ್ರಪದ ಕೃಷ್ಣ ತ್ರಯೋದಶಿ ಮಾಘ ನಕ್ಷತ್ರದೊಂದಿಗೆ ಸೇರಿದಾಗ ಶ್ರಾದ್ಧದಿಂದ ಕೂಡಿದ ಯಾವುದೇ ವಸ್ತು ಪಿತೃಗಳಿಗೆ ಚಿರತೃಪ್ತಿ ನೀಡುತ್ತದೆ.
ಈ ವಿಶೇಷ ಮಹಾಲಯ ಪಕ್ಷದಲ್ಲಿ, ಎಲ್ಲಾ ಜಾತಿಗಳ ಜನರು ತಮ್ಮ ಶಕ್ತಿಗೆ ಅನುಗುಣವಾಗಿ ಹದಿನೈದು ದಿನಗಳ ಕಾಲ ತಿಥಿಯನ್ನು ಆಚರಿಸುತ್ತಾರೆ. ಶಕ್ತಿ ಇಲ್ಲದವರು ತಮ್ಮ ಹಿರಿಯರ ಮರಣದ ತಿಥಿಯಂದು ತರ್ಪಣ ಶ್ರಾದ್ಧವನ್ನು ಮಾಡುತ್ತಾರೆ. ಸತ್ತವರ ತಿಥಿ ನೆನಪಿಲ್ಲದೇ ಇದ್ದರೆ, ಮಹಾಲಯ ಅಮಾವಾಸ್ಯೆಯನ್ನು ನಿರ್ಧರಿಸಬಹುದು.
(ಅಂತರ್ಜಾಲ ಮಾಹಿತಿ)