ಚೀನಾವು ಕಳೆದ ಕೆಲವು ಸಮಯಗಳಿಂದ ಎಳೆ ಅಡಿಕೆಯನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದೆ. ವಿಯೆಟ್ನಾಂನಂತಹ ಪ್ರದೇಶದಲ್ಲೂ ಈಗ ಅಡಿಕೆ ಜನಪ್ರಿಯವಾಗಲು ತೊಡಗಿದೆ. ಅಡಿಕೆ ಎನ್ನುವುದು ಚಿನ್ನದ ಬೆಳೆ ಎಂಬ ಮಟ್ಟಿಗೆ ಬರುತ್ತಿದೆ. ಅಷ್ಟಕ್ಕೂ ಚೀನಾ ಏಕೆ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ ಎನ್ನುವುದು ಬಹಳ ಕುತೂಹಲದ ವಿಷಯವಾಗಿದೆ.
ವಿಯೆಟ್ನಾಂನಲ್ಲಿ ಅಡಿಕೆ ಧಾರಣೆ ಏರಿಕೆಯಾಗಿದೆ. ಅಲ್ಲಿನ ವ್ಯಾಪಾರಿಗಳ ಪ್ರಕಾರ, ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಅಡಿಕೆ ಬೆಲೆ ತೀವ್ರವಾಗಿ ಹೆಚ್ಚಾಗಿದೆ. ಅಡಿಕೆಗಳನ್ನು ಚೀನಾಕ್ಕೆ ರಫ್ತು ಮಾಡುವ ಕಾರಣದಿಂದಲೇ ಅಡಿಕೆ ಧಾರಣೆ ಏರಿಕೆಯಾಗಿದೆ. ಆದರೆ ಚೀನಾವು ಆ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವುದು ಏಕೆ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಚೀನಾದಲ್ಲಿಅಡಿಕೆಯ ಉತ್ಪನ್ನಗಳು ಹೆಚ್ಚಾಗಿ ಈಗ ತಯಾರಿಕೆ ಆರಂಭವಾಗಿದೆ. ಆದರೆ ಅಡಿಕೆ ಬೆಳೆಯುವ ಚೀನಾದಲ್ಲಿ ಕೂಡಾ ಈಗ ಅಡಿಕೆ ಹಲವು ಕಾರಣಗಳಿಂದ ಇಳುವರಿ ನಷ್ಟ ಹಾಗೂ ರೋಗಗಳಿಗೆ ತುತ್ತಾಗಿದೆ.
ಚೀನಾದಲ್ಲಿ, ಸುಮಾರು 95% ಅಡಿಕೆ ಉತ್ಪಾದನೆಯನ್ನು ಹೈನಾನ್ ದ್ವೀಪದಲ್ಲಿ ಬೆಳೆಯಲಾಗುತ್ತದೆ. 2021 ರಲ್ಲಿ, ಹೈನಾನ್‌ನ ಅಡಿಕೆ ಬೆಳೆಯುವ ಪ್ರದೇಶವು 2,5 ಮಿಲಿಯನ್ ಎಕರೆಗಳಷ್ಟಿತ್ತು, ಇದು 276.200 ಟನ್‌ಗಳ ಉತ್ಪಾದನೆಗೆ ಕಾರಣವಾಗಿತ್ತು. ಹೈನಾನ್‌ನಲ್ಲಿನ ಅಡಿಕೆಗಳನ್ನು ವಾನ್ನಿಂಗ್ ಸಿಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಅಲ್ಲಿ ಜನಸಂಖ್ಯೆಯ ಅರ್ಧದಷ್ಟು ಜನರು ಅಡಿಕೆ ಬೆಳೆಗಾರರು ಇದ್ದಾರೆ.ಇತ್ತೀಚಿನ ವರ್ಷಗಳಲ್ಲಿ, ಹಳದಿ ಎಲೆ ರೋಗದಿಂದ ಅಡಿಕೆ ಇಳುವರಿ ಕಡಿಮೆಯಾಗಿದೆ. ಸ್ಥಳೀಯ ಅಡಿಕೆ ಉತ್ಪಾದನೆಯು ತೀವ್ರವಾಗಿ ಕುಸಿದಿದೆ. ಈ ಬಾರಿ ಹೈನಾನ್ ದ್ವೀಪವನ್ನು ಅಪ್ಪಳಿಸಿದ ಚಂಡಮಾರುತ ಕಾರಣದಿಂದಲೂ ಅಡಿಕೆ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.
ಆದರೆ ಅಡಿಕೆಯನ್ನು ಉಪಯೋಗಿಸಿ ಹಲವು ಉತ್ಪನ್ನಗಳಿಗೆ ಈಗ ಅಡಿಕೆಯ ಕೊರತೆ ಇದೆ. ಈ ಕಾರಣದಿಂದ ಅಡಿಕೆ ಧಾರಣೆ ಏರಿಕೆಯಾಗಿದೆ. ಚೀನಾದಲ್ಲಿ, ಅಡಿಕೆಯನ್ನು ಜೀರ್ಣಕಾರಿ, ಚೂಯಿಂಗ್ ಗಮ್, ಎನರ್ಜಿ ಡ್ರಿಂಕ್ಸ್, ತಿಂಡಿಗಳು… ಸೇರಿದಂತೆ ಕೆಲವು ಉತ್ಪನ್ನಗಳ ತಯಾರಿಕೆ ಬಳಕೆ ಮಾಡಲಾಗುತ್ತಿದೆ. ಅದೆಲ್ಲವೂ ಈಗ ಬೇಡಿಕೆಯ ವಸ್ತುವಾಗಿದೆ. ಹೀಗಾಗಿ ಚೀನಾ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಹೆಚ್ಚಾಗಿ ಬಳಕೆಯನ್ನೂ ಮಾಡುತ್ತಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…