The Rural Mirror ಕಾಳಜಿ

ಆನೆ ದಾಳಿಗೆ ಬಲಿಯಾಗುತ್ತಲೇ ಇದ್ದಾರೆ ಗ್ರಾಮೀಣ ಜನರು | ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ ಕೃಷಿಕರು.. | ಆಡಳಿತ , ಜನಪ್ರತಿನಿಧಿಗಳಿಗೆ ಏಕೆ ಅರ್ಥವಾಗುತ್ತಿಲ್ಲ….!?

Share

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಕಾಡಾನೆ ಕಾಟ ಹೆಚ್ಚಾಗಿದೆ. ಸೋಮವಾರ ಮುಂಜಾನೆ ಇಬ್ಬರು ಮೃತಪಟ್ಟರೆ, ಸುಳ್ಯ ತಾಲೂಕಿನಲ್ಲಿ ಆನೆ ದಾಳಿಗೆ ಇನ್ನೂ ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡವರು ಇದ್ದಾರೆ. ಕೃಷಿ ನಾಶ ಹೊಂದಿದವರು ಇದ್ದಾರೆ. ಆದರೆ ಇದುವರೆಗೂ ಆನೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಯಶಸ್ಸಾಗಿಲ್ಲ.( ಈ ವರದಿಯ ಕೆಳಭಾಗದಲ್ಲಿ ಆನೆ ದಾಳಿಗೆ ಸಂಬಂಧಿಸಿದ ಇತರ ಲಿಂಕ್‌ ಇವೆ ಗಮನಿಸಿ…)

Advertisement
Advertisement

ಕಾಡಾನೆ ದಾಳಿಗೆ ಕಡಬ ತಾಲೂಕಿನ ರೆಂಜಿಲಾಡಿ ಬಳಿ ಇಬ್ಬರು ಬಲಿಯಾಗಿದ್ದಾರೆ. ಕಳೆದ ಕೆಲವು ಸಮಯದ ಹಿಂದೆ ಕೊಲ್ಲಮೊಗ್ರದಲ್ಲಿ ಕಾಡಾನೆ ದಾಳಿಗೆ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದರು. ಅದಕ್ಕೂ ಕೆಲವು ಸಮಯದ ಹಿಂದೆ ಕೊಲ್ಲಮೊಗ್ರದ ಬಳಿ ಕುಡಿಯುವ ನೀರಿನ ಪೈಪ್‌ ದುರಸ್ತಿಗೆ ಹೋದಾಗ ಕೃಷಿಕರೊಬ್ಬರು ಆನೆ ದಾಳಿಗೆ ತುತ್ತಾದರು. ಅದಕ್ಕೂ ಹಿಂದೆ ಕೃಷಿಕರೊಬ್ಬರು ತೋಟಕ್ಕೆ ನೀರುಣಿಸುವ ಸಂದರ್ಭ ಆನೆ ದಾಳಿಗೆ ತುತ್ತಾದರು…..! ಹೀಗೇ ಹಲವು ಪ್ರಕರಣಗಳು ಸುಳ್ಯ ತಾಲೂಕಿನಲ್ಲಿ ನಡೆದಿದೆ. ಆದರೆ ಆಡಳಿತವು ಇದುವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಮೃತಪಟ್ಟ ಕುಟುಂಬದ ಮನೆಗಳಿಗೆ ತೆರಳಿ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ಬೇರೇನೂ ಆಗಿಲ್ಲ ಎನ್ನುವುದು  ಜನರ ಆರೋಪ. ಸೋಮವಾರ ಕಡಬದಲ್ಲೂ ಅದೇ ಆರೋಪ ವ್ಯಕ್ತವಾಗಿದೆ.

ಸುಳ್ಯ ತಾಲೂಕಿನ ಮಂಡೆಕೋಲು ಬಳಿಯಲ್ಲಿ ಕಾಡಾನೆ ಹಾವಳಿ ಇದ್ದಾಗ ಅಲ್ಲಿನ ಶಾಲಾ ಬಾಲಕಿಯೊಬ್ಬಳು ಪ್ರಧಾನಿಗಳ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಅದಕ್ಕೆ ಹಿಂಬರಹವೂ ಬಂದು ಈ ಬಗ್ಗೆ ಕ್ರಮ ಹಾಗೂ ಪರಿಹಾರ ಮಾರ್ಗಗಳನ್ನು ಕೈಗೊಳ್ಳಲು ಸೂಚಿಸಿದ್ದರು. ಆದರೆ ಆ ಪತ್ರದ ಬಳಿಕ ಯಾವ ಕ್ರಮಗಳೂ ನಡೆದಿರಲಿಲ್ಲ.  ಅದರ ಬದಲಾಗಿ  “ಪ್ರಧಾನಿಗಳಿಗೆ ಪತ್ರ ಬರೆದರೆ ಆಗುವುದಿಲ್ಲ…” ಎಂದು ಸ್ಥಳೀಯ ಜನಪ್ರತಿನಿಧಿಗಳು ಉತ್ತರಿಸಿದ್ದರು….!. ಈಚೆಗೆ ಕಾಡಾನೆ ಹಾವಳಿ ತಡೆಗೆ ಕಾಂಕ್ರೀಟ್‌ ಬೇಲಿ, ಜೇನುಪೆಟ್ಟಿಗೆ ಪ್ರಯೋಗ, ಸೋಲಾರ್‌ ಬೇಲಿ, ಆನೆ ಕಂದಕ.. ಹೀಗೇ ಹಲವು ಪ್ರಯತ್ನ ಇಲಾಖೆ ಕಡೆಯಿಂದ ನಡೆಯುತ್ತದೆ. ಆದರೆ ಜನಪ್ರತಿನಿಧಿಗಳು ಇದರ ಫಾಲೋಅಪ್‌ ಆಗಲಿ, ಈ ಬಗ್ಗೆ ಮುಂದಿನ ಹೆಜ್ಜೆಯನ್ನಾಗಲಿ ಮಾಡಿದ ಉದಾಹರಣೆ ಇಲ್ಲ ಎನ್ನುವುದು  ಜನರ ಆರೋಪ.

ಕಾಡಾನೆ ದಾಳಿಯಿಂದ ಕೃಷಿಕರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಸುಳ್ಯ ತಾಲೂಕಿನಲ್ಲಿ ಕೃಷಿ ತೋಟಗಳಿಗೆ ದಾಳಿ ಮಾಡುವುದೂ ಹೆಚ್ಚಾಗಿದೆ. ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ದಂಡು ಇದೀಗ ಹಗಲಲ್ಲೇ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದು, ಭೀತಿ ತಂದೊಡ್ಡಿದೆ. ಸುಳ್ಯ ತಾಲೂಕಿನ ಸಂಪಾಜೆ, ಆಲೆಟ್ಟಿ, ಮಂಡೆಕೋಲು, ಅಜ್ಜಾವರ, ಕೊಲ್ಲಮೊಗ್ರು, ಹರಿಹರ ಪಲ್ಲತಡ್ಕ, ಅರಂತೋಡು, ತೊಡಿಕಾನ, ಕಡಬ ಮೊದಲಾದ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ಇದೆ. ಬೆಳ್ತಂಗಡಿ ತಾಲೂಕಿನ ನೆರಿಯ, ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಶಿಶಿಲ, ನಿಡ್ಲೆ, ಶಿಬಾಜೆ, ಹತ್ಯಡ್ಕ ಗ್ರಾಮಗಳಲ್ಲಿ ಆನೆ ಕಾಟ ಇದೆ.

ಜಿಲ್ಲೆಯ ಅಲ್ಲಲ್ಲಿ ಕಾಡಾನೆ ಹಾವಳಿ ಇದ್ದರೂ ಇಲಾಖೆ ಸ್ಪಂದಿಸುತ್ತಿಲ್ಲ ಎಂಬುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇಲಾಖೆಗಳು ಅವರ ಮಿತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರ ಜತೆಗೆ ಕಾಡಾನೆ ಓಡಿಸಲೂ ಆಗಮಿಸುತ್ತಾರೆ. ಆದರೆ ಅವರಿಗೆ ಬೇಕಾದ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಬೇಕಾದ ಸರ್ಕಾರ, ಜನಪ್ರತಿನಿಧಿಗಳು ಇಷ್ಟು ಸಮಯವಾದರೂ ಎಚ್ಚೆತ್ತಿಲ್ಲ…!.  ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ಆಡಳಿತ ವ್ಯವಸ್ಥೆ ಅನುದಾನದ ಕೊರತೆಗಳು ಕಾಡಾನೆ ಮಾತ್ರವಲ್ಲ ಅನೇಕ ಜನಪರವಾದ ಕೆಲಸ ನಿರ್ವಹಿಸಲು ಸಮಸ್ಯೆಯಾಗಿದೆ. ಗ್ರಾಮೀಣ ಭಾಗದ ಸಮಸ್ಯೆಗಳ ನಿವಾರಿಸಿಲು ಕಷ್ಟವಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಏಕೆ ಈ ಸಮಸ್ಯೆಗೆ ಪರಿಹಾರದ ದೊರಕಿಸಲು, ಜನರ ಜೊತೆ ಇದುವರೆಗೂ ಸಂವಾದ ನಡೆಸಲು ಆಗಿಲ್ಲ ಎನ್ನುವುದೇ ಪ್ರಶ್ನೆಯಾಗಿದೆ.

Advertisement

ಕಲ್ಮಕಾರು : ಆನೆ ದಾಳಿಗೊಳಗಾದ ಕೃಷಿಕ ನಿಧನ

ಕೃಷಿಗೆ ಆನೆ ಹಾವಳಿ | ಕೃಷಿಕರ ಮೇಲೂ ದಾಳಿ | ಪರಿಹಾರ ಹೇಗೆ ? ಏನು ? | ಕೃಷಿಕರ ಸಲಹೆ ಏನು ? |

ಬಾಳುಗೋಡು | ತೋಟಕ್ಕೆ ಆನೆ ದಾಳಿ, ಅಪಾರ ನಷ್ಟ |

Advertisement

ಗಡಿ ಗ್ರಾಮದಲ್ಲಿ ತೀವ್ರಗೊಂಡ ಆನೆ ಹಾವಳಿ – ಆತಂಕದಲ್ಲಿ ಜನತೆ

ಆನೆ ಹಾವಳಿ ಕುರಿತು ಚರ್ಚಿಸಲು ಸಭೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು…

2 minutes ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ…

1 hour ago

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ

ಹೆಚ್ಚಿನ ಮಾಹಿತಿಗಾಗಿರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

4 hours ago

ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ

ಮಂಗಳೂರು ತಾಲೂಕಿನ ಎಲ್ಲಾ ಗ್ರಾಮಗಳು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಹವಾಮಾನ…

11 hours ago

ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ

ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡ ರೈತರ ತಾಲೂಕಿನಲ್ಲಿ ವಿಮೆ ಮಾಡಿಸಲಾಗಿರುವ…

11 hours ago

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |

ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಪ್ರಮುಖವಾಗಿ ಕುಮುಟಾ ಮತ್ತು ಅಂಕೋಲಾದಲ್ಲಿ…

11 hours ago