Advertisement
The Rural Mirror ವಾರದ ವಿಶೇಷ

ಕಾಡ್ಗಿಚ್ಚು ಕೇವಲ ಜನರಿಗೆ ಅಪಾಯವಲ್ಲ | ಹವಾಮಾನ ಬದಲಾವಣೆಯ ಮೇಲೂ ಪರಿಣಾಮ |

Share

ಬಿಸಿಲಿನ ತಾಪ ಏರಿಕೆ ಆರಂಭವಾಗಿದೆ. ಎಲ್ಲೆಲ್ಲೆಲ್ಲೂ ಎಚ್ಚರ ಎಚ್ಚರ.. ಅದರಲ್ಲೂ ಪಶ್ಚಿಮ ಘಟ್ಟದಲ್ಲಿ ಈಗಂತೂ ಅತಿಯಾದ ಎಚ್ಚರಿಕೆ ಅಗತ್ಯವಿದೆ. ಒಂದು ಕಿಡಿ ಇಡೀ ಕಾಡನ್ನು ಸುಟ್ಟು ಬಿಡುತ್ತದೆ. ಪ್ರಪಂಚದ ಹಲವು ಕಡೆ ವಿಪರೀತ ತಾಪಮಾನದ ನಡುವೆ ಕಾಡ್ಚಿಚ್ಚು ಕೂಡಾ ಬಹುದೊಡ್ಡ ಸಮಸ್ಯೆಯಾಗಿದೆ. ಈಗಲೂ ಎಚ್ಚರಿಕೆ ಅಗತ್ಯವಾಗಿದೆ. ಕಾಡ್ಗಿಚ್ಚು ಮೂಲಕ ಕಾಡು ನಾಶ, ಮನುಷ್ಯರ ಮೇಲೆ ಪರಿಣಾಮ ಮಾತ್ರವಲ್ಲ , ಹವಾಮಾನ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂದು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಮಳೆ ವಿಳಂಬವಾಗುವುದಕ್ಕೂ ಕಾರಣವಾಗಿದೆ.ಕಾಡ್ಗಿಚ್ಚಿನ ಹೊಗೆ ದೇಶದ ಹವಾಮಾನ ಬದಲಾವಣೆಯ ಮೇಲೆ ಅತ್ಯಂತ ದುಬಾರಿ ಪರಿಣಾಮವಾಗಿದೆ. ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನ ವರದಿಯೂ ಇದೇ ಅಂಶವನ್ನು ಹೇಳಿದೆ.

ಕಳೆದ ವರ್ಷ ತಾಪಮಾನ ಹೆಚ್ಚಾಗುತ್ತಿದ್ದಂತೆಯೇ ಪಶ್ಚಿಮ ಘಟ್ಟದ ವಿವಿಧ ಕಡೆಗಳಲ್ಲಿ ಕಾಡುಗಳು ಹೊತ್ತಿ ಉರಿಯಿತು. ಅರಣ್ಯ ಇಲಾಖೆ ಪ್ರಯತ್ನಪಟ್ಟಿತು. ಸರ್ಕಾರಗಳು ಬಹುದೊಡ್ಡವಾದ ಯಾವ ಪ್ರಯತ್ನವೂ ಮಾಡಲಿಲ್ಲ. ಈ ಬಾರಿಯೂ ತಾಪಮಾನ ಏರಿಕೆಯಾಗುತ್ತಿದೆ , ಎಚ್ಚರಿಕೆ ವಹಿಸಬೇಕಾದ್ದು ಸ್ಥಳೀಯ ಜನರು. ಏಕೆಂದರೆ ಅಧ್ಯಯನಗಳು ಕೂಡಾ ಹೇಳಿರುವ ವರದಿ, ಇದರ ಪರಿಣಾಮ ಹವಾಮಾನ ಬದಲಾವಣೆಯ ಮೇಲೆ ನೇರ ಪರಿಣಾಮ. ಇಂದೂ ಕಾಣುತ್ತಿರುವುದೂ ಅದೇ. ತಾಪಮಾನ ಏರಿಕೆಯಾದರೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮಳೆಯಾಗುತ್ತಿಲ್ಲ…!. ಇದಕ್ಕಾಗಿ ಅತೀ ಎಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ. ಪ್ರತಿಯೊಬ್ಬರೂ ಎಚ್ಚರವಹಿಸಬೇಕು.

ಕಾಡ್ಗಿಚ್ಚು ಕೇವಲ ಜನರಿಗೆ ಅಪಾಯವಲ್ಲ. ಇದು ಭೂಮಿಯ ಜೀವವೈವಿಧ್ಯವನ್ನು ನಾಶಪಡಿಸುತ್ತದೆ.  ಆಗಸ್ಟ್ 2023 ರ ಆರಂಭದಲ್ಲಿ, ಹವಾಯಿ ದೇಶದಲ್ಲಿ ನಿರಂತರವಾಗಿ ಕಾಡ್ಗಿಚ್ಚು ಹೊತ್ತಿಕೊಂಡಿತು, ಪ್ರಾಥಮಿಕವಾಗಿ ಮಾಯಿ ದ್ವೀಪದ ಮೇಲೆ ಪರಿಣಾಮ ಬೀರಿತು. ಇದನ್ನು ಹವಾಯಿಯ ಇತಿಹಾಸದಲ್ಲಿ ಅತ್ಯಂತ ಕೆಟ್ಟ ನೈಸರ್ಗಿಕ ವಿಪತ್ತುಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿತ್ತು. ಕನಿಷ್ಠ 115 ಜನರು ದುರಂತದಲ್ಲಿ ಬಲಿಯಾದರು.  ಹವಾಯಿ ಅಧಿಕಾರಿಗಳು ಆಗಸ್ಟ್ 21 ರ ಹೊತ್ತಿಗೆ ಸುಮಾರು 850 ಜನರು ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದ್ದಾರೆ.

2020 ರಲ್ಲಿ, ಕ್ಯಾಲಿಫೋರ್ನಿಯಾ, ಒರೆಗಾನ್ ಮತ್ತು ವಾಷಿಂಗ್ಟನ್ ಮೊದಲಾದ ಕಡೆಗಳಲ್ಲಿ ಕಾಡ್ಗಿಚ್ಚುಗಳು ಸುಮಾರು 5 ಮಿಲಿಯನ್ ಎಕರೆ ಒಣ ಅರಣ್ಯವನ್ನು ನಾಶಪಡಿಸಿತು.  ನಿರಂತರ ಕಾಡ್ಗಿಚ್ಚಿನ ಕಾರಣದಿಂದ ಕಳೆದ 200 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ 315  ಸಸ್ತನಿ ಪ್ರಭೇದಗಳಲ್ಲಿ 29 ಅಳಿವಿನಂಚಿನಲ್ಲಿದೆ.

ಹೆಚ್ಚುತ್ತಿರುವ ಕಾಡ್ಗಿಚ್ಚಿನ ಹೊಗೆಯ ಕಾರಣದಿಂದ  2050 ರ ವೇಳೆಗೆ US ನಲ್ಲಿ ಪ್ರತಿ ವರ್ಷ 10,000 ಕ್ಕೂ ಹೆಚ್ಚು  ಸಾವುಗಳು ಸಂಭವಿಸಬಹುದು. ಇದು ಕಾಡ್ಗಿಚ್ಚಿನ ಹೊಗೆಯಿಂದಾಗಿ  ಹವಾಮಾನ ಬದಲಾವಣೆಯ ಅತ್ಯಂತ ದೊಡ್ಡ ಪರಿಣಾಮವಾಗಬಹುದು ಎಂದು ಈಗಾಗಲೇ ಎಚ್ಚರಿಸಲಾಗಿದೆ.

ದೇಶದಾದ್ಯಂತ ದೊಡ್ಡ ಮತ್ತು ಹೆಚ್ಚು ಆಗಾಗ್ಗೆ ಕಾಡ್ಗಿಚ್ಚುಗಳಿಂದ ಹೊಗೆ ಹೆಚ್ಚುತ್ತಿರುವ ತಾಪಮಾನ ಮತ್ತು ಬರದ ಪರಿಣಾಮಗಳು ಹೆಚ್ಚಾಗಲಿದೆ. 2006 ಮತ್ತು 2019 ರ ನಡುವೆ ಉತ್ತರ ಅಮೆರಿಕಾದಲ್ಲಿ ಕಾಡ್ಗಿಚ್ಚಿನ ಹೊಗೆಯ ಕುರಿತು ಉಪಗ್ರಹ ಮತ್ತು ನೆಲ-ಆಧಾರಿತ ಡೇಟಾದ ಅಧ್ಯಯನ ನಡೆಸಿದ ಸಂಸ್ಥೆಗಳು,  2011 ಮತ್ತು 2020 ರ ನಡುವೆ  ಸುಮಾರು 15,800 ಸಾವುಗಳಿಗೆ ಕಾರಣವಾಗಿದೆ.  ಮುಂದೆ ಇದು ಇನ್ನಷ್ಟು ಹೆಚ್ಚಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Wildfire smoke may be deadliest effect of climate change in US Smoke from wildfires made worse by climate change is set to cause thousands of additional deaths each year in the US.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

11 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

19 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

23 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago