Advertisement
MIRROR FOCUS

ಮತ್ತೆ ಮುನ್ನೆಲೆಗೆ ಬಂದ ವನ್ಯ ಜೀವಿಗಳ ಅಂಗಾಂಗ ಸಂಗ್ರಹ ವಿಷಯ | ಈ ದಿನದೊಳಗೆ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ವಾಪಸ್ ನೀಡಿ | ಅರಣ್ಯ ಸಚಿವರು

Share

ಕಳೆದ ಕೆಲ ತಿಂಗಳ ಹಿಂದೆ ಹುಲಿ ಉಗುರು(Tiger nail) ಪ್ರಕರಣ ಭಾರಿ ಸದ್ದು ಮಾಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರ(Govt) ಈಗ ಮಹತ್ವದ ಆದೇಶ ನೀಡಿದೆ. ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವನ್ಯ ಜೀವಿಗಳ (Wild Animals) ಅಂಗಾಂಗಗಳನ್ನು ಇಟ್ಟು ಕೊಂಡಿರುವರಿಗೆ ಅರಣ್ಯ ಸಚಿವ(Forest Minister) ಈಶ್ವರ್ ಖಂಡ್ರೆ (Eshwara Khandre)ಅವರು ವನ್ಯಜೀವಿ ಅಂಗಾಂಗಗಳನ್ನು ಹಿಂದಿರುಗಿಸಲು ಕೊನೆಯ ಡೆಡ್ ಲೈನ್ (Dead Line) ನೀಡಿದ್ದಾರೆ.

ಏಪ್ರಿಲ್ 10ರ ಒಳಗೆ ಹುಲಿ, ಚಿರತೆ ಮತ್ತು ಆನೆಗಳ ಕೊಂಬು, ಹಲ್ಲು, ಕೂದಲು ಸೇರಿದಂತೆ ಎಲ್ಲಾ ವನ್ಯಜೀವಿ ಅಂಗಾಂಗಗಳನ್ನು ಹಿಂತಿರುಗಿಸಲು ಕೊನೆಯದಾಗಿ ಗಡುವು ನೀಡಿದ್ದಾರೆ. ಪ್ರಮಾಣ ಪತ್ರ ಇಲ್ಲದೆ ಅಕ್ರಮವಾಗಿ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. 1973 ಹಾಗೂ 2003 ರಲ್ಲಿ ವನ್ಯಜೀವಿ ಅಂಗಾಂಗಗಳ ವಾಪಸ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ವಾಪಸ್ ಮಾಡದೇ ಇರುವುದು ದೊಡ್ಡ ಅಪರಾಧ. ಮೌಢ್ಯತೆ ಹಾಗೂ ನಂಬಿಕೆಗಾಗಿ ಕೆಲವು ಮುಗ್ದ ಜನರು ಇನ್ನೂ ಇಟ್ಟುಕೊಂಡಿದ್ದಾರೆ.

ಇಂತಹ ಮುಗ್ದ ಜನರಿಗೆ ಶಿಕ್ಷೆಯಾಗಬಾರದು ಎಂದು ನಮ್ಮ ಸರ್ಕಾರ ಏಪ್ರಿಲ್ 10 ರಂದು ಕೊನೆಯ ಬಾರಿ ವಾಪಸ್ ಮಾಡುವಂತೆ ಅವಕಾಶ ನೀಡಿದೆ. ಜನರು ತಮ್ಮ ಬಳಿ ಇರುವ ಅಂಗಾಗಳನ್ನು ಸಮೀಪದಲ್ಲಿರುವ ಅರಣ್ಯ ಕಚೇರಿಗೆ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿ ಗಡುವು ನೀಡಿದ್ದಾರೆ.

– ಅಂತರ್ಜಾಲ ಮಾಹಿತಿ

Forest Minister Eshwara Khandre has given a dead line to return the wild animal organs to those who have illegally kept the organs of wild animals without any permit.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…

12 hours ago

ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ…

17 hours ago

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

2 days ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

2 days ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

2 days ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

2 days ago