Advertisement
Opinion

ದೆಹಲಿ ವಾಯುಮಾಲಿನ್ಯದ ರೀತಿ ಬಂದರು ನಗರಿ ಮಂಗಳೂರು ಆಗಲಿದೆಯಾ..? | ಅರಣ್ಯ ನಾಶದಿಂದ ಬಂದರು ನಗರಿಯಲ್ಲಿ ಕುಗ್ಗುತ್ತಿದೆ ಆಮ್ಲಜನಕದ ಪ್ರಮಾಣ..! |

Share

ಬಂದರು ನಗರಿ(Port City) ಮಂಗಳೂರು(Mangaluru). ಇದೊಂದು ಸೌಂದರ್ಯದ ಗಣಿ, ಹಾಗೇ ಪ್ರಕೃತಿ, ಮಳೆ, ಸಮುದ್ರ(Beach), ದೊಡ್ಡ ಸಿಟಿ, ಸಂಸ್ಕೃತಿ, ಕೃಷಿಯ ನಾಡು(Agriculture), ಮತ್ಸೋದ್ಯಮ(Fishery), ತುಳು ಸಿನಿಮೋದ್ಯಮ(Tulu film industry), ಆರ್ಥಿಕವಾಗಿ ಬಲಿಷ್ಠವಾಗಿರುವ ಪಟ್ಟಣ. ಎಲ್ಲಾ ಇದೆ….!. ಬುದ್ದಿವಂತರರ ನಾಡು ಎಂದು ಹೇಳಲಾಗುತ್ತದೆ. ಆದರೆ ಇತ್ತೀಚೆಗೆ ಇಲ್ಲಿ ಪ್ರಕೃತಿಯ ಕಡೆಗೆ(Enivironment) ಹೆಚ್ಚಿನ ಕಾಳಜಿ ತೋರದ ಪರಿಣಾಮಗಳು ಗೋಚರವಾಗಲು ಆರಂಭವಾಗುತ್ತಿದೆ. ಇ ತ್ತೀಚೆಗೆ ನಡೆದ ಸರ್ವೆಯೊಂದರಲ್ಲಿ ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದ್ದು ಜೀವಸಂಕುಲದ ವಿನಾಶಕ್ಕೆ(Destruction of biota) ಹಾದಿ ಮಾಡಿಕೊಟ್ಟಿದೆ.

Advertisement
Advertisement
Advertisement

ಕಳೆದ ಮೂರು ದಶಕಗಳ ಹಿಂದೆ ಪರಶುರಾಮ ಸೃಷ್ಟಿಯ ತುಳುನಾಡಿನ ಪ್ರಮುಖ ನಗರಿ ಮಂಗಳೂರು ಪ್ರಕೃತಿ ಮಾತೆಯ ಹಸಿರು ಹೊದಿಕೆಯಲ್ಲಿ ಹೊದ್ದು ಮಲಗಿತ್ತು. ಕಣ್ಣು ಹಾಯಿದಷ್ಟು ದೂರ ಹಸಿರೇ ಹಸಿರಾಗಿತ್ತು, ನೀರು ಯಥೇಚ್ಛವಾಗಿದ್ದರೆ, ಮಣ್ಣು ಸಮೃದ್ದವಾಗಿತ್ತು. ಇದರಿಂದ ಇಲ್ಲಿನ ಪರಿಸರ ಕೂಡ ಅಷ್ಟೇ ತಂಪಾಗಿತ್ತು. ಆದರೆ ಇದೀಗ ಮಂಗಳೂರಿನಲ್ಲೈ ತಾಪಮಾನ ಏರಿ ಭೂಮಿ ಬಿಸಿಯಾಗುತ್ತಿದ್ದು, ನೀರು ಕಡಿಮೆಯಾಗುವ ಭೀತಿಯಲ್ಲಿದೆ.ಇದಕ್ಕೆಲ್ಲಾ ಪ್ರಮುಖ ಕಾರಣ ಪರಿಸರ, ಅರಣ್ಯ ಭೂಮಿ ಬಲಿಯಾಗಿರುವುದು. ಎಲ್ಲಾ ಕಡೆ ಅರಣ್ಯವನ್ನು ರಕ್ಷಿಸಿ, ಪರಿಸರ ಸಂರಕ್ಷಿಸಿ ಎಂಬ ಬರಹಗಳು ಕೇವಲ ಬ್ಯಾನರ್, ಪ್ಲೆಕ್ಸ್ ಗಳಿಗೆ ಸೀಮಿತವಾದಂತಿದೆ. ಅರಣ್ಯವಿಲ್ಲದಿದ್ದರೆ ನಾವಿಲ್ಲ ಎಂಬ ಮಾತಿನ ಸತ್ಯವಾಗಿದ್ದರೂ, ಅರಣ್ಯವನ್ನುಳಿಸಲು ಆಡಳಿತ ವ್ಯವಸ್ಥೆ ಜಾಣ ಕುರುಡನಂತಾಗಿದೆ.

Advertisement

ತಾಪಮಾನ ಹೆಚ್ಚಳ, ವಿಷಪೂರಿತ ವಾತಾವರಣ ಮೊದಲಾದ ಸಮಸ್ಯೆಗಳನ್ನು ಇಂದು ಎದುರಿಸುತ್ತಿರುವ ದೂರದ ದೆಹಲಿ, ಬೆಂಗಳೂರು ಮೊದಲಾದ ನಗರಗಳ ಸಾಲಿಗೆ ಮಂಗಳೂರು ಕೂಡಾ ಶೀಘ್ರವೇ ಸೇರ್ಪಡೆಗೊಳ್ಳಲಿದೆ. ದಿನಂದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಕರಾವಳಿ ಪ್ರದೇಶ ಹಾಗೂ ಮಲೆನಾಡು ತಪ್ಪಲು ಭಾಗದಲ್ಲಿ ತಾಪಮಾನ 32 ಡಿಗ್ರಿ ಹೆಚ್ಚಾದ ಬಳಿಕ ಮಳೆ ಬರುತ್ತಿದ್ದ ಕಾಲ ಇತ್ತು. ಆದರೆ ಈಚೆಗೆ 40 ಡಿಗ್ರಿಯವರೆಗೂ ತಾಪಮಾನ ಏರಿಕೆಯಾದರೂ ಮಳೆಯಾಗುತ್ತಿಲ್ಲ. ವಾತಾವರಣದ ಕಲುಷಿತವು ಗ್ರಾಮೀಣ ಭಾಗದಲ್ಲೂ ಮಿತಿಗಿಂತ ಹೆಚ್ಚು ದಾಖಲಿಸುತ್ತಿದೆ.

ಈಚೆಗೆ ನಿಟ್ಟೆ ವಿಶ್ವವಿದ್ಯಾಲಯದ ಸಹಕಾರದಲ್ಲಿ ಟ್ರೀ ಕೌಂಟ್ ಮಂಗಳೂರು ಎಂಬ ಪುಸ್ತಕವನ್ನು ಹೊರತರಲಾಗಿದೆ. ನಿಟ್ಟೆ ವಿಶ್ವವಿದ್ಯಾಲಯದ ನುಕ್ಸರ್ ರಿಸರ್ಚ್ ಸೆಂಟರ್ ಡೆಪ್ಯುಟಿ ಡೈರೆಕ್ಟರ್ ಡಾ. ಸ್ಮಿತ ಹೆಗ್ಡೆ ಇವರ ನೇತೃತ್ವದಲ್ಲಿ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ ನಗರದಲ್ಲಿ ಮರಗಳ ಲೆಕ್ಕ ಹಾಕಲಾಗಿತ್ತು. ಈ ಲೆಕ್ಕಚಾರದಲ್ಲಿ, ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಒಟ್ಟು 60 ವಾರ್ಡ್ ನ 50 ವಾರ್ಡ್ ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೇಕಡ 6.24 ರಷ್ಟು ಮಾತ್ರ ಮರಗಳಿವೆ, ಅದರಲ್ಲಿ 19,171 ವಿವಿಧ ಜಾತಿಯ ಮರಗಳಿವೆ. ಖಾಸಗಿ ಪ್ರದೇಶಗಳಲ್ಲಿ ಒಟ್ಟು ಶೇಕಡ 41.09 ರಷ್ಟು ಮರಗಳು ಇದೆ.

Advertisement

ಮಂಗಳೂರು ನಗರದ ದೇರೆಬೈಲ್, ಡೊಂಗರಕೇರಿ, ಕದ್ರಿ ಕಂಬಳ ವಾರ್ಡ್ ನಲ್ಲಿ ಮರಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು ಈ ಭಾಗದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಶೇಕಡ ಮೂರರಷ್ಟು ತಾಪಮಾನ ಏರಿಕೆಯಾಗಿದೆ. ತಿರುವೈಲ್, ಬಜಾಲ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಇಲ್ಲದೆ ಕಾರಣ ಇಲ್ಲಿ ಸರ್ವೆ ಪ್ರಕಾರ ತಾಪಮಾನ ಕಡಿಮೆಯಾಗಿದೆ. ಮಂಗಳೂರಿನಲ್ಲಿ ಬಿಸಿಲ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನೆಂಬ ಸತ್ಯವನ್ನು ನಾವು ಅರಿತುಕೊಳ್ಳುವಲ್ಲಿ ಸೋತಿದ್ದೇವೆ.

ಅರಣ್ಯದ ರಕ್ಷಣೆಗಾಗಿ ಇರುವ ಅರಣ್ಯ ಇಲಾಖೆ ಇದ್ದೂ ಇಲ್ಲದಂತಾದರೆ, ಸರಕಾರ ತನ್ನ ಲಾಭಗಳಿಸುವಿಕೆಯ, ಮತ ಎಣಿಕೆಯ ದೃಷ್ಟಿಕೋನದಲ್ಲಿದೆಯೇ ವಿನ:ಪ್ರಕೃತಿಯನ್ನು ರಕ್ಷಿಸುವ ಬಗ್ಗೆ ಯಾವ ಗಂಭೀರ ಚಿಂತನೆಯನ್ನೂ ನಡೆಸುತ್ತಿಲ್ಲ.ಮರಗಳ ನಾಶದ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯ ಇದೆ.

Advertisement

Port City Mangaluru, a coastal district is said to be the land of the most intelligent. But lately it seems that people here are lacking in intelligence. A huge disaster will happen in front of the people who do not show much concern towards the environment. Yes, in a recent survey (report), this shocking information has come to light, which has led to the destruction of biota.

(ಮೂಲ – ಡಿಜಿಟಲ್‌ ಮೀಡಿಯಾ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 hour ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

2 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

2 hours ago

ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ

ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…

2 hours ago

ಧರ್ಮಸ್ಥಳ ಯಕ್ಷಗಾನ ಮೇಳ |  ಸೇವೆ ಬಯಲಾಟ ಪ್ರದರ್ಶನ

ನಾಡಿನ ಪವಿತ್ರ ಕ್ಷೇತ್ರ  ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…

2 hours ago

ಜೇನು ತುಪ್ಪ ಮಾರಾಟ | ಅರ್ಜಿ ಆಹ್ವಾನ

ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…

2 hours ago