Advertisement
ಸುದ್ದಿಗಳು

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳು ಯಾವುದೆಲ್ಲಾ…?

Share

ಚಳಿಗಾಲದಲ್ಲಿ ನಮ್ಮ ದೇಹದಲ್ಲಿಬದಲಾವಣೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಬೆಳಿಗ್ಗೆ ಚಳಿಯಾಗಿ ಸಂಜೆಯಾಗುತ್ತಲೇ ಮೋಡ ಕವಿದ ವಾತಾವರಣದ ಜೊತೆಗೆ ವರುಣನ ಅರ್ಭಟವೂ ಇರುತ್ತದೆ. ಈ ವಾತರಣದ ಬದಲಾವಣೆಯಿಂದ  ಶೀತ ತಲೆನೋವು, ಕೆಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಕಾಡುತ್ತದೆ. ಅದರ ಜೊತೆಗೇ ಕೈ ಕಾಲುಗಳ ಚರ್ಮಗಳು ಸುಕ್ಕು ಕಟ್ಟುವುದು, ತುಟಿ ಒಡೆಯುವುದು, ಬಾಯಾರಿಕೆ ಇತ್ಯಾದಿ ತೊಂದರೆಗಳ ಕಾಣ ಸಿಗುತ್ತದೆ. ಇದಕ್ಕೆಲ್ಲ ಕಾರಣ ದೇಹದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಾಗುವುದು. ನಾವು ಚಳಿಗಾಲದಲ್ಲಿ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ರೋಗ ನಿರೋಧಕ ಶಕ್ತಿಯು ಹೆಚ್ಚಾಗುವುತ್ತದೆ..

ಚಳಿಗಾಲದಲ್ಲಿ ಉತ್ತಮ ಹಣ್ಣುಗಳ ಸೇವನೆ. ಇದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ ತರುತ್ತವೆ. ಜೊತೆಗೆ ಋತುಮಾನಕ್ಕೆ ಅನುಗುಣವಾಗಿ ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆ. ಯಾವೆಲ್ಲ ಹಣ್ಣು ಸೇವನೆ ಉತ್ತಮ:

  • ಸೇಬು: ಇದರಲ್ಲಿ ಪೆಕ್ಟನ್‍ನಂತಹ ಆಹಾರದ ನಾರಿನಾಂಶದಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಸಹಾಯಕ. ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೂ ನೆರವಾಗುತ್ತದೆ.
  • ಸ್ಟ್ರಾಬೆರಿ: ಇದರಲ್ಲಿ ರಾಸ್‍ಪ್ಟೆರಿಗಳಂತಹ ಬೆರ್ರಿಗಳಿ ಆಂಟಿಆಕ್ಸಿಡೆಂಟ್, ಫೈಬರ್, ಜೀವಸತ್ವಗಳು ಸೇರಿ ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಚಯಾಪಚಯ ಸುಧಾರಿಸಲು ನೆರವಾಗುತ್ತದೆ.
  • ಕಿತ್ತಳೆ ಹಣ್ಣು: ಇದರಲ್ಲಿ ವಿಟಮಿನ್ ಸಿ, ಪೈಬರ್, ಆಂಟಿಆಕ್ಸಿಡೆಂಟಿವ್ ಗಳು ಹೇರಳವಾಗಿರುತ್ತದೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
  • ದಾಳಿಂಬೆ: ಇದರಲ್ಲಿ ಕಬ್ಬಿಣದಂತಹ ಖನಿಜಗಳು, ಫಾಲಿಫಿನಾಲ್ಸ್, ವಿಟಮಿನ್ ಸಿ ಯಂತಹ ಆಂಟಿಆಕ್ಸಿಡೆಂಟ್‍ಗಳು ಸಮೃದ್ಧವಾಗಿವೆ.
  • ಕೀವಿ ಹಣ್ಣು: ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಪೈಬರ್‍ನ ಪ್ರಬಲ ಮೂಲವಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್‍ಗಳು, ಅಗತ್ಯ ಪೋಷಕಾಂಶಗಳು ತುಂಬಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚಯಾಪಚಯ ಆರೋಗ್ಯ ಬಲಪಡಿಸಲು ನೆರವಾಗುತ್ತದೆ.
  • ಬಾಳೆಹಣ್ಣು: ಇದರಲ್ಲಿ ಪ್ರೋಟೀನ್, ಪೈಬರ್ ಹಾಗೂ ಪೈಬರ್ ಖನಿಜಗಳಿಂದ ಕೂಡಿದೆ. ಇದು ಚಳಿಗಾಲದಲ್ಲಿ ದೇಹಕ್ಕೆ ಒಳ್ಳೆಯ ಆಹಾರವಾಗಿದೆ.
  • ದ್ರಾಕ್ಷಿ: ಇದು ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು, ರೆಸ್ವೆರಾಟ್ರೋಲ್‍ನಮತಹ ಆಂಟಿಆಕ್ಸಿಡೆಂಟ್‍ಗಳು ವಿವಿಧ ರೀತಿಯಲ್ಲಿ ಆರೋಗ್ಯವೃದ್ಧಿಗೆ ಸಹಾಯಾ ಮಾಡುತ್ತದೆ.
  • ಪೇರಳೆ: ಇದರಲ್ಲಿ ವಿಟಮೀನ್ ಸಿ ಅಧಿಕವಾಗಿರುತ್ತದೆ. ಇದು ಆಹಾರದ ಪೈಬರ್ ಅನ್ನು ಹೊಂದಿದೆ. ಹೀಗಾಗಿ ಇದು ಜೀರ್ಣಕ್ರಿಯೆಯ ಆರೋಗ್ಯ ಸುಧಾರಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಕಷ್ಟು ಸಹಾಯ ಮಾಡುತ್ತದೆ.

ಈ ಹಣ್ಣುಗಳಿಗೆ ಹೆಚ್ಚು ಖರ್ಚುಗಳಿಲ್ಲ. ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಾದಾಗಿದೆ. ಆದುರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವ ಮಾತಿನಂತೆ. ಬದಲಾಗುತ್ತಿರುವ ಈ ವಾತಾವರಣಕ್ಕೆ ತಕ್ಕಂತೆ ಆಹಾರದಲ್ಲೂ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡರೆ ಆರೋಗ್ಯದಿಂದ ಇರಲು ಸಾಧ್ಯ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…

4 hours ago

ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…

4 hours ago

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

12 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

13 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

13 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

13 hours ago