ಮನೆಯಲ್ಲಿ ನಮ್ಮ( ಮಹಿಳೆಯರನ್ನು) ಮೆಚ್ಚಿನ ಜಾಗ ಯಾವುದು ಅಂತ ಏನಾದ್ರು ಕೇಳಿದರೆ ಅದು ಅಡುಗೆ ಮನೆಯೇ…! ಬಾಯಿ ಮಾತಿಗೆ ದೇವರ ಕೋಣೆ, ಪಡಸಾಲೆ, ಜಗುಲಿ, ಹೊರಗಿನ ಚಿಟ್ಟೆ, ಹಿತ್ತಿಲು ಅಂತೆಲ್ಲ ಹೇಳಿದರೂ ಸುತ್ತಿ ಬಳಸಿ ಬಂದು ನಿಲ್ಲುವುದು ಅಡುಗೆ ಮನೆಯಲ್ಲೇ.……..ಮುಂದೆ ಓದಿ…..
ಮನೆಯಾಕೆಯ ಸುರಕ್ಷಾ ವಲಯವದು. ತನ್ನ ನಗುವಿಗೆ, ದುಃಖಕ್ಕೆ , ಅಳುವಿಗೆ ಸ್ಪಂದಿಸಲ್ಪಡುವ ಏಕೈಕ ಜಾಗವೆಂದರೆ ಅದು ಅಡುಗೆ ಮನೆ. ದಿನದ ಇಪ್ಪತ್ತನಾಲ್ಕು ಗಂಟೆಯ ಬಹು ಪಾಲು ಮೀಸಲು ಅಡುಗೆಮನೆಗೆ. ನಾನು ಇಲ್ಲಿ ಉಲ್ಲೇಖಿಸುತ್ತಿರುವುದು ನನ್ನಂತಹ ಸಾಮಾನ್ಯ ಮಹಿಳೆಯ ಬಗ್ಗೆ ಮಾತ್ರ. ಮನೆಯ ಹೊರಗೆ, ಒಳಗೆ ಸಮನಾಗಿ ದುಡಿಯುವ ಸೂಪರ್ ಮಹಿಳೆಯರು ಈ ವಲಯಕ್ಕೆ ಬರುವುದಿಲ್ಲ.
ಅಡುಗೆ ಮನೆಯೇ ಕೇಂದ್ರ ಬಿಂದುವಾದರೂ ಹಿಂದಿನಿಂದಲೂ ಬಹು ಕಡೆಗಣನೆಗೆ ಗುರಿಯಾದ ಶಾಪಗ್ರಸ್ತ ಕೋಣೆಯದು. ಹಳೆಯ ಮನೆಗಳ ಅಡುಗೆ ಕೋಣೆಗಳನ್ನು ನೋಡಿದ್ದರೆ ನಿಮಗೆ ಅಂದಾಜು ಆಗಬಹುದು. ಮನೆಯ ಒಂದು ಮೂಲೆಯಲ್ಲಿ ಇರುತ್ತಿದ್ದ ಆ ಕೋಣೆಯಲ್ಲಿ ಯಾವಾಗಲೂ ಗಾಳಿ ಬೆಳಕಿಗೆ ಕೊರತೆಯೇ. ಒಂದು ಪುಟ್ಟ ಕಿಟಕಿ. ಅದು ಹೆಚ್ಚಾಗಿ ಮರದ ಎಳೆಯುವ ಕಿಟಕಿ. ಮಳೆಗಾಲದಲ್ಲಿ ತೆಗೆಯಲೂ ಬಾರದು, ತೆಗೆದರೆ ಹಾಕಲಾಗದು. ಹಾವು ಚೇಳುಗಳು ಮುಕ್ತವಾಗಿ ಬಂದು ಮೂಲೆಯಲ್ಲಿ ಇಡುವ ಸೌದೆಗೆ ಬಂದು ಸೇರಿ ಕೊಂಡರೆ ಗೊತ್ತೂ ಆಗದು. ಬೆಳಗ್ಗೆ ಮನೆಯಾಕೆ ಒಲೆಯಿಂದ ಬೂದಿ ತೆಗೆದು ಸಾರಿಸಿ ಬೆಂಕಿ ಮಾಡಲು ಸೌದೆಗೆ ಕೈ ಹಾಕುತ್ತಲೂ ಚೇಳು ಕುಟುಕಿದರೆ ಆ ದಿನಕ್ಕೆ ನರಕಯಾತನೆಯೇ. ಬಿಡಿ ಈಗ ಎಷ್ಟೋ ಬದಲಾವಣೆಗಳಾಗಿವೆ.
ಆದರೂ ಆ ಕತ್ತಲೆಯ , ಬುಡ್ಡಿ ದೀಪದ ಕೋಣೆಯೊಳಗಿನ ಆಪ್ತತೆ, ನೈಜತೆ, ಮಡಿಕೆಯ ಸಪ್ಪಳ, ಶುದ್ಧ ತೆಂಗಿನೆಣ್ಣೆಯ ಘಮ್ಮನ್ನೆವ ಪರಿಮಳ, ಕುಚ್ಚಲಕ್ಕಿ ಒಲೆಯಲ್ಲಿ ಬೇಯುವಾಗಿನ ಕುದಿಯುವ ಗೌಜು……. ಎಲ್ಲಾ ಒಂದೊಂದಾಗಿ ಕಳಚಿದ ನೆನಪುಗಳು……
ಇಂದಿನ ಅಡುಗೆಮನೆ ಕೋಣೆಯಾಗಿ ಉಳಿದಿಲ್ಲ. ಮನೆಯ ಕೇಂದ್ರ ಜಾಗದಲ್ಲೇ ಸ್ಥಾಪನೆಯಾಗಿ ಬಿಟ್ಟಿದೆ. ಎಲ್ಲಾ ಕೈಗೆಟುವಂತಹ ಸೌಕರ್ಯಗಳು. ಹೊಗೆರಹಿತ ಅಡುಗೆ ವ್ಯವಸ್ಥೆ. ಸರಳ ಸುಲಭ ಕಾರ್ಯವಿಧಾನ… ಆಧುನಿಕ ಕೊಡುಗೆಗಳು ಬದುಕಿಗೆ ದೊರೆತ ಉಡುಗೊರೆಯೆನ್ನಲೇ ಶಾಪವಾ..!?, ಉತ್ತರ ಹುಡುಕುತ್ತಿರುವೆ……, ಹಂಚಿ ಕೊಳ್ಳುವುದು ಬಹಳವಿದೆ…..
2025-26 ನೇ ಸಾಲಿನ ಅಗ್ನಿವೀರರ ನೇಮಕಾತಿಗಾಗಿ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು…
ಎ.12 ರಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಸಂಚರಿಸಲಿದೆ. ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ…
2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿನ ಬಾಳಿಲದ ಶ್ರೇಯನ್…
ಬಾಟಲ್ಗಳ ಮೂಲಕ ಪೂರೈಕೆಯಾಗುವ ಕುಡಿಯುವ ನೀರು ಕಳಪೆ ಎಂದು ಆಹಾರ ಇಲಾಖೆ ವರದಿ…
ಸಂಜೆ ಅಲ್ಲಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ.ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ…
ಸಂಜೆಯ ಹೊತ್ತು ತೋಟದ ಅಂಚು ಅಥವಾ ಪಕ್ಕದ ಕಾಡಿನಲ್ಲಿ ಸಂಚರಿಸುತ್ತಿದ್ದರೆ ಅಲ್ಲೆಲ್ಲ ಜೇನು…