ಪುಟ್ಟ ಕಿಂಡಿಯಿಂದ ದೊಡ್ಡ ಕಿಟಕಿಯತ್ತ

April 3, 2025
8:30 AM
ಮಹಿಳೆಯ ಸುರಕ್ಷಾ ವಲಯವೆಂದರೆ ಅದು ಅಡುಗೆ ಕೋಣೆ. ಈ ಅಡುಗೆ ಕೋಣೆಯೇ ಎಲ್ಲವೂ. ಇಂದಿನ ದಿನ ಎಲ್ಲವೂ ಇದೆ. ಸಣ್ಣ ಕಿಟಕಿಯಿಂದ ದೊಡ್ಡ ಕಿಟಕಿಗೆ ತಲಪಿದೆ ಅಡುಗೆ ಮನೆ.

ಮನೆಯಲ್ಲಿ ನಮ್ಮ( ಮಹಿಳೆಯರನ್ನು) ಮೆಚ್ಚಿನ ಜಾಗ ಯಾವುದು ಅಂತ ಏನಾದ್ರು ಕೇಳಿದರೆ ಅದು ಅಡುಗೆ ಮನೆಯೇ…! ಬಾಯಿ ಮಾತಿಗೆ ದೇವರ ಕೋಣೆ, ಪಡಸಾಲೆ, ಜಗುಲಿ, ಹೊರಗಿನ ಚಿಟ್ಟೆ, ಹಿತ್ತಿಲು ಅಂತೆಲ್ಲ ಹೇಳಿದರೂ ಸುತ್ತಿ ಬಳಸಿ ಬಂದು ನಿಲ್ಲುವುದು ಅಡುಗೆ ಮನೆಯಲ್ಲೇ.……..ಮುಂದೆ ಓದಿ…..

ಮನೆಯಾಕೆಯ ಸುರಕ್ಷಾ ವಲಯವದು. ತನ್ನ ನಗುವಿಗೆ, ದುಃಖಕ್ಕೆ , ಅಳುವಿಗೆ ಸ್ಪಂದಿಸಲ್ಪಡುವ ಏಕೈಕ ಜಾಗವೆಂದರೆ ಅದು ಅಡುಗೆ ಮನೆ. ದಿನದ ಇಪ್ಪತ್ತನಾಲ್ಕು ಗಂಟೆಯ ಬಹು ಪಾಲು ಮೀಸಲು ಅಡುಗೆಮನೆಗೆ. ನಾನು ಇಲ್ಲಿ ಉಲ್ಲೇಖಿಸುತ್ತಿರುವುದು ನನ್ನಂತಹ ಸಾಮಾನ್ಯ ಮಹಿಳೆಯ ಬಗ್ಗೆ ಮಾತ್ರ. ಮನೆಯ ಹೊರಗೆ, ಒಳಗೆ ಸಮನಾಗಿ ದುಡಿಯುವ ಸೂಪರ್ ಮಹಿಳೆಯರು ಈ ವಲಯಕ್ಕೆ ಬರುವುದಿಲ್ಲ.

ಅಡುಗೆ ಮನೆಯೇ ಕೇಂದ್ರ ಬಿಂದುವಾದರೂ ಹಿಂದಿನಿಂದಲೂ ಬಹು ಕಡೆಗಣನೆಗೆ ಗುರಿಯಾದ ಶಾಪಗ್ರಸ್ತ ಕೋಣೆಯದು. ಹಳೆಯ ಮನೆಗಳ ಅಡುಗೆ ಕೋಣೆಗಳನ್ನು ನೋಡಿದ್ದರೆ ನಿಮಗೆ ಅಂದಾಜು ಆಗಬಹುದು. ಮನೆಯ‌ ಒಂದು ಮೂಲೆಯಲ್ಲಿ‌ ಇರುತ್ತಿದ್ದ ಆ ಕೋಣೆಯಲ್ಲಿ ಯಾವಾಗಲೂ ಗಾಳಿ ಬೆಳಕಿಗೆ ಕೊರತೆಯೇ. ಒಂದು ಪುಟ್ಟ ಕಿಟಕಿ. ಅದು ಹೆಚ್ಚಾಗಿ ಮರದ ಎಳೆಯುವ ಕಿಟಕಿ. ಮಳೆಗಾಲದಲ್ಲಿ ತೆಗೆಯಲೂ ಬಾರದು, ತೆಗೆದರೆ ಹಾಕಲಾಗದು. ಹಾವು ಚೇಳುಗಳು ಮುಕ್ತವಾಗಿ ಬಂದು ಮೂಲೆಯಲ್ಲಿ ಇಡುವ ಸೌದೆಗೆ ಬಂದು ಸೇರಿ ಕೊಂಡರೆ ಗೊತ್ತೂ ಆಗದು. ಬೆಳಗ್ಗೆ ಮನೆಯಾಕೆ ‌ಒಲೆಯಿಂದ ಬೂದಿ ತೆಗೆದು ಸಾರಿಸಿ ಬೆಂಕಿ ಮಾಡಲು ಸೌದೆಗೆ ಕೈ ಹಾಕುತ್ತಲೂ ಚೇಳು ಕುಟುಕಿದರೆ ಆ ದಿನಕ್ಕೆ ನರಕಯಾತನೆಯೇ. ಬಿಡಿ ಈಗ ಎಷ್ಟೋ‌ ಬದಲಾವಣೆಗಳಾಗಿವೆ.

ಆದರೂ ಆ ಕತ್ತಲೆಯ , ಬುಡ್ಡಿ ದೀಪದ ಕೋಣೆಯೊಳಗಿನ ಆಪ್ತತೆ, ನೈಜತೆ, ಮಡಿಕೆಯ ಸಪ್ಪಳ, ಶುದ್ಧ ತೆಂಗಿನೆಣ್ಣೆಯ ಘಮ್ಮನ್ನೆವ ಪರಿಮಳ, ಕುಚ್ಚಲಕ್ಕಿ ಒಲೆಯಲ್ಲಿ ಬೇಯುವಾಗಿನ ಕುದಿಯುವ ಗೌಜು……. ಎಲ್ಲಾ ಒಂದೊಂದಾಗಿ ಕಳಚಿದ ನೆನಪುಗಳು……

ಇಂದಿನ ಅಡುಗೆಮನೆ ಕೋಣೆಯಾಗಿ ಉಳಿದಿಲ್ಲ. ಮನೆಯ ಕೇಂದ್ರ ಜಾಗದಲ್ಲೇ ಸ್ಥಾಪನೆಯಾಗಿ ಬಿಟ್ಟಿದೆ. ಎಲ್ಲಾ ಕೈಗೆಟುವಂತಹ ಸೌಕರ್ಯಗಳು. ಹೊಗೆರಹಿತ ಅಡುಗೆ ವ್ಯವಸ್ಥೆ. ಸರಳ ಸುಲಭ ಕಾರ್ಯವಿಧಾನ… ಆಧುನಿಕ‌ ಕೊಡುಗೆಗಳು ಬದುಕಿಗೆ ದೊರೆತ ಉಡುಗೊರೆಯೆನ್ನಲೇ ಶಾಪವಾ..!?,  ಉತ್ತರ ಹುಡುಕುತ್ತಿರುವೆ……, ಹಂಚಿ ಕೊಳ್ಳುವುದು ಬಹಳವಿದೆ…..

ಬರಹ :
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!
September 27, 2026
10:34 AM
by: ಪ್ರಬಂಧ ಅಂಬುತೀರ್ಥ
ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು
September 26, 2026
7:21 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ
September 26, 2026
9:36 AM
by: ಮಹೇಶ್ ಪುಚ್ಚಪ್ಪಾಡಿ
ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು
September 25, 2026
7:14 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror