ಅಪರೂಪದ ಪ್ರಕರಣ | 3 ದಿನಗಳ ಅಂತರದಲ್ಲಿ ಅವಳಿಗಳಿಗೆ ಜನ್ಮ ನೀಡಿದ ಮಹಿಳೆ…! |

June 8, 2022
11:00 AM

ಅವಳಿ ಮಕ್ಕಳು ಸಾಮಾನ್ಯ ನಿಮಿಷಗಳ ಅಂತರದಲ್ಲಿ ಜನಿಸುತ್ತವೆ. ಆದರೆ ಇಲ್ಲೊಬ್ಬಳು ಮಹಿಳೆ ಮೂರು ದಿನದ ಅಂತರದಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡುವ ಮೂಲಕ ಅಪರೂಪದ ಪ್ರಕರಣ ದಾಖಲಾಗಿದೆ. ಮಿಲಿಯನ್‌ ಪ್ರಕರಣಗಳಲ್ಲಿ ಒಂದು ಇಂತಹ ಘಟನೆಗಳು ನಡೆಯುತ್ತದೆ ಎಂದು ವೈದ್ಯರು  ಹೇಳಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಈ ಹೆರಿಗೆ ನಡೆದಿದ್ದು ಇದೀಗ ಬಹಿರಂಗಪಡಿಸಲಾಗಿದೆ.

ಟೆಕ್ಸಾಸ್‌ನ ಕಾರ್ಮೆನ್ ಮಾರ್ಟಿನೆಕ್ಸ್ ಎಂಬ ಮಹಿಳೆ ಮೂರು ದಿನಗಳ ಅಂತರದಲ್ಲಿ ಎರಡು ಒಂದೇ ಅವಳಿಗಳಿಗೆ ಜನ್ಮ ನೀಡಿದವರು. ಕಾರ್ಮೆನ್ ಮಾರ್ಚ್ 7 ರಂದು ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ತನ್ನ ಮೊದಲ ಮಗಳು ಗೇಬ್ರಿಯೆಲಾ (ಗ್ಯಾಬಿ)  ಜನ್ಮ ನೀಡಿದರು. ಅದಾಗಿ ಮಾ.10 ರಂದು ಇನ್ನೊಂದು ಮಗುವಿಗೆ ಜನ್ಮ ನೀಡಿದರು. ಮೊದಲ ಮಗುವಿನ ಜನನದ ನಂತರ  ಎಚ್ಚರಿಕೆಯಿಂದ ಆಸ್ಪತ್ರೆಯಲ್ಲಿ ನಿಗಾ ವಿಭಾಗದಲ್ಲಿ ದಾಖಲಿಸಿ ಕಾರ್ಮೆನ್ ಅವರಿಗೆ ಮುಜುವರ್ಜಿಯಿಂದ ಚಿಕಿತ್ಸೆ ನೀಡಲಾಗಿತ್ತು. ಯಾವುದೇ ಆಪರೇಷನ್‌ ಮಾಡಿಸದೆ ಸಹಜ ಹೆರಿಗೆ ಕ್ರಿಯೆಯನ್ನು ನಡೆಸಲು ಕಾದು ಮೂರು ದಿನಗಳ ನಂತರ ಇನ್ನೊಂದು ಮಗುವಿಗೆ ಜನ್ಮ ನೀಡಲು ಸಾಧ್ಯವಾಯಿತು.

ಮೂರು ದಿನಗಳ ಕಾಲ  ಮೇಲ್ವಿಚಾರಣೆ  ಮತ್ತು ಮೆಗ್ನೀಸಿಯಮ್  ನೀಡಲಾಯಿತು, ಇದು ಹೆರಿಗೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಅಥವಾ ನಿಲ್ಲಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳಿದ್ದರು.  ಹೆರಿಗೆಗೆ ಸಹಾಯ ಮಾಡಿದ ಡಾ ಜೇಮ್ಸ್ ಎಲ್ ಟಾಡ್ವಿಕ್, “ನನ್ನ ವೃತ್ತಿಜೀವನದಲ್ಲಿ ತೀರಾ ಅಪರೂಪದ ಪ್ರಕರಣವಾಗಿದೆ.ಇದು ತುಂಬಾ ಅಸಾಮಾನ್ಯ ಎಂದಿದ್ದಾರೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹಾಲಿನ ದರ ಕನಿಷ್ಠ ₹10 ಹೆಚ್ಚಳಕ್ಕೆ ಕೆಎಂಎಫ್‌ ಮನವಿ – ಹೈನುಗಾರರಿಗೆ ಏನು ಪ್ರಯೋಜನ..? ಗ್ರಾಹಕರಿಗೆ ಎಷ್ಟು ಹೊರೆ..?
September 26, 2026
7:18 AM
by: ದ ರೂರಲ್ ಮಿರರ್.ಕಾಂ
ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು
September 25, 2026
7:14 PM
by: ಮಹೇಶ್ ಪುಚ್ಚಪ್ಪಾಡಿ
ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ
September 25, 2026
1:19 PM
by: ದ ರೂರಲ್ ಮಿರರ್.ಕಾಂ
ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ
September 25, 2026
12:51 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror