ಅವಳಿ ಮಕ್ಕಳು ಸಾಮಾನ್ಯ ನಿಮಿಷಗಳ ಅಂತರದಲ್ಲಿ ಜನಿಸುತ್ತವೆ. ಆದರೆ ಇಲ್ಲೊಬ್ಬಳು ಮಹಿಳೆ ಮೂರು ದಿನದ ಅಂತರದಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡುವ ಮೂಲಕ ಅಪರೂಪದ ಪ್ರಕರಣ ದಾಖಲಾಗಿದೆ. ಮಿಲಿಯನ್ ಪ್ರಕರಣಗಳಲ್ಲಿ ಒಂದು ಇಂತಹ ಘಟನೆಗಳು ನಡೆಯುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಾರ್ಚ್ ತಿಂಗಳಲ್ಲಿ ಈ ಹೆರಿಗೆ ನಡೆದಿದ್ದು ಇದೀಗ ಬಹಿರಂಗಪಡಿಸಲಾಗಿದೆ.
ಟೆಕ್ಸಾಸ್‌ನ ಕಾರ್ಮೆನ್ ಮಾರ್ಟಿನೆಕ್ಸ್ ಎಂಬ ಮಹಿಳೆ ಮೂರು ದಿನಗಳ ಅಂತರದಲ್ಲಿ ಎರಡು ಒಂದೇ ಅವಳಿಗಳಿಗೆ ಜನ್ಮ ನೀಡಿದವರು. ಕಾರ್ಮೆನ್ ಮಾರ್ಚ್ 7 ರಂದು ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ತನ್ನ ಮೊದಲ ಮಗಳು ಗೇಬ್ರಿಯೆಲಾ (ಗ್ಯಾಬಿ) ಜನ್ಮ ನೀಡಿದರು. ಅದಾಗಿ ಮಾ.10 ರಂದು ಇನ್ನೊಂದು ಮಗುವಿಗೆ ಜನ್ಮ ನೀಡಿದರು. ಮೊದಲ ಮಗುವಿನ ಜನನದ ನಂತರ ಎಚ್ಚರಿಕೆಯಿಂದ ಆಸ್ಪತ್ರೆಯಲ್ಲಿ ನಿಗಾ ವಿಭಾಗದಲ್ಲಿ ದಾಖಲಿಸಿ ಕಾರ್ಮೆನ್ ಅವರಿಗೆ ಮುಜುವರ್ಜಿಯಿಂದ ಚಿಕಿತ್ಸೆ ನೀಡಲಾಗಿತ್ತು. ಯಾವುದೇ ಆಪರೇಷನ್ ಮಾಡಿಸದೆ ಸಹಜ ಹೆರಿಗೆ ಕ್ರಿಯೆಯನ್ನು ನಡೆಸಲು ಕಾದು ಮೂರು ದಿನಗಳ ನಂತರ ಇನ್ನೊಂದು ಮಗುವಿಗೆ ಜನ್ಮ ನೀಡಲು ಸಾಧ್ಯವಾಯಿತು.
ಮೂರು ದಿನಗಳ ಕಾಲ ಮೇಲ್ವಿಚಾರಣೆ ಮತ್ತು ಮೆಗ್ನೀಸಿಯಮ್ ನೀಡಲಾಯಿತು, ಇದು ಹೆರಿಗೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಅಥವಾ ನಿಲ್ಲಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳಿದ್ದರು. ಹೆರಿಗೆಗೆ ಸಹಾಯ ಮಾಡಿದ ಡಾ ಜೇಮ್ಸ್ ಎಲ್ ಟಾಡ್ವಿಕ್, “ನನ್ನ ವೃತ್ತಿಜೀವನದಲ್ಲಿ ತೀರಾ ಅಪರೂಪದ ಪ್ರಕರಣವಾಗಿದೆ.ಇದು ತುಂಬಾ ಅಸಾಮಾನ್ಯ ಎಂದಿದ್ದಾರೆ.
ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…
ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…