Advertisement
ಸುದ್ದಿಗಳು

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

Share

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ ಗಟ್ಟಿ ನಿರ್ಧಾರಗಳು ಈ ಗಾದೆ ಮಾತನ್ನು ನಿಜವಾಗಿಸುತ್ತಾರೆ. ಅಂತಹವರಲ್ಲಿ ಆಸಿಯಾ ಒಬ್ಬರು. ಉತ್ತರ ಕಾಶ್ಮೀರದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪತಿಯನ್ನು ಕಳೆದುಕೊಂಡು. ಮುಂದೆ ಜೀವನ ಹೇಗೆ ಎಂಬ ಪ್ರಶ್ನೆಗೆ, ತಾನೇ ಕೃಷಿಯ ಮೂಲಕ ಉತ್ತರ ಕಂಡುಕೊಂಡಿದ್ದಾರೆ.

ಆಸಿಯಾ ಅವರ ಬದುಕಿನ  ಹೋರಾಟಗಳು ಅನೇಕರಿಗೆ ಧೈರ್ಯ ತಂದುಕೊಡುತ್ತವೆ.  ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡರು.  ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸಬೇಕಾಯಿತು. 2019 ರಲ್ಲಿ ಬೆಂಕಿಯು ಅವರ ಮನೆಯನ್ನು ನಾಶಮಾಡಿದಾಗ ಅವರ ಸವಾಲುಗಳು ಮತ್ತಷ್ಟು ಹೆಚ್ಚಾದವು. ಸೀಮಿತ ಸಂಪನ್ಮೂಲಗಳು ಮತ್ತು ಕೃಷಿ ಮಾಡಲು ಭೂಮಿ ಇಲ್ಲದ ಕಾರಣ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳು ಮತ್ತು ಸ್ವಯಂ-ಕಲಿಸಿದ ತಂತ್ರಗಳಿಂದ ತಮ್ಮ ಮೇಲ್ಛಾವಣಿಯನ್ನು ಸಣ್ಣ ಪ್ರಮಾಣದ ಸಾವಯವ ಕೃಷಿಯನ್ನು ಪ್ರಾರಂಭಿಸಲು ಬಳಸಿದರು.

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠದಿಂದ, ರೂಪ್ ಟಾಪ್ ತರಕಾರಿ ತೋಟ ಹಾಗೂ ಅಣಬೆ ಕೃಷಿಯನ್ನು ತಮ್ಮ ಬದುಕಿನ ಬಂಡಿಗೆ ಮೂಲಧಾರವಾಗಿಸಿಕೊಂಡಿದ್ದಾರೆ. ಇಂದು ಆಸಿಯಾ ತಿಂಗಳಿಗೆ ರೂ 35,000 ದಿಂದ 40,000 ಆದಾಯ ಗಳಿಸುತ್ತಿದ್ದಾರೆ. 10×10 ಅಡಿ ಕೋಣೆಯಲ್ಲಿ ಅಣಬೆ ಕೃಷಿ ಮಾಡಿದ ಅವರು ಅಣಬೆಗಳಿಂದ ತಯಾರಿಸಿದ ವರ್ಮಿಕಾಂಪೋಸ್ಟ್ ಬಳಸಿ ತರಕಾರಿಗಳನ್ನು ಬೆಳೆಯಲು ನಿರ್ಧರಿಸುತ್ತಾರೆ. ಇವರ ಬಳಿ ಕೃಷಿ ಮಾಡಲು ಬೇಕಾದಷ್ಟು ಭೂಮಿ ಇರದ ಕಾರಣ ಮನೆಯ ಮೇಲ್ಛಾವಣಿಯನ್ನೇ ಕೃಷಿ ಭೂಮಿಯನ್ನಾಗಿಸಿಕೊಂಡಿದ್ದಾರೆ.

ಆಸಿಯಾ ಮನೆಯ ಟೆರೇಸ್ ನಲ್ಲೇ ಅಣಬೆ ಗೊಬ್ಬರ ಬಳಸಿಕೊಂಡು ಕೃಷಿಯಲ್ಲಿ ಪ್ರಯೋಗ ನಡೆಸಲು ಮುಂದಾದರು. ಪ್ಲಾಸ್ಟಿಕ್ ಬುಟ್ಟಿಗಳನ್ನು ಖರೀದಿಸಿ ಅದರಲ್ಲಿ ತರಕಾರಿ ಬೆಳೆಯಲಾರಂಭಿಸಿದರು. ಹೀಗೆ ನಿಧಾನವಾಗಿ ಅವರ ಪ್ರಯೋಗ ಫಲ ನೀಡಿತು. ಮೇಲ್ಛಾವಣಿ ಉದ್ಯಾನ ಅವರ ಪರಿಶ್ರಮಕ್ಕೆ ತಕ್ಕ ಬಹುಮಾನ ತಂದಿತು. ಆರಂಭದಲ್ಲಿ ಕಷ್ಟಗಳು ಎದುರಾದರೂ ನಿಧಾನವಾಗಿ ಸ್ಥಳಿಯ ಬಂಡಿಪೋರಾ ಮಾರುಕಟ್ಟೆಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

Advertisement

ಕೊಲ್ಲಾರ್ಡ್ ಗ್ರೀನ್ಸ್, ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ, ಪಾಲಕ್, ಮೆಣಸಿಕಾಯಿಗಳು, ಟೊಮ್ಯಾಟಿ, ಬೀನ್ಸ್, ಕ್ಯಾರೆಟ್, ಎಲೆಗಳ ಸೊಪ್ಪುಗಳು ಮತ್ತು ವಿವಿಧ ರೀತಿಯ ಮೊಳಕೆಗಳನ್ನು ಒಳಗೊಂಡಂತೆ ವರ್ಷಪೂರ್ತಿ ತರಕಾರಿಗಳನ್ನು ಬೆಳೆಸುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?

 ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…

8 hours ago

‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?

ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…

8 hours ago

2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ

2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…

9 hours ago

ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ

ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…

9 hours ago

ಕೃಷಿ ಭೂಮಿಯಲ್ಲಿರುವ ವಿದ್ಯುತ್ ಕಂಬಕ್ಕೆ ಹೊಸ ನಿಯಮ

ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…

9 hours ago

ಬಿಪಿ ಕಾಯಿಲೆ ಇರುವವರಿಗೆ ಇಲ್ಲಿದೆ ಕೆಲವು ಆರೋಗ್ಯಕರ ಟಿಪ್ಸ್

ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…

9 hours ago