ವಿಧವೆಯರು, ಗಂಡನಿಂದ ದೂರವಾಗಿರುವವರು ಅಥವಾ ಮದುವೆಯಾಗದೆ ಒಬ್ಬಂಟಿಯಾಗಿ ಜೀವಿಸುತ್ತಿರುವ ಮಹಿಳೆರಿಗೆ ಆರ್ಥಿಕ ಭದ್ರತೆ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಮನಸ್ವಿನೀ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ರೂ 800 ಪಿಂಚಣಿ ಸಿಗುತ್ತದೆ. ಮಾತ್ರವಲ್ಲ ವೃದ್ಧಾಪ್ಯ ವೇತನದ ಮಾದರಿಯಲ್ಲೇ ನೇರವಾಗಿ ಫಲಾನುಭವಿಯ ಖಾತೆಗೆ ಜಮೆ ಆಗುತ್ತದೆ. ಈ ಯೋಜನೆಯ ನಿಯಮದ ಪ್ರಕಾರ ಈಗಾಗಲೇ ವಿಧವಾ ವೇತನ, ಅಂಗವಿಕಲ ವೇತನ ಅಥವಾ ಸಂಧ್ಯ ಸುರಕ್ಷ ಪಡೆಯುತ್ತಿರುವವರು ಹಾಗೂ ಮರುಮದುವೆ ಆದವರಿಗೆ ಈ ಪಿಂಚಣಿಯು ಸಿಗುವುದಿಲ್ಲ.
ಬೇಕಾಗುವ ದಾಖಲೆ:
• ಬಿಪಿಎಲ್ ರೇಷನ್ ಕಾರ್ಡ್
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಚುನಾವಣಾ ಗುರುತಿನ ಚೀಟಿ
• ಅವಿವಾಹಿತರಾಗಿದ್ದರೆ-ಮರುಮದುವೆ ಆಗಿಲ್ಲ ಎಂಬ ಪ್ರಮಾಣ ಪತ್ರ
• ವಿಚ್ಛೇದಾರರಿಗೆ- ಗಂಡನಿಂದ ದೂರವಾಗಿರುವ ಪ್ರಮಾಣ ಪತ್ರ
• ಪಾಸ್ಪೋರ್ಟ್ ಅಳತೆಯ ಪೋಟೋ
ಅರ್ಜಿ ಸಲ್ಲಿಸುವ ವಿಧಾನ:
ನಿಮ್ಮ ಹತ್ತಿರದ ನಾಡಕಚೇರಿ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರ ಕ್ಕೇ ಭೇಟಿ ನೀಡಬೇಕು. ಅಲ್ಲಿ ಫಾರಂ ಪಡೆದು ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಆನ್ ಲೈನ್ ವ್ಯವಸ್ಥೆ ಬಂದಿಲ್ಲ.
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…
ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…