The Rural Mirror ವಾರದ ವಿಶೇಷ

ಹೊಸ ಪೀಳಿಗೆಯ ನುರಿತ ಕೃಷಿ ವೃತ್ತಿಪರರಿಗೆ ಶಿಕ್ಷಣ | ಕೃಷಿ ಅಭಿವೃದ್ಧಿ ಕಡೆಗೆ ಕೃಷಿ ವಿಶ್ವವಿದ್ಯಾನಿಲಯಗಳ ಕೆಲಸ |

Share

ಭಾರತೀಯ ಕೃಷಿ ಸಂಶೋಧನಾ ಮಂಡಳಿ ಏನು ಮಾಡುತ್ತಿದೆ..? ವಿಜ್ಞಾನಿಗಳು ಏನು ಮಾಡುತ್ತಿದ್ದಾರೆ..? ಕೃಷಿ ಸಂಸ್ಥೆಗಳು ಏನು ಮಾಡುತ್ತಿವೆ…? ಅನೇಕ ಪ್ರಶ್ನೆಗಳು. ಅಷ್ಟೇ ಅಲ್ಲ…. ಅನೇಕ ವರ್ಷಗಳಿಂದ ಈ ಸಂಸ್ಥೆಗಳು ಜನರ ದುಡ್ಡನ್ನು ತಿಂದಿವೆ, ಮುಚ್ಚಿ ಹಾಕಿ ಅದನ್ನು… ಎಂದೂ ಅನೇಕರು ಬೊಬ್ಬೆಯನ್ನೂ ಹೊಡೆಯುತ್ತಾರೆ. ಈ ನಡುವೆ, ಹೀಗೇ ಬೊಬ್ಬೆ ಹೊಡೆಯದೆ, ಸಂಸ್ಥೆಗಳ ಜೊತೆ ಸೇರಿ ಕೃಷಿ ಅಭಿವೃದ್ಧಿಗೆ ಕೆಲಸ ಮಾಡುವ ಅನೇಕ ತಂಡಗಳು ಇವೆ. ಭಾರತದಲ್ಲಿ ಹಲವು ಕಾರಣಗಳಿಂದ ಕೃಷಿ ಕ್ಷೇತ್ರ ಬೆಳವಣಿಗೆ ಕಾಣುತ್ತಿಲ್ಲ. ಆ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ನಡೆಯುತ್ತಿದೆ. ಇದರ ಹಲವು ಹೆಜ್ಜೆಗಳು ಈಗಾಗಲೇ ಸಾಗಿದೆ. ಇದೀಗ ಕೃಷಿ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಅದರ ಜೊತೆಗೆ ವಿಶ್ವ ಬ್ಯಾಂಕ್ ಮತ್ತು ಐಸಿಎಆರ್ ಮೂಲಕ  ಹೊಸ ಪೀಳಿಗೆಯ ನುರಿತ ಕೃಷಿ ವೃತ್ತಿಪರರಿಗೆ ಶಿಕ್ಷಣ ನೀಡುವ ಕೆಲಸ ಆರಂಭವಾಗಿದೆ.

ಕೃಷಿ ಪ್ರಧಾನವಾದ ದೇಶ ಭಾರತ. ಇಲ್ಲಿ ಕೃಷಿ ಲಾಭದಾಯಕವಾಗುವುದರಲ್ಲಿ ಸೋಲುತ್ತಿದೆ. ಅನೇಕ  ಕುಸಿತವನ್ನು ಕಂಡಿದೆ, ಸವಾಲುಗಳನ್ನು ಎದುರಿಸುತ್ತಿದೆ. ಇದನ್ನು ಪರಿಹರಿಸಲು, ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ವಿಶ್ವಬ್ಯಾಂಕ್‌ನ ಬೆಂಬಲದೊಂದಿಗೆ ಹೊಸ ಪೀಳಿಗೆಯ ನುರಿತ ವೃತ್ತಿಪರರನ್ನು ರಚಿಸಲು ಕೃಷಿ ಶಿಕ್ಷಣವನ್ನು ಉನ್ನತೀಕರಣಗೊಳಿಸುತ್ತಿದೆ. ಈ ವೃತ್ತಿಪರರು ಮುಂದಿನ ಹಸಿರು ಕ್ರಾಂತಿಯನ್ನು, ಕೃಷಿ ಕ್ರಾಂತಿಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದ್ದಾರೆ, ಕೃಷಿಯನ್ನು ಹೆಚ್ಚು ಉತ್ಪಾದಕ, ಲಾಭದಾಯಕ ಮತ್ತು ಹವಾಮಾನ ವೈಪರೀತ್ಯ ಎದುರಿಸುವತ್ತ ಗಮನಹರಿಸುತ್ತಾರೆ.

77 ಕೃಷಿ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮವನ್ನು ವಿಶ್ವದ ಗುಣಮಟ್ಟವನ್ನು ಪೂರೈಸಲು ಗಮನಹರಿಸಲಾಗಿದೆ. ವಿದ್ಯಾರ್ಥಿಗಳು ಈಗ ಅತ್ಯಾಧುನಿಕ ಲ್ಯಾಬ್‌ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ಜಿಪಿಎಸ್, ಡ್ರೋನ್‌ಗಳು, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳು, ಡೇಟಾ ಅನಾಲಿಟಿಕ್ಸ್, ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಕೃಷಿಯಲ್ಲಿ ಬಳಸಲು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉನ್ನತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶಿಕ್ಷಕರಿಂದ ಕಲಿಯಲು ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶವನ್ನು ನೀಡುತ್ತಿದೆ.

2017 ರಿಂದ 2024 ರ ನಡುವೆ, ವಿಶ್ವಬ್ಯಾಂಕ್‌ನ ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆಯು ಕೃಷಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ನೆರವು ನೀಡಿದೆ. 77 ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ 5,14,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ವಾರ್ಷಿಕ ದಾಖಲಾತಿಗಳು 25,000 ದಿಂದ 64,000 ಕ್ಕೆ ಹೆಚ್ಚಳಗೊಂಡಿದೆ.  ಅವರಲ್ಲಿ 45% ಹುಡುಗಿಯರು.

ಈ ಪ್ರಗತಿಯು ಕೃಷಿ ಭವಿಷ್ಯವನ್ನು ಇನ್ನಷ್ಟು ಸುಧಾರಿಸುವ ನಿರೀಕ್ಷೆ ಇದೆ. ಭಾರತದ ಪರಿಷ್ಕೃತ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಗ್ರಾಮೀಣ ಭಾರತವನ್ನು ಪರಿವರ್ತಿಸಲು ಮತ್ತು ಭವಿಷ್ಯದಲ್ಲಿ ದೇಶದ ಆಹಾರ ಭದ್ರತೆಯನ್ನು, ಕೃಷಿಯನ್ನು ಅಭಿವೃದ್ಧಿಪಡಿಸುವುದಲ್ಲಿ ಎರಡು ಮಾತಿಲ್ಲ.

ಹೀಗಾಗಿ ಈಗ ಕೃಷಿಯಲ್ಲಿ ತೊಡಗಿಕೊಳ್ಳುವ ಹಾಗೂ ಕೃಷಿಯಲ್ಲಿ ಆಸಕ್ತಿ ಇರುವ ಯುವಕರು ಯಾರೂ ಕೂಡಾ ಕೃಷಿ ಸಂಸ್ಥೆಗಳನ್ನು ವಿಜ್ಞಾನಿಗಳನ್ನು ಅನಗತ್ಯವಾಗಿ ಟೀಕಿಸುವ, ನಿಂದಿಸುವ ಕೆಲಸ ಮಾಡಬಾರದು. ಏಕೆಂದರೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಯುವ ಕೃಷಿ ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳನ್ನು ಕಲಿಯುತ್ತಾರೆ. ಭವಿಷ್ಯದ ಕೃಷಿಯನ್ನು ಸರಳೀಕರಣಗೊಳಿಸಲು ಅವರು ಮುಂದೆ ಬರುವಾಗ ತೀರಾ ನಿರ್ಲಕ್ಷ್ಯ ಮಾಡಿದರೆ ಭಾರತದ ಕೃಷಿ ಪ್ರತಿಭೆಗಳೂ ವಿದೇಶಗಳಿಗೆ ನೆರವಾಗಬಹುದು. ಅದರ ಬದಲಾಗಿ ಹೇಗೆ ಕೆಲಸ ಮಾಡಿಸಬಹುದು ಎಂಬುದರ ಕಡೆಗೆ ಇರಲಿ ಗಮನ.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ

ಗುಜ್ಜೆ ಶೇಂಗಾ ಪಲ್ಯ ಮಾಡುವ ವಿಧಾನ...

1 hour ago

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |

ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…

9 hours ago

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

9 hours ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

9 hours ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

1 day ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

1 day ago