Advertisement
MIRROR FOCUS

ರೈತರು ಸ್ವಾವಲಂಬಿ ಬದುಕು | ವೈಜ್ಞಾನಿಕ ಜೇನು ಬೇಸಾಯ ಕುರಿತ ಕಾರ್ಯಾಗಾರ |

Share

ರಾಷ್ಟ್ರೀಯ ಜೇನು ಮಂಡಳಿ  ಹಾಗೂ  ತೋಟಗಾರಿಕಾ ಇಲಾಖೆ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ  ವೈಜ್ಞಾನಿಕ ಜೇನು ಬೇಸಾಯ ಕುರಿತ ಕಾರ್ಯಾಗಾರ ನಡೆಯಿತು.………ಮುಂದೆ ಓದಿ……..

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಶಾಸಕ   ಶಿವರಾಮ್ ಹೆಬ್ಬಾರ್, ವೈಜ್ಞಾನಿಕ ಪದ್ಧತಿಯಲ್ಲಿ ಅಡಿಕೆಯಂತಹ ಬೆಳೆಯನ್ನು ಎಲ್ಲೆಡೆಯೂ ಬೆಳೆಯಲಾಗುತ್ತಿದೆ .ರೈತರು ಸುಲಭ ಬೆಳೆಗೆ ಮಾರು ಹೋಗಿದ್ದಾರೆ. ಆರ್ಥಿಕವಾಗಿ ಗಟ್ಟಿಯಾಗುವ ಬೆಳೆಗಳನ್ನು ಅಳವಡಿಸಿಕೊಂಡಿಲ್ಲ .ರೈತರು ತಮ್ಮ ಕೃಷಿಯಲ್ಲಿ ಜೇನಿನ ಪರ್ಯಾಯ ಬೆಳೆಯನ್ನು ಬೆಳೆದು ಆರ್ಥಿಕವಾಗಿ  ಲಾಭ  ಮಾಡಿಕೊಳ್ಳಬೇಕಿದೆ.  ಇಂತಹ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ  ಸ್ವಾವಲಂಬಿ ಬದುಕು  ಕಟ್ಟಿಕೊಳ್ಳಬೇಕಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಪಿ. ಸತೀಶ್ ಜೇನು ಸಾಕಣೆ ಕುರಿತಂತೆ  ಮಾಹಿತಿ ನೀಡಿ, ಪರಕೀಯ ಪರಾಗ ಸ್ಪರ್ಶ ಆಗುವ ಬೆಳೆಗಳಲ್ಲಿ ಶೇಕಡ 70ರಷ್ಟು  ಪರಾಗಸ್ಪರ್ಶ ಜೇನಿನಿಂದಲೇ  ಆಗಲಿದೆ.  ಪರಾಗ ಸ್ಪರ್ಶದಿಂದಾಗುವ ಕೊರತೆಯಿಂದ  ಸುಮಾರು 6 ಸಾವಿರ ಕೋಟಿ ರೂಪಾಯಿಯಷ್ಟು ಬೆಳೆ  ಹಾನಿಯಾಗುತ್ತಿದ್ದು ,  ಅದನ್ನು ತಡೆಯುವಲ್ಲಿ ಜೇನು  ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿ  ಡಾ. ಕೆ.ಟಿ. ವಿಜಯ ಕುಮಾರ್, ಜೇನು ಕೃಷಿ ಮಾಡುವ ಸಮಯದಲ್ಲಿ ಜೇನು ಮತ್ತು ಅವುಗಳ ಜೀವನ ಕ್ರಮದ ಬಗ್ಗೆ  ತಿಳಿದುಕೊಂಡರೆ ಜೇನು ಕೃಷಿ ಸುಲಭವಾಗಲಿದೆ. ಜೇನಿನಲ್ಲಿಯೂ ಬೇರೆ ಬೇರೆ ಪ್ರಬೇಧಗಳಿವೆ. ಅದರ ಬಗ್ಗೆಯೂ ತಿಳಿದುಕೊಂಡು ವಾತಾವರಣಕ್ಕೆ ತಕ್ಕಂತೆ  ಕೃಷಿ  ಮಾಡಬೇಕಾಗಿದೆ ಎಂದು ಹೇಳಿದರು.

ಐದಾರು ವರ್ಷಗಳಿಂದ ತೋಟಗಾರಿಕಾ ಇಲಾಖೆಯ ಸಹಾಯ ಧನದಲ್ಲಿ ಜೇನು ಸಾಕಣೆ ಮಾಡುತ್ತಿದ್ದು, ಇದರಿಂದ ಆರ್ಥಿಕವಾಗಿ ಲಾಭವಾಗಿದೆ.  ಜೇನು ಸಾಕಣಿಕೆಗೆ ಸರ್ಕಾರ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಕೃಷಿಕ  ತಿಮ್ಮಣ್ಣ ಭಟ್ ಹೇಳಿದರು. ಕಳೆದ ಸಾಲಿನಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ  10 ಜೇನು ಪೆಟ್ಟಿಗೆಗಳನ್ನು ಪಡೆದು ಅದರಿಂದ  ಲಾಭ  ಮಾಡಿಕೊಳ್ಳಲಾಗಿದೆ. ಸರ್ಕಾರದ ಇಂತಹ ಯೋಜನೆಗಳು ಜೇನು ಕೃಷಿಕರಿಗೆ ಅನುಕೂಲವಾಗಲಿದೆ ಎಂದು ಕೃಷಿಕ ಎನ್. ಐ. ಕುಮಾರ್ ಹೇಳುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

15 hours ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

23 hours ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

1 day ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

2 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

2 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

2 days ago