Advertisement
ಸುದ್ದಿಗಳು

ವಿಕಸಿತ ಭಾರತ ನಿರ್ಮಾಣಕ್ಕೆ ಯೋಜನೆಗಳು ಸಿದ್ಧ| ಕೃಷಿ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ನಿರೀಕ್ಷೆ

Share

ಮುಂದಿನ 25 ವರ್ಷಗಳಲ್ಲಿ  ವಿಕಸಿತ ಭಾರತ ನಿರ್ಮಾಣಕ್ಕೆ  ಅಗತ್ಯವಾದ  ಯೋಜನೆಗಳನ್ನು ಹಣಕಾಸು ಆಯೋಗವು ರೂಪಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.………ಮುಂದೆ ಓದಿ……..

ಚೆನ್ನೈನಲ್ಲಿ  ನಾಗರಿಕ ವೇದಿಕೆ  ಏರ್ಪಡಿಸಿದ್ದ ಸಂವಾದದಲ್ಲಿ ಕಾರ್ಯಕ್ರಮದಲ್ಲಿ  ಅವರು ಪಾಲ್ಗೊಂಡಿದ್ದರು. ಅಮೆರಿಕಾದ  ತೆರಿಗೆ ನೀತಿ,  ಉಕ್ರೇನ್ ಯುದ್ಧ, ಚೈನಾದ  ವ್ಯಾಪಾರ ವ್ಯವಹಾರಗಳು ಸೇರಿದಂತೆ  ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು  ಯುವಪೀಳಿಗೆಯನ್ನು  ಸನ್ನದ್ಧಗೊಳಿಸಬೇಕಾಗಿದೆ. ಅದಕ್ಕಾಗಿ  ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲು ಸಹ ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ದೇಶದ ಎಲ್ಲ ಜಿಲ್ಲೆಗಳಲ್ಲೂ  ಕ್ಯಾನ್ಸರ್ ನಿಗಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ.  ಕೃಷಿ ಕ್ಷೇತ್ರದಲ್ಲೂ  ಗಣನೀಯ ಅಭಿವೃದ್ಧಿಯನ್ನು ನಿರೀಕ್ಷಿಸಲಾಗಿದ್ದು, ದೇಶದ ಸುಮಾರು 112  ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ  ಕೃಷಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ.  ದೇಶದ ಹಿಂದುಳಿದಿರುವ 109 ಜಿಲ್ಲೆಗಳಲ್ಲಿ  ಕೃಷಿ  ಉತ್ಪಾದನೆಯನ್ನು  ಹೆಚ್ಚಿಸಬೇಕೆಂದು  ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಿಸಿದ್ದಾರೆ. ಇದಲ್ಲದೆ,  ಕೃತಕಬುದ್ಧಿಮತ್ತೆ ಹಾಗೂ ಹೊಸ ಸಂಶೋಧನೆಗಳಿಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ  ಕೇಂದ್ರ ಸರ್ಕಾರದ ಹಲವು ಯೋಜನೆಗಳಿಂದ ತಮಿಳುನಾಡಿಗೂ ಸಾಕಷ್ಟು ಅನುಕೂಲವಾಗಿದೆ. ಜನ್ ಧನ್ ಯೋಜನೆಯಿಂದ  12 ಲಕ್ಷ ಜನರಿಗೆ  ಅನುಕೂಲವಾದರೆ ಸುಮಾರು 89 ಲಕ್ಷ ಕುಟುಂಬಗಳಿಗೆ ಹೊಸ ನೀರಿನ ಸಂಪರ್ಕಗಳು ದೊರೆತಿವೆ. 41 ಲಕ್ಷ ಜನರಿಗೆ  ಅಡುಗೆ ಅನಿಲ  ಸಿಲಿಂಡರ್  ಸಂಪರ್ಕಗಳ ಸಹಾಯಧನ ಯೋಜನೆ ದೊರೆತಿದೆ ಎಂದು ಅವರು ಹೇಳಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

1 hour ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

3 hours ago

ಜಾನುವಾರುಗಳ ಮೇವಿಗಾಗಿ ₹25 ಕೋಟಿ ಬಿಡುಗಡೆ

ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…

9 hours ago

ಬೆಂಗಳೂರಿನ ಐಐಎಂನಲ್ಲಿ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’ ಅಧ್ಯಯನ ವರದಿ ಬಿಡುಗಡೆ

ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…

9 hours ago

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ

ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…

17 hours ago

ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ

ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…

17 hours ago