ಅನುಕ್ರಮ

ಇಂದು ವಿಶ್ವ ಪುಸ್ತಕ ದಿನ | ಪುಸ್ತಕ ಓದೋಣ… ಉತ್ತಮ ಸ್ನೇಹಿತನ ಆಯ್ಕೆ ಮಾಡೋಣ… |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಮಯವಿದ್ದಾಗ ಓದುವುದಕ್ಕಿಂತ ಸಮಯ ಮಾಡಿಕೊಂಡು ಓದುವುದು ಉತ್ತಮ ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರು ಏಕಾಂಗಿತನವನ್ನು ಯಾವತ್ತೂ ಅನುಭವಿಸಲಾರರು. ಜೀವನದಲ್ಲಿ ಉತ್ತಮ ಸ್ನೇಹಿತ ಅಂತ ಇರುವುದಾದರೆ ಅವುಗಳು ಪುಸ್ತಕಗಳೇ ಸರಿ. ಪುಸ್ತಕ ಓದುವಿಕೆ ಸಂತೋಷ, ಮಾನಸಿಕ ನೆಮ್ಮದಿ, ಜ್ಞಾನ, ವೃಧ್ದಿಸುವ ಶಬ್ದಭಂಡಾರ, ಭಾಷಾ ಕೌಶಲ್ಯ ಎಲ್ಲವನ್ನೂ ಕೊಡುತ್ತದೆ . ಪ್ರತಿಯಾಗಿ ನಮ್ಮ ಸಮಯವನ್ನು ಮಾತ್ರ ಬಯಸುತ್ತದೆ.

Advertisement
ಓದು ಅವರವರ ಭಾವಕ್ಕೆ , ಆಯ್ಕೆಯ ಮೇಲೆ ಅವಲಂಬಿತ. ಇಲ್ಲಿ ನಮ್ಮ ಆರಿಸುವ ಜಾಣ್ಮೆ ಮುಖ್ಯವಾಗಿರುತ್ತವೆ. ಎಷ್ಟೋ ಒಳ್ಳೆಯ ಪುಸ್ತಕ ಗಳು ಓದುಗರನ್ನು ತಲುಪದೇ ಇರಬಹುದು. ಗಡಿಬಿಡಿಯಲ್ಲಿ ನಾವು ಯಾವತ್ತೂ ಗ್ರಂಥಾಲಯ ಅಥವಾ ಪುಸ್ತಕಗಳ ಅಂಗಡಿಗೆ ಹೋಗಬಾರದು. ಬಹಳಷ್ಟು ಸಮಯ ನಮಗೆ ಇದ್ದಾಗ ತಾಳ್ಮೆಯಿಂದ ಆಯ್ಕೆ ಮಾಡಬಹುದು. ಓದುಗ ವರ್ಗ ಇಂದು ವಿಸ್ತಾರವಾಗಿದೆ, ಆಯ್ಕೆಯೂ ಕೂಡ. ಎಲ್ಲಾ ವಿಭಾಗಗಳಲ್ಲೂ ಸಾಕಷ್ಟು ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಮನರಂಜನೆ, ಜ್ಞಾನವರ್ಧನೆಗಾಗಿ, ಆರೋಗ್ಯ ಸಂಬಂದಿ, ವೈಜ್ಞಾನಿಕ, ತಂತ್ರಜ್ಞಾನ, ಮಕ್ಕಳ ಪುಸ್ತಕಗಳು ಅಲ್ಲದೆ ಇನ್ನೂ ಬೇಕಾದಷ್ಟು ರೀತಿಯ ಪುಸ್ತಕ ಗಳು ಪ್ರಕಟವಾಗುತ್ತಿವೆ. ಓದುಗ ವರ್ಗವೂ ಬೆಳೆಯುತ್ತಿರುವುದು ಸಂತಸದ ಸಂಗತಿ.
1995 ರಲ್ಲಿ ಯುನೆಸ್ಕೋ ಮೊದಲ ಬಾರಿಗೆ ವಿಶ್ವ ಪುಸ್ತಕ ದಿನಾಚರಣೆಯ ಘೋಷಣೆ ಮಾಡಿತು. ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯ ಗಳ ಬಗ್ಗೆ ಅರಿವು ಮತ್ತು ಪ್ರಚಾರ ಇದರ ಉದ್ದೇಶ.

ಬನ್ನಿ ಪುಸ್ತಕ ಓದೋಣ. “ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕ, ಪ್ರತಿವರ್ಷ ವೂ ಒಂದು ಅಧ್ಯಾಯ”

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ 

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ

ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

2 hours ago

ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ

ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…

3 hours ago

ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ

ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…

3 hours ago

ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ

ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…

24 hours ago

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

1 day ago

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ

ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…

1 day ago