Advertisement
MIRROR FOCUS

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

Share

ಹವಾಮಾನ ಬದಲಾವಣೆ ಸೇರಿದಂತೆ ಅನಿಶ್ಚಿತತೆಗಳ ನಡುವೆ ಆಹಾರ, ಇಂಧನ ಮತ್ತು ಜೀವನೋಪಾಯ ಭದ್ರತೆಗೆ ತೆಂಗು ಪ್ರಮುಖ ಬೆಳೆ ಎಂಬ ಸಂದೇಶದೊಂದಿಗೆ ವಿಶ್ವ ತೆಂಗು ದಿನ–2026 ಕಾಸರಗೋಡಿನ ICAR-CPCRIನಲ್ಲಿ ಸೆ.2 ರಂದು ಆಚರಿಸಲಾಯಿತು. “Coconuts in times of uncertainty: Securing food, energy, and livelihoods” ಈ ವರ್ಷದ ಘೋಷವಾಕ್ಯವಾಗಿತ್ತು.

ಕಾರ್ಯಕ್ರಮದಲ್ಲಿ SHITIJ 2.0 ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಬೆಳೆಗಾರರ ಸಭೆಗೆ ಚಾಲನೆ ನೀಡಲಾಯಿತು. ತೆಂಗಿನ ಮೌಲ್ಯವರ್ಧನೆ, ಹೊಸ ತಂತ್ರಜ್ಞಾನಗಳ ವಾಣಿಜ್ಯೀಕರಣ ಮತ್ತು ಕೃಷಿ ಸ್ಟಾರ್ಟ್‌ಅಪ್‌ಗಳ ಮೂಲಕ ರೈತರ ಆದಾಯ ಹೆಚ್ಚಿಸುವ ಕುರಿತು ಚರ್ಚೆಗಳು ನಡೆದವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಪಿಸಿಆರ್‌ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್, ಹವಾಮಾನ ಬದಲಾವಣೆಯಿಂದ ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ವಿವರಿಸಿದರು. ಹವಾಮಾನ ಬದಲಾವಣೆಯೊಂದಿಗೆ ಕೀಟ ಮತ್ತು ರೋಗಗಳಂತಹ ಸಮಸ್ಯೆಗಳೂ ಹೆಚ್ಚುತ್ತಿದ್ದು, ಸಂಶೋಧನಾ ಸಂಸ್ಥೆಗಳು, ಉದ್ಯಮಿಗಳು ಮತ್ತು ರೈತರ ಸಹಯೋಗದಿಂದ ಇವುಗಳನ್ನು ಎದುರಿಸಬೇಕಿದೆ ಎಂದು ಹೇಳಿದರು.  ಸಿಪಿಸಿಆರ್‌ಐ ಅಭಿವೃದ್ಧಿಪಡಿಸಿರುವ ತಳಿಗಳು ಮತ್ತು ತಂತ್ರಜ್ಞಾನಗಳನ್ನು ತೋಟಗಾರಿಕಾ ಕ್ಷೇತ್ರಕ್ಕೆ ತಲುಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನರ್ಸರಿ ಉದ್ಯಮಿಗಳಿಗೆ ತಳಿಗಳ ಪರವಾನಗಿ ನೀಡುವ ಮೂಲಕ ಬೇಡಿಕೆ ಪೂರೈಸಲಾಗುತ್ತಿದೆ ಎಂದರು.

 ರೈತರ ಕಲ್ಪನೆಯನ್ನು ಉದ್ಯಮವಾಗಿಸುವ SHITIJ 2.0 : ಸಿಪಿಸಿಆರ್‌ಐ ಸಾಮಾಜಿಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ. ಪೊನ್ನುಸ್ವಾಮಿ SHITIJ 2.0 ಕಾರ್ಯಕ್ರಮವನ್ನು ವಿವರಿಸಿದರು. ಸುಮಾರು 400 ಮಂದಿ SHITIJ 2.0ಗೆ ನೋಂದಣಿ ಮಾಡಿಕೊಂಡಿದ್ದಾರೆ.  ಏಳು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳಲ್ಲಿ ಕೃಷಿ ಸ್ಟಾರ್ಟ್‌ಅಪ್  ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು SHITIJ 2.0 ಅನುಷ್ಠಾನದ ಮಾರ್ಗಸೂಚಿ ರೂಪಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ನಿಟ್ಟೆಯ ಮಾಜಿ ಕುಲಪತಿ ಹಾಗೂ ಉಪಾಧ್ಯಕ್ಷ ಪ್ರೊ. ಡಾ. ಬಿ. ಸತೀಶ್ ಕುಮಾರ್ ಭಂಡಾರಿ ಆನ್‌ಲೈನ್ ಪೂರ್ವ-ಇನ್‌ಕ್ಯುಬೇಷನ್ ಕಾರ್ಯಕ್ರಮವಾದ SHITIJ 2.0ಗೆ ಚಾಲನೆ ನೀಡಿ, ಮೌಲ್ಯವರ್ಧಿತ ತಂತ್ರಜ್ಞಾನಗಳನ್ನು ಬಳಸಿಕೊಂಡರೆ ಒಂದೇ ತೆಂಗಿನ ಮರದಿಂದ ಸುಮಾರು ₹10,000 ಗಳಿಸುವ ಸಾಧ್ಯತೆ ಇದೆ ಎಂಬುದನ್ನು ಅವರು ಹೇಳಿದರು.  ಆದರೆ ಯಶಸ್ಸಿಗೆ ವಿವಿಧ ಸಂಸ್ಥೆಗಳು ಮತ್ತು ಉದ್ಯಮಿಗಳ ನಡುವಿನ ಸಹಯೋಗ ಅತ್ಯಗತ್ಯ ಎಂದರು.

ಕರ್ನಾಟಕದ ಇಬ್ಬರು ತೆಂಗು ರೈತರಿಗೆ ಗೌರವ : ವಿಶ್ವ ತೆಂಗು ದಿನದ ಅಂಗವಾಗಿ ವಿವಿಧ ರಾಜ್ಯಗಳ ಇಬ್ಬರು  ರೈತರನ್ನು ಸನ್ಮಾನಿಸಲಾಯಿತು. ಚಿತ್ರದುರ್ಗದ ರುದ್ರೇಶ್ ಎಚ್.ಎ. ಹಾಗೂ ತುಮಕೂರಿನ ಪಿ.ಎನ್. ನಟರಾಜು ಮತ್ತು ತಮಿಳುನಾಡು, ಕೇರಳ, ಆಂಧ್ರಪ್ರದೇಶದ ತಲಾ ಇಬ್ಬರು ರೈತರಿಗೂ ಗೌರವ ನೀಡಲಾಯಿತು. ಕಾಸರಗೋಡಿನ  ಶ್ರೀಲತಾ ಟಿ.ಕೆ. ಹಾಗೂ ಮಲಪ್ಪುರಂನ ಅಬ್ದುಲ್ ಗಫೂರ್ ಅವರನ್ನು ಯಶಸ್ವಿ ಉದ್ಯಮಿಗಳಾಗಿ ಸನ್ಮಾನಿಸಲಾಯಿತು.

ತೆಂಗಿನ ಮೌಲ್ಯವರ್ಧನೆಗೆ ಉದ್ಯಮದ ಸಂಪರ್ಕ :  ಸಿಪಿಸಿಆರ್‌ಐ  ಮತ್ತು ಉದ್ಯಮ ಪಾಲುದಾರರ ನಡುವೆ ಹಲವು ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕಾಗಿ MoUಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಇದರಲ್ಲಿ ವರ್ಜಿನ್ ಕೊಕೊನಟ್ ಆಯಿಲ್, ತೆಂಗಿನ ಚಿಪ್ಸ್, ಫ್ಲೇವರ್ಡ್ ಕೊಕೊನಟ್ ಮಿಲ್ಕ್, ಫೋಮ್ ಮ್ಯಾಟ್ ಡ್ರೈಡ್ ಕೊಕೊನಟ್ ಮಿಲ್ಕ್ ಸೇರಿದಂತೆ ಹಲವು ಉತ್ಪನ್ನ ತಂತ್ರಜ್ಞಾನಗಳು ಸೇರಿವೆ. ಕರ್ನಾಟಕದಿಂದ ಬ್ರಹ್ಮಾವರದ ಸಂತೋಷ್ ವಿ. ಶೆಟ್ಟಿ ಅವರೊಂದಿಗೆ Flavoured Coconut Milk ಹಾಗೂ ಉಡುಪಿ ಕಲ್ಪರಸ ತೆಂಗು ಮತ್ತು ಎಲ್ಲಾ ಸಾಂಬಾರ ಪದಾರ್ಥಗಳ ಉತ್ಪಾದಕರ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಉಡುಪ ಅವರೊಂದಿಗೆ Foam Mat Dried Coconut Milk ತಂತ್ರಜ್ಞಾನಕ್ಕೆ ಸಂಬಂಧಿಸಿದ MoU ವಿನಿಮಯ ನಡೆಯಿತು. ಬೈಂದೂರಿನ ಕೆ. ಅನಂತ ಪದ್ಮನಾಭ ಉಡುಪ ಅವರೊಂದಿಗೆ Coconut Chips ತಂತ್ರಜ್ಞಾನಕ್ಕೂ ಒಪ್ಪಂದ ಮಾಡಿಕೊಳ್ಳಲಾಯಿತು.

 ಹೊಸ ಉತ್ಪನ್ನಗಳು, ಪ್ರಕಟಣೆಗಳ ಬಿಡುಗಡೆ : ಕಾರ್ಯಕ್ರಮದಲ್ಲಿ Kalpa Composite Flour (CMR ಆಧಾರಿತ ಉತ್ಪನ್ನಗಳು) ಬಿಡುಗಡೆ ಮಾಡಲಾಯಿತು. Cocoaಗೆ Good Horticultural Practices ಕುರಿತ ಪುಸ್ತಕ, ISPC Newsletter, Balanced Nutrient Management ಕುರಿತ ಕರಪತ್ರ ಹಾಗೂ ಅಡಿಕೆಯಲ್ಲಿ ಬಿಳಿ ಹುಳು ನಿರ್ವಹಣೆಗೆ EPN ಕುರಿತ ಕನ್ನಡ ವಿಸ್ತರಣಾ ಕರಪತ್ರ ಸೇರಿದಂತೆ ಹಲವು ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕದ Abhijnana Food Products Ltd. (NITYA)ನ ರಾಧಾಕೃಷ್ಣ ಅವರು ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದರು.

ಹವಾಮಾನ ಅನಿಶ್ಚಿತತೆ ಎದುರಿಸಲು ತೋಟಗಾರಿಕೆಗೆ ಹೊಸ ಚಿಂತನೆ :  ಬೆಂಗಳೂರಿನ Indian Institute of Plantation Management ನಿರ್ದೇಶಕ ಡಾ. ಎಸ್. ಸೆಂಥಿಲ್ ವಿನಾಯಗಂ ಬೆಳೆಗಾರರ ಸಣೆ ಉದ್ಘಾಟಿಸಿದರು. ತೋಟಗಾರಿಕಾ ಬೆಳೆಗಳು ಎದುರಿಸುತ್ತಿರುವ ತೀವ್ರ ಹವಾಮಾನ ಅಪಾಯಗಳನ್ನು ನಿರ್ವಹಿಸುವ ಕುರಿತು ಸಭೆಯಲ್ಲಿ ಗಮನ ಹರಿಸಲಾಯಿತು.

The Rural Mirror ವಿಶ್ಲೇಷಣೆ: ವಿಶ್ವ ತೆಂಗು ದಿನ–2026 ಮೂಲಕ ತೆಂಗಿನ ಕಾಯಿಯನ್ನು ಹಲವು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ರೈತರ ಆದಾಯ ಹೆಚ್ಚಿಸುವುದು. SHITIJ 2.0ನಂತಹ ಇನ್‌ಕ್ಯುಬೇಷನ್ ಕಾರ್ಯಕ್ರಮಗಳು ರೈತರ ಉತ್ಪನ್ನಗಳನ್ನು ಮಾರುಕಟ್ಟೆ ಆಧಾರಿತ ಉದ್ಯಮಗಳಾಗಿ ರೂಪಿಸಲು ನೆರವಾದರೆ, ತೆಂಗು ಕೃಷಿ ಕೇವಲ ಕಚ್ಚಾ ಉತ್ಪನ್ನದ ಮಾರಾಟದಿಂದ ಹೊರಬಂದು ಗ್ರಾಮೀಣ ಉದ್ಯಮಶೀಲತೆಗೆ ದೊಡ್ಡ ಅವಕಾಶವಾಗಬಹುದು. ಬೆಳೆಗಾರರಿಗೂ ಹೆಚ್ಚು ಅನುಕೂಲವಾಗಬಹುದು. ಈ ನಿಟ್ಟಿನಲ್ಲಿ ಈ ಬಾರಿಯ ವಿಶ್ವತೆಂಗು ದಿನ ಗಮನ ಸೆಳೆದಿದೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

World Coconut Day 2026 was celebrated at ICAR-CPCRI, Kasaragod, with the theme “Coconuts in times of uncertainty: Securing food, energy, and livelihoods.” SHITIJ 2.0, a pre-incubation programme aimed at transforming agricultural ideas into innovations and enterprises, was launched. The event also honoured leading coconut farmers, promoted technology commercialisation through MoUs and highlighted value-added coconut products. Speakers stressed climate resilience, collaboration and entrepreneurship as key to strengthening the coconut sector.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

6 hours ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

12 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

21 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

1 day ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

1 day ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

2 days ago