Advertisement
MIRROR FOCUS

ಪರಿಸರ ದಿನಕ್ಕೊಂದು ನಮನ | ಹಸಿರಾಗಲಿ ಪರಿಸರ…. ಹಸಿರಾಗಿರಲಿ ಮನಸು….

Share
ಎರಡು ಸುಂದರವಾದ ದೃಶ್ಯ ಗಳ ಚಿತ್ರಣ.‌ ವ್ಯತ್ಯಾಸ ಇಷ್ಟೇ,  ಒಂದು ಹಳ್ಳಿಪ್ರದೇಶದ್ದು, ಇನ್ನೊಂದು  ನಗರ ಪ್ರದೇಶದ್ದು.  ನೋಡಲು ಎರಡು ಚೆಂದವೇ . ಆದರೆ ಮನಸಿಗೆ ಆಪ್ತವಾಗುವುದು  ಹಸಿರಿನ ಹಳ್ಳಿ ಚಿತ್ರವೇ.
ಪರಿಸರ ನಮಗೇನೆಲ್ಲಾ ಕೊಟ್ಟಿದೆ. ತನ್ನೊಳಗಿರುವುದನ್ನೇಲ್ಲಾ ಬಗೆಬಗೆದೇ ಕೊಟ್ಟಾಗಿದೆ. ಶುದ್ಧ ಗಾಳಿ, ನೀರು, ಫಲವತ್ತಾದ ಮಣ್ಣು ಎಲ್ಲವನ್ನೂ  ನಮಗೆ ಕೊಟ್ಟಿದೆ. ಇದರ ಮಡಿಲಲ್ಲಿ ನಮ್ಮನ್ನು ಮಕ್ಕಳಂತೆ ಸಲಹುತ್ತಿದೆ.  ಆದರೆ ನಾವು ಕೊಟ್ಟದ್ದಾದರೂ ಏನು?   ಬರೀ ನೋವನ್ನು.   ನಮ್ಮ ಸುಂದರ ಪರಿಸರ  ನಿರಂತರ ದಬ್ಬಾಳಿಕೆಗೆ  ನಲುಗಿ ಹೋಗಿದೆ.  ಯಾವ ರೀತಿ ರೀತಿ ಎಲ್ಲಾ ಸಾದ್ಯವೋ ಆ ರೀತಿಯೆಲ್ಲಾ  ಉಪಯೋಗಿಸಿ ಕೊಂಡಿದ್ದೇವೆ.  ಒಂದೇ ಎರಡೇ ಹಲವು ರೀತಿಯ ಮಾಲಿನ್ಯಗಳು ನಿಯಂತ್ರಣ ಮೀರಿ  ನಡೆಯುತ್ತಿದೆ. ವಾಯು, ಜಲ, ಶಬ್ದ ಮಾಲಿನ್ಯ ಗಳು ಸೇರಿ ಪರಿಸರವನ್ನು ಹಾಳುಗೆಡವುತ್ತಿದ್ದೇವೆ.  ಇದರ ಕುರಿತು ಜಾಗೃತಿ ಮೂಡಿಸುವ  ಸಲುವಾಗಿ ವಿಶ್ವದಾದ್ಯಂತ ಜೂನ್ 5 ರಂದು   ‘ವಿಶ್ವ ಪರಿಸರ ದಿನ’ ವೆಂದು ಆಚರಿಸಲಾಗುತ್ತದೆ.  1974  ನೇ ಇಸವಿಯಿಂದ ಈ ಆಚರಣೆ ಆರಂಭವಾಯಿತು.   ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ರೀತಿಯ ಕಾರ್ಯಗಳನ್ನು ಜಗತ್ತಿನಾದ್ಯಂತ ಹಮ್ಮಿ ಕೊಳ್ಳಲಾಗುತ್ತಿದೆ.
ಅನಿರೀಕ್ಷಿತವಾಗಿ  ಬಂದೆರಗಿದ   ಕೋವಿಡ್, ಜನರನ್ನು  ಪರಿಸರದತ್ತ ಮುಖ ಮಾಡುವಂತೆ ಮಾಡಿದೆ.   ಕೃತಕತೆಯಿಂದ ಹೊರಬಂದು ನೈಜತೆಯಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳ ಬೇಕಾದ ಅಗತ್ಯ ಮನಗಾಣುವ ಸಮಯ ಮನುಜನದ್ದು.  ಮನಸು‌ ಶುದ್ಧ ವಾಗಿದ್ದಾಗ ನೋಡುವ ದೃಷ್ಟಿ ಯೂ ಶುದ್ಧವಾಗಿರುತ್ತದೆ. ಮನಸಿನ ಕೊಳಕನ್ನು ದೂರ ಮಾಡಿ ಪರಿಸರದತ್ತ ಮುಖ ಮಾಡುವುದೇ  ನಾವು ಪ್ರಕೃತಿಗೆ  ಕೊಡುವ ಉಡುಗೊರೆ.
“ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆ” ಈ ಬಾರಿಯ ಘೋಷ ವಾಕ್ಯ.
ಬನ್ನಿ ಪ್ರಕೃತಿಯ  ಮತ್ತೆ ಹಸಿರು ಮಾಡುವಲ್ಲಿ ಕೈ ಜೋಡಿಸೋಣ ಆಗದೇ?
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

9 hours ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

23 hours ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

1 day ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

1 day ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

2 days ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

2 days ago