Opinion

#WorldHeartDay | ವಿಶ್ವ ಹೃದಯ ದಿನ – ಹೃದಯವನ್ನು ಬಳಸಿ ಹೃದಯವನ್ನು ತಿಳಿಯಿರಿ |

Share

ಇಂದು ವಿಶ್ವ ಹೃದಯ ದಿನ (world Heart day). ಇತ್ತೀಚಿನ ದಿನಗಳಲ್ಲಿ ಸಾವಿಗೆ ದೊಡ್ಡ ಕಾರಣವಾಗಿರುವ ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜನರಿಗೆ ತಿಳಿಸಲು ‘ವರ್ಲ್ಡ್ ಹಾರ್ಟ್ ಫೌಂಡೇಶನ್’ ಪ್ರತಿ ವರ್ಷ ಸೆಪ್ಟೆಂಬರ್ 29ರಂದು ನಡೆಸುವ ಅಂತರಾಷ್ಟ್ರೀಯ ಅಭಿಯಾನವೇ ವಿಶ್ವ ಹೃದಯ ದಿನ. ಹೃದಯಕ್ಕೆ ಸಂಬಂಧಸಿದ ಕಾಯಿಲೆಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳು ಮತ್ತು ಜಾಗ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ

Advertisement

ಹೃದಯವು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ ಪ್ರತಿಯೊಬ್ಬರೂ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅವಶ್ಯಕ. ಹೃದಯ ರಕ್ತನಾಳದ ಆರೋಗ್ಯ ಮತ್ತು ಕೆಲವು ಜೀವನ ಶೈಲಿಯ ಅಭ್ಯಾಸಗಳ ಬಗ್ಗೆ ಅರಿವಿನ ಕೊರತೆಯಿಂದಾಗಿ ಹೃದಯ ರಕ್ತನಾಳದ ಕಾಯಿಲೆಗಳು ವಿಶ್ವದಾದ್ಯಂತ ಮರಣಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 1.7 ಕೋಟಿ ಜನರು ಹೃದಯದ ರಕ್ತನಾಳದ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ.

 ಈ ವರ್ಷ ವಿಶ್ವ ಹೃದಯ ದಿನದ ಮುಖ್ಯ ಥೀಮ್ :– ಹೃದಯವನ್ನು ಬಳಸಿ ಹೃದಯವನ್ನು ತಿಳಿಯಿರಿ ಹೃದಯಕ್ಕಾಗಿ ಆಯುರ್ವೇದ  ಇಂದಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿ ಸಂಭವಿಸುವ ಹೃದಯಾಘಾತ (Heart attack ), ಪಾರ್ಶ್ವವಾಯು,ಹೃದಯದ ರಕ್ತನಾಳಗಳ ಕಾಯಿಲೆಗಳು ಮೊದಲಾದ ಹ್ರದ್ರೋಗಗಳಿಗೆ ಕಾರಣವಾಗಿರುವ ಕೆಲವು ಅಪಾಯಕಾರಿ ಅಂಶಗಳು ಹೀಗಿದೆ, ಅತಿಯಾದ ರಕ್ತದೊತ್ತಡ,  ಅತಿಯಾದ ಬೊಜ್ಜು,  ಅನಿಯಂತ್ರಿತ ಮಧುಮೇಹ, ಅತಿ ಧೂಮಪಾನ, ಅತಿಯಾದ ಮದ್ಯಪಾನ , ಮಾನಸಿಕ ಒತ್ತಡ , ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿ ಇತ್ಯಾದಿ.

ಹೃದ್ರೋಗಕ್ಕೆ ಹಲವಾರು ಆಯುರ್ವೇದ ಚಿಕಿತ್ಸೆಗಳಿವೆ. ರೋಗ ನಿರ್ಣಯ ಮಾಡಿ ಅದರ ಕಾರಣಕ್ಕನುಸಾರವಾಗಿ ಹೃದ್ರೋಗದ ಪ್ರಕಾರವನ್ನು ಅರಿತು ಅದರ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.

ಹೃದಯ ಬೆಂಬಲ ಚಿಕಿತ್ಸೆಗಳು: ಪಂಚಕರ್ಮ,ಯೋಗ, ಪ್ರಾಣಾಯಾಮ ಮತ್ತು ಧ್ಯಾನದಂತಹ ಆಯುರ್ವೇದ ಚಿಕಿತ್ಸೆಗಳು ನರಮಂಡಲದ ಮೇಲೆ ಪ್ರಭಾವವನ್ನು ಬೀರಿ, ಒತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಪ್ರೇರೇಪಿಸುತ್ತವೆ -ಸಮತೋಲಿತ ಆಹಾರ  ಹಣ್ಣು ತರಕಾರಿಗಳ ಸಮರ್ಪಕ ಸೇವನೆ ಹಾಗೂ ಅತಿಯಾದ ಕೊಬ್ಬು, ಜಂಕ್ ಫುಡ್ ಇವುಗಳ ನಿಷಿದ್ಧ. ಗಿಡಮೂಲಿಕೆ ಪರಿಹಾರ ಮತ್ತು ಆಯುರ್ವೇದ ಔಷಧಗಳು ಹೃದಯಕ್ಕೆ ಆಯುರ್ವೇದ ಔಷಧಿಗಳು ರೋಗಿಯ ಮೂಲ ಕಾರಣವನ್ನು ಗುರಿಯಾಗಿರಿಸಿಕೊಂಡು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಆಮಲಕಿ, ಹರಿದ್ರ, ಅರ್ಜುನ, ಅಶ್ವಗಂಧ ಮೊದಲಾದ ಪ್ರಮುಖ ಗಿಡಮೂಲಿಕೆಗಳು ಹೃದಯ ಕಾರ್ಯವನ್ನು ಸುಧಾರಿಸಲು ಸಹಾಯಕಾರಿಯಾಗಿವೆ. ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಅರಿತು ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಆಯುರ್ವೇದ ಔಷಧ,ಪಂಚಕರ್ಮ ಯೋಗ, ಧ್ಯಾನ,ಪ್ರಾಣಾಯಾಮ ಉತ್ತಮ ಜೀವನ ಶೈಲಿ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡು ಹೃದಯದ ಕಾಳಜಿಯನ್ನು ವಹಿಸಿ ಹೃದಯದ ಕಾಯಿಲೆಯನ್ನು ತಡೆಗಟ್ಟುವುದು ಅತ್ಯವಶ್ಯಕ. ಹೃದಯ ಆರೋಗ್ಯವಾಗಿದ್ದರೆ ಅದುವೇ ಜೀವನ.

ಬರಹ :
ಡಾ. ಜ್ಯೋತಿ. ಕೆ, ಮಂಗಳೂರು, 94481 68053
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

5 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

6 hours ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

7 hours ago

ಹೊಸರುಚಿ | ಗುಜ್ಜೆ ಕಡಲೆ ಗಸಿ

ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…

7 hours ago

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …

7 hours ago

ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಸಮಿತಿ ಹಲವು  ಮಹತ್ವದ ನಿರ್ಧಾರಗಳನ್ನು…

7 hours ago