ವಿಶ್ವ ಜೇನುಹುಳು ದಿನ | ಜೇನು ಹುಳುಗಳ ಉಳಿವು ಪ್ರಕೃತಿಯ ಉಳಿವು |

May 20, 2021
8:23 PM
ಅಮ್ಮನ ಹಾಲಿನಷ್ಟೇ ಶುದ್ಧವಾದ ಆಹಾರವೆಂದರೆ ಜೇನು.  ಪುಟ್ಟ ಮಕ್ಕಳಿಗೆ ಜೇನು ನೆಕ್ಕಿಸಿ ಹಿರಿಯರು ಆಶೀರ್ವದಿಸುವುದು ನಮ್ಮ ಭಾರತೀಯ ಕ್ರಮ. ಇದರಿಂದಲೇ ಜೇನಿನ ಪ್ರಾಮುಖ್ಯತೆಯ ಅರಿವಾಗುತ್ತದೆ. ಜೇನುಹುಳುಗಳು ಕೂಡು ಕುಟುಂಬದ ಸಂಕೇತ. ಖುಷಿ ಖುಷಿಯಾಗಿ  ಒಂದಾಗಿ ಇರುವ  , ಜೊತೆಯಾಗಿ ದುಡಿಯುವ ಈ ಜೇನು ನೊಣಗಳು ಕ್ರಿಯಾಶೀಲತೆ ಉತ್ತಮ ಉದಾಹರಣೆ.
ಇಂದು ಮೇ 20. ” ವಿಶ್ವ ಜೇನು ಹುಳು ದಿನ” . 2018 ನೇ ಇಸವಿಯಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯು  ಈ ದಿನದ ಆಚರಣೆಗೆ ಚಾಲನೆ ನೀಡಿತು.  ಗಮನೀಯವಾಗಿ ಕುಸಿಯುತ್ತಿರುವ ಜೇನುನೊಣಗಳ ಸಂತತಿಯ ಉಳಿವಿನ ಅಗತ್ಯವನ್ನು ಮನಗಾಣಿಸುವ ಪ್ರಯತ್ನವಾಗಿ ಈ ಆಚರಣೆ.  ಸ್ಲೋವೆನಿಯಾದ ಮಹಾನ್ ಜೇನು ಕೃಷಿಕ  ಆಂಟೆನ್ ಜಾನಿಯಾ  ಜನ್ಮ ದಿನ.  20 ಮೇ 1734.  ಈ ವರ್ಷದ ಘೋಷ ವಾಕ್ಯ Bee engaged, Biid back better for bees.” ಜೇನು ಹುಳುಗಳ ಉಳಿವಿಗಾಗಿ ಸೂಕ್ತ ತಾಣವನ್ನು ನಿರ್ಮಿಸೋಣ.
ಸುಮಾರು 20,000  ವಿವಿಧ ಜಾತಿಯ ಜೇನು ನೊಣಗಳಿವೆ.  ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಚೈನಾ, ಟರ್ಕಿಗಳು ಪ್ರಮುಖವಾಗಿ ಜೇನು ಉತ್ಪಾದನೆ ರಾಷ್ಟ್ರಗಳಾಗಿವೆ. ಜೇನು ಹುಳುಗಳು ನಮ್ಮ ಕೃಷಿ ಚಟುವಟಿಕೆಗಳ ಯಶಸ್ವಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಹಣ್ಣು , ತರಕಾರಿಗಳಿರಲಿ, ಅಡಿಕೆ ತೆಂಗು ಹೂವುಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನು ನೊಣಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.  ತಮ್ಮ ಆಹಾರಕ್ಕಾಗಿ ಹೂವುಗಳ ಮಕರಂದವನ್ನು ಹೀರುವ ಜೇನು ಹುಳುವಿನ  ಪ್ರಕ್ರಿಯೆಯು ಪರಾಗಸ್ಪರ್ಶಕ್ಕೆ ಕಾರಣವಾಗುತ್ತದೆ. ರಾಸಾಯನಿಕ ಕ್ರಿಮಿನಾಶಕಗಳ ಬಳಕೆ ಕಡಿಮೆಯಾದಾಗ ಜೇನು ನೊಣಗಳು ಜಾಸ್ತಿ ಕ್ರಿಯಾಶೀಲವಾಗಿರುತ್ತವೆ.
ಜೇನು ಹುಳುಗಳ ಉಳಿವು ಪ್ರಕೃತಿಯ ಉಳಿವು ಎಂಬುದನ್ನು  ಅರ್ಥಮಾಡಿಕೊಳ್ಳೋಣ.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬದುಕು ಪುರಾಣ | ಕೃಷ್ಣ ಬಂದ, ನೋಡಲಾಗಲಿಲ್ಲ..!
August 17, 2025
6:34 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಸ್ವಾತಂತ್ರ್ಯಕ್ಕಾಗಿ ಮದುವೆ
August 14, 2025
8:43 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group