ಆರೋಗ್ಯಕರ ಮಣ್ಣಿನಿಂದ ಆರೋಗ್ಯಕರ ನಗರಗಳು ಎಂಬ ಈ ವರ್ಷದ ಧ್ಯೇಯ ವಾಕ್ಯದೊಂದಿಗೆ ಮಣ್ಣು ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜಿಕೆವಿಕೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಮಣ್ಣು ವಿಜ್ಞಾನ ಹಾಗೂ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಇಂಪಾಲ್ ನ ಮಾಜಿ ಸಂಶೋಧನಾ ನಿರ್ದೇಶಕ ಡಾ. ಸಿ ಎ ಶ್ರೀನಿವಾಸಮೂರ್ತಿ ಮಾತನಾಡಿ, ಯಶಸ್ವಿ ತೋಟಗಾರಿಕಾ ಉದ್ಯಮಗಳಿಗೆ ಮಣ್ಣಿನ ಪ್ರಾಮುಖ್ಯತೆ ಮತ್ತು ನಿರ್ವಹಣೆ ಕುರಿತು ಉಪನ್ಯಾಸ ನೀಡಿ ತೋಟಗಾರಿಕಾ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ವಿಭಿನ್ನ ತಳಿಗಳನ್ನು ತಿಳಿಸಿದರು.
ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ ದಿನಕರ ಅಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್ಚಿನ ಬೆಳೆ ಉತ್ಪಾದಕತೆಯನ್ನು ಸಾಧಿಸಲು ಆರೋಗ್ಯಕರ ಮಣ್ಣಿನ ಅಗತ್ಯತೆ, ಸಾವಯವ ಗೊಬ್ಬರದ ವಿಧಾನಗಳ ಮೂಲಕ ಮಣ್ಣಿನ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುವ ವಿಧಾನಗಳ ಬಗ್ಗೆ ತಿಳಿಸಿದರು.

ಇದೇ ವೇಳೆ ಸುಳ್ಯ, ಪುತ್ತೂರು ತಾಲೂಕಿನ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಯಿತು. ಆರ್ ಕೆ ವಿ ವೈ ಯೋಜನೆ ಅಡಿ ಗೇರು ಕೃಷಿಯಲ್ಲಿ ಮಾದರಿ ಗ್ರಾಮವಾಗಿ ಆಯ್ಕೆಯಾದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೇರು ಕೃಷಿಕರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾದ ಗ್ರಾಮದ ಕೃಷಿಕರಿಗೆ ಹಾಗೂ ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಿಬ್ಬಂದಿಗಳು ಹಾಗೂ ಸದಸ್ಯರಿಗೆ ಮಣ್ಣಿನ ಮಾದರಿ ತಂತ್ರಗಳ ಕುರಿತು ಜಾಗೃತಿ ಮೂಡಿಸಲು ಮಣ್ಣು ಪರೀಕ್ಷೆಗೆ ಮಾದರಿ ತೆಗೆಯುವ ಕುರಿತು ಪ್ರಾತ್ಯಕ್ಷಿಕೆಯನ್ನು ಹೆಚ್ ಪಿ ವಿಜ್ಞಾನಿ ತೋಟಗಾರಿಕೆ ಡಾ. ಭಾಗ್ಯ ನಡೆಸಿಕೊಟ್ಟರು.
ವಿಶೇಷ ಅತಿಥಿಗಳಾಗಿ ಜಯರಾಮ ಕೆ ಇ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಮಂಗಳೂರು, ಪ್ರಸಾದ್ ಶೆಟ್ಟಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕೇಂದ್ರ ವಿಟ್ಲ , ಹರಿಪ್ರಸಾದ್ ಸಂಜೀವಿನಿ ಎನ್ ಆರ್ ಎಲ್ ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಜಿಲ್ಲಾ ಪಂಚಾಯತ್ ಮಂಗಳೂರು ಉಪಸ್ಥಿತರಿದ್ದರು.
85 ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷರು ಸುಮತಿ ಶಕ್ತಿವೇಲು, ಉಪಾಧ್ಯಕ್ಷರು ಹನೀಫ್ ಎಸ್ ಕೆ, ಕಾಂತಿ ಬಿ ಎಸ್, ಸೌಮ್ಯ, ಭಾರತಿ, ಮಾಲತಿ, ಸಂಜೀವಿನಿ ಸಿಬ್ಬಂದಿಗಳು, ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಭಾಗವಹಿಸಿದ್ದರು. ಜಗದೀಶ್ ಕೆಪಿ ಸಹಕರಿಸಿದರು.
ಡಾ. ವೆಂಕಟೇಶ್ ಎಂ ಪ್ರಧಾನ ವಿಜ್ಞಾನಿ ಮಣ್ಣು ಶಾಸ್ತ್ರ ಸ್ವಾಗತಿಸಿ, ಡಾ. ವೀಣಾ ಜಿ ಎಲ್ ಹಿರಿಯ ವಿಜ್ಞಾನಿ ತೋಟಗಾರಿಕೆ ವಂದಿಸಿ, ಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.



